ಬೆಳ್ಳುಳ್ಳಿ ಆರೋಗ್ಯಕ್ಕೆ ಒಳ್ಳೆಯದು. ಆದರೆ ಮಕ್ಕಳು, ಮನೆಯವರು ಯಾರು ಅಷ್ಟಾಗಿ ಬೆಳ್ಳುಳ್ಳಿ ತಿನ್ನುವುದಿಲ್ಲ. ಈಗ ಹೇಗಿದ್ದರೂ ಕೊರೊನಾ ಲಾಕ್‍ಡೌನ್‍ನಿಂದ ಮನೆಯಲ್ಲಿದ್ದೀರಿ. ಆದ್ದರಿಂದ ದೋಸೆ, ಚಪಾತಿ, ರೊಟ್ಟಿಗೆ ಬೆಳ್ಳುಳ್ಳಿ ಚಟ್ನಿ ಮಾಡಿ. ಕೆಲವೇ ನಿಮಿಷದಲ್ಲಿ ಬೆಳ್ಳುಳ್ಳಿ ಚಟ್ನಿ ಮಾಡುವ ವಿಧಾನ ಇಲ್ಲಿದೆ….
ಬೇಕಾಗುವ ಸಾಮಗ್ರಿಗಳು
1. ಬ್ಯಾಡಗಿ ಮೆಣಸಿನಕಾಯಿ – 15
2. ಬೆಳ್ಳುಳ್ಳಿ – 20 ಎಸಳು
3. ಟೊಮೆಟೊ – 1
4. ಉಪ್ಪು- ರುಚಿಗೆ ತಕ್ಕಷ್ಟು
5. ಎಣ್ಣೆ- 2 ಟೀ ಸ್ಪೂನ್
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಬ್ಯಾಡಗಿ ಮೆಣಸಿನಕಾಯಿಯನ್ನು ನೀರಿನಲ್ಲಿ ಒಂದು ಗಂಟೆ ನೆನೆಸಿಟ್ಟುಕೊಳ್ಳಿ.
* ಒಂದು ಗಂಟೆ ಬಳಿಕ ಮಿಕ್ಸಿ ಜಾರಿಗೆ ನೆನೆಸಿಟ್ಟುಕೊಂಡಿರುವ ಮೆಣಸಿನಕಾಯಿ, ಬೆಳ್ಳುಳ್ಳಿ, ಕತ್ತರಿಸಿ ಟೊಮೆಟೊ ಮತ್ತು ಉಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. (ರುಬ್ಬಿಕೊಳ್ಳುವಾಗ ನೀರು ಹಾಕಿಕೊಳ್ಳಬಾರದು)
* ಸ್ಟೌವ್ ಮೇಲೆ ಒಂದು ಪ್ಯಾನ್ ಇಟ್ಟಿಕೊಂಡು ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ರುಬ್ಬಿಕೊಂಡು ಮಿಶ್ರಣ ಸೇರಿಸಿ. ಈಗ ಅರ್ಧ ಕಪ್ ನೀರು ಹಾಕಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ.
* ಮಿಶ್ರಣ ಗಟ್ಟಿಯಾಗುವರೆಗೂ ಕಡಿಮೆ ಉರಿಯಲ್ಲಿ ಫ್ರೈ ಮಾಡಿದ್ರೆ ಬೆಳ್ಳುಳ್ಳಿ ಚಟ್ನಿ ರೆಡಿ.
* ಈ ಬೆಳ್ಳುಳ್ಳಿ ಚಟ್ನಿಯನ್ನ ಬಿಸಿ ಬಿಸಿಯಾದ ದೋಸೆ, ಜೋಳದ ರೊಟ್ಟಿ, ಚಪಾತಿ ಮತ್ತು ವೈಟ್ ರೈಸ್ ಜೊತೆ ತಿನ್ನಬಹುದು.