ಬೆಂಗಳೂರು: ಕಸ ಹಾಕುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನನಾಯಕನ ಪಾಳ್ಯದಲ್ಲಿ ನಡೆದಿದೆ.
Advertisement
ನಿವೃತ್ತ ಎಎಸ್‍ಐ ಜವರೇಗೌಡ, ಮಕ್ಕಳಾದ ಆನಂದ್ ಪಾಪು, ಮಗಳು ಕೋಮಲ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಅನಿತಾ ಹಾಗೂ ಕುಟುಂಬಸ್ಥರ ಮೇಲೆ ಜವರೇಗೌಡ ಫ್ಯಾಮಿಲಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಆಮ್ ಆದ್ಮಿ, ಕಾಂಗ್ರೆಸ್ ಪಕ್ಷದ Xerox Copy: ಮೋದಿ ವ್ಯಂಗ್ಯ
Advertisement
Advertisement
ಚನ್ನನಾಯಕನ ಹಳ್ಳಿಯಲ್ಲಿ ಅನಿತಾ ಅವರು ಗಾರ್ಮೆಂಟ್ಸ್ ಹೊಂದಿದ್ದು, ಕಳೆದ ಮೂರುವರೆ ವರ್ಷದ ಹಿಂದೆ ಗಾರ್ಮೆಂಟ್ಸ್ ಆರಂಭವಾಗಿತ್ತು. ರೆಸಿಡೆನ್ಷಿಯಲ್ ಏರಿಯಾದಲ್ಲಿ ಗಾರ್ಮೆಂಟ್ಸ್ ಹೊಂದಿದ್ದರಿಂದ ಜವರೇಗೌಡ ಪ್ರಶ್ನಿಸಿದ್ದರು. ಹಾಗಾಗಿ ಇತ್ತೀಚೆಗೆ ಗಾರ್ಮೆಂಟ್ಸ್ ಶಿಫ್ಟ್ ಮಾಡಲು ಅನಿತಾ ಅವರು ಸಿದ್ಧತೆ ನಡೆಸುತ್ತಿದ್ದರಂತೆ. ಅಲ್ಲದೇ ಎಎಸ್‍ಐ ಮನೆ ಹಿಂದೆ ಖಾಲಿ ಜಾಗ ಕೂಡ ಇದ್ದು, ಆ ಖಾಲಿ ಜಾಗದಲ್ಲಿ ಸ್ಥಳೀಯರು ಕಸ ತಂದು ಹಾಕುತ್ತಿದ್ದರು. ಗಾರ್ಮೆಂಟ್ಸ್ ಆರಂಭವಾದ ಮೇಲೆ ಆ ಖಾಲಿ ಜಾಗಕ್ಕೆ ಜನ ಬಂದು ಕಸ ಹಾಕುತ್ತಿದ್ದಾರೆಂದು ಕೋಪಗೊಂಡು ಎಎಸ್‍ಐ ಕುಟುಂಬ ಮತ್ತು ಅನಿತಾ ಕುಟುಂಬದ ನಡುವೆ ಆಗಾಗ ಜಗಳವಾಗುತ್ತಿತ್ತು.
Advertisement
ಕಳೆದ ಗುರವಾರ ಅನಿತಾ ಕುಟುಂಬ ಮಂತ್ರಾಲಯಕ್ಕೆ ತೆರಳಿದ್ದ ವೇಳೆ ಶುಕ್ರವಾರ ಬೆಳಗ್ಗೆ ಲಕ್ಷ್ಮಮ್ಮ ನಿಂಬೆಹಣ್ಣು ಹಾಕಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನು ಕಂಡು ವಾಮಾಚಾರ ಮಾಡಿದ್ದಾರೆಂದು ಆರೋಪಿಸಿ ಅನಿತಾ ಕುಟುಂಬ ಪ್ರಶ್ನಿಸಿದೆ. ಈ ಕಾರಣ ಎರಡು ಕುಟುಂಬಸ್ಥರ ಮಧ್ಯೆ ಮಾರಾಮಾರಿಯಾಗಿದೆ. ಅನಿತಾ ಕುಟುಂಬಸ್ಥರ ಮೇಲೆ ಜವರೇಗೌಡ ಕುಟುಂಬ ಹಲ್ಲೆ ಮಾಡಿದ್ದಾರೆ ಎಂದು ಸಿಸಿಟಿವಿ ದೃಶ್ಯ ಸಮೇತ ದೂರು ನೀಡಿದ್ದಾರೆ. ಸದ್ಯ ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ವಿಭಜಕ ಮನಸ್ಥಿತಿಯ ಜನರನ್ನು ಪಂಜಾಬ್‍ನಲ್ಲಿ ಆಳಲು ಬಿಡಬೇಡಿ: ಮೋದಿ