ಬೆಳಗ್ಗಿನ ಉಪಹಾರಕ್ಕೆ ಏನು ಮಾಡುವುದು ಎಂದು ನೀವು ಯೋಚಿಸುತ್ತಿದ್ದಿರಾ? ಚಳಿ ಇರುವುದರಿಂದ ಬಿಸಿಯಾಗಿ ಟೀ, ಕಾಫಿ ಜೊತೆಗೆ ಬೆಳ್ಳುಳ್ಳಿ ರೈಸ್ ಮಾಡಿದರೆ ಸಖತ್ ರುಚಿಯಾಗಿರುತ್ತದೆ. ಬೆಳ್ಳುಳ್ಳಿ ರೈಸ್ ಮಾಡುವುದು ಎಷ್ಟು ಸುಲಭವೋ ಅಷ್ಟೇ ರುಚಿಯಾಗಿರುತ್ತದೆ.
Advertisement
ಬೇಕಾಗುವ ಸಾಮಗ್ರಿಗಳು:
* ಬೆಳ್ಳುಳ್ಳಿ- 4 ರಿಂದ 6
* ಸಾಸಿವೆ- 1 ಚಮಚ
* ಅಡುಗೆ ಎಣ್ಣೆ- ಅರ್ಧ ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಅನ್ನ- 2 ಕಪ್
* ಹಸಿ ಮೆಣಸು- 3
* ಉದ್ದಿನ ಬೆಳೆ- ಅರ್ಧ ಚಮಚ
* ಕಡಲೆ ಬೆಳೆ- ಅರ್ಧ ಚಮಚ
* ಕರಿಬೇವು- ಸ್ವಲ್ಪ
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಈರುಳ್ಳಿ- 1
Advertisement
Advertisement
ಮಾಡುವ ವಿಧಾನ:
* ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಅಡುಗೆ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕಾದ ನಂತರ ಅದರಲ್ಲಿ ಬೆಳ್ಳುಳ್ಳಿಯನ್ನು ಹಾಕಿ ಫ್ರೈ ಮಾಡಬೇಕು
* ನಂತರ ಸಾಸಿವೆ ಹಾಕಿ, ಕರಿಬೇವು, ತೊಗರಿ ಬೇಳೆ, ಕಡಲೆ ಬೇಳೆ, ಒಣ ಮೆಣಸು ಮುರಿದು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದನ್ನೂ ಓದಿ: ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ
Advertisement
* ಈ ಮಸಾಲೆ ಚೆನ್ನಾಗಿ ಫ್ರೈ ಆದ ನಂತರ ಈರುಳ್ಳಿ, ಹಸಿಮೆಣಸು ಹಾಕಿ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿಕೊಳ್ಳಬೇಕು. ಫ್ರೈ ಮಾಡಿದ ಬೆಳ್ಳುಳ್ಳಿ ಸೇರಿಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಕ್ಸ್ ಮಾಡಿ, ಗ್ಯಾಸ್ ಆಫ್ ಮಾಡಿ. ಇದನ್ನೂ ಓದಿ: ಸರಳ, ರುಚಿಯಾದ ಬೆಳ್ಳುಳ್ಳಿ ಚಟ್ನಿ ಮಾಡಲು ಟ್ರೈ ಮಾಡಿ
* ಈಗ ಅನ್ನ ಹಾಕಿ, ಮಿಕ್ಸ್ ಮಾಡಿ ಸ್ವಲ್ಪ ನಿಂಬೆ ರಸ ಹಿಂಡಿ ಮತ್ತೊಮ್ಮೆ ಚೆನ್ನಾಗಿ ಕಲಸಿ. ಬೇಕಿದ್ದರೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಬೆಳ್ಳುಳ್ಳಿ ರೈಸ್ ಸವಿಯಲು ಸಿದ್ಧವಾಗುತ್ತದೆ.