ಹಾವೇರಿ: ಜಿಲ್ಲೆಯ ರಾಣೇಬೆನ್ನೂರಿನ ಅನ್ನದಾತರಿಗೆ ಕಳ್ಳರ ಕಾಟಕ್ಕೆ ರಾತ್ರಿಯಿಡೀ ದೊಣ್ಣೆ ಹಿಡಿದುಕೊಂಡು ಬೆಳ್ಳುಳ್ಳಿ ಕಾಯುವ ಪರಿಸ್ಥಿತಿ ಬಂದಿತ್ತು. ಈಗ ಹಲಗೇರಿ ಪಿಎಸ್‍ಐ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಇಬ್ಬರು ಬೆಳ್ಳುಳ್ಳಿ ಕಳ್ಳರ ಬಂಧಿಸಿದ್ದಾರೆ.
ಬಂಧಿತ ದೇವಲಪ್ಪ ಚಿಕ್ಕಮಾಗಡಿ ಅಲಿಯಾಸ್ ಲಮಾಣಿ 50 ವರ್ಷ ಮತ್ತು ಕರಬಸಪ್ಪ ಚಿಕ್ಕಮಾಗಡಿ ಅಲಿಯಾಸ್ ಲಮಾಣಿ 40 ವರ್ಷ ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಂದು ಲಕ್ಷ ರೂ. ಮೌಲ್ಯದ ಬೆಳ್ಳುಳ್ಳಿ ಮತ್ತು ಕಳ್ಳತನಕ್ಕೆ ಬಳಸಿದ್ದ ಒಂದು ಬೈಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಬೆಳ್ಳುಳ್ಳಿಯನ್ನು ರಕ್ಷಿಸಲು ದೊಣ್ಣೆ ಹಿಡಿದುಕೊಂಡು ಕುಳಿತ ರೈತರು
Advertisement
Advertisement
ಕಳೆದ ಹತ್ತು ದಿನಗಳ ಹಿಂದೆ ಮಣಕೂರ ಗ್ರಾಮದ ರೈತರ ಜಮೀನಿನಲ್ಲಿ ರಾಶಿ ಮಾಡಲು ಹಾಕಿದ್ದ ವೇಳೆ ಬೆಳ್ಳುಳ್ಳಿ ಖದೀಮರು ಕದ್ದುಕೊಂಡು ಹೋಗಿದ್ದರು. ಇದರಿಂದ ರೈತರು ಕಳ್ಳರಿಗೆ ಹೆದರಿ ದೊಣ್ಣೆ ಹಿಡಿದುಕೊಂಡು ರಾತ್ರಿಯಿಡೀ ಬೆಳ್ಳುಳ್ಳಿ ಕಾವಲು ಕಾಯುತ್ತಿದ್ದರು. ಪೊಲೀಸರು ಈಗ ಕಳ್ಳರನ್ನು ಬಂಧಿಸಿದ್ದಕ್ಕೆ ಅನ್ನದಾತರು ಸ್ವಲ್ಪ ನಿಟ್ಟಿಸಿರು ಬಿಟ್ಟಿದ್ದಾರೆ. ಪಿಎಸ್‍ಐ ಸಿದ್ಧರೂಢ ಬಡಿಗೇರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
Advertisement
ಬೆಳ್ಳುಳ್ಳಿ ಕದಿಯುತ್ತಿದ್ದಿದ್ದು ಏಕೆ?
ಬೆಳ್ಳುಳ್ಳಿಗೆ ಈಗ ಮಾರುಕಟ್ಟೆಯಲ್ಲಿ ಬಂಪರ್ ಬೆಲೆ ಇದೆ. ಪ್ರತಿ ಕ್ವಿಂಟಾಲ್ ಬೆಳ್ಳುಳ್ಳಿ ಕನಿಷ್ಟ 10 ಸಾವಿರದಿಂದ ಗರಿಷ್ಠ 18 ಸಾವಿರದವರೆಗೆ ಮಾರಾಟ ಆಗುತ್ತಿದೆ. ಹೀಗಾಗಿ ಬೆಳ್ಳುಳ್ಳಿ ಮೇಲೆ ಖದೀಮರ ಕಣ್ಣು ಬಿದ್ದಿತ್ತು. ರಾತ್ರೋರಾತ್ರಿ ರೈತರ ಜಮೀನುಗಳಿಗೆ ಎಂಟ್ರಿ ಕೊಟ್ಟು ಖದೀಮರು ಬೆಳ್ಳುಳ್ಳಿ ಕದ್ದುಕೊಂಡು ಹೋಗುತ್ತಿದ್ದರು. ಇದರಿಂದಾಗಿ ರೈತರು ಬೆಳ್ಳುಳ್ಳಿ ಕಾಯುವ ಕೆಲಸದಲ್ಲಿ ನಿರತರಾಗಿದ್ದರು.