ನಿಮ್ಮ ಹೊಟ್ಟೆನೋವಿನ ಬಗ್ಗೆ ಪಕ್ಷದ ವೇದಿಕೆಯಲ್ಲಿ ಕಕ್ಕೋದು ಒಳ್ಳೆಯದು – ರವಿ ಗಣಿಗ

Public TV
1 Min Read
Ganiga Ravikumar

ಬೆಂಗಳೂರು: ಯಾರಿಗೆ ಯಾವ ಹೊಟ್ಟೆನೋವು ಇದೆಯೋ ಗೊತ್ತಿಲ್ಲ. ಅದನ್ನು ಪಕ್ಷದ ವೇದಿಕೆಯಲ್ಲಿ ಕಕ್ಕೋದು ಒಳ್ಳೆಯದು ಎಂದು ಮಂಡ್ಯ ಶಾಸಕ ರವಿ ಗಣಿಗ (Ravi Ganiga) ತಿರುಗೇಟು ನೀಡಿದ್ದಾರೆ.ಇದನ್ನೂ ಓದಿ: ಬಹಿರಂಗ ಹೇಳಿಕೆ ನೀಡುವ ಶಾಸಕರೇ ಹುಷಾರ್! ಕಾಂಗ್ರೆಸ್ ಹೈಕಮಾಂಡ್ ವಾರ್ನಿಂಗ್ ಕಾಲ್?

ಡಿಕೆಶಿ (DK Shivakumar) ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 6-7 ಬಾರಿ ಗೆದ್ದಿದ್ದಾರೆ, ಹಿರಿಯ ಶಾಸಕರಿದ್ದಾರೆ. ಮನೆ ಮಂಜೂರು ಮಾಡಲು ಹಣ ಪಡೆಯುವಷ್ಟು ದರಿದ್ರ ನಮ್ಮ ಸರ್ಕಾರಕ್ಕೆ ಬಂದಿಲ್ಲ. 2022ರಲ್ಲಿ ಆಯ್ಕೆಯಾದವರಿಗೆ ಈಗ ಮನೆ ನೀಡಲಾಗುತ್ತಿದೆ. ಆಗ ಮನೆ ಮಂಜೂರಾಗಿದ್ದನ್ನು ಈಗ ಬದಲಾವಣೆ ಮಾಡಲು ಸಾಧ್ಯವಿಲ್ಲ. ಬಡವರಿಂದ ಹಣ ಪಡೆಯುವ ದರಿದ್ರ ಜಮೀರ್‌ಗಿಲ್ಲ. ಜಮೀರ್ (Zameer Ahmed) ಸಾಕಷ್ಟು ದಾನ-ಧರ್ಮ ಮಾಡಿದ್ದಾರೆ ಎಂದು ಸಚಿವರ ಪರ ಬ್ಯಾಟಿಂಗ್ ಮಾಡಿದರು.

ಇದೇ ವೇಳೆ ಅನುದಾನಕ್ಕೆ ಡಿಕೆಶಿ ಕೃಪಾಶೀರ್ವಾದ ಎಂಬ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿಕೆಶಿ, ಸಿಎಂ ಅವರು ಅನುದಾನ ಕೊಟ್ಟಿದ್ದಾರೆ. ಒಂದು ಸಾವಿರ ಕೋಟಿ ರೂ. ಅನುದಾನ ಕ್ಷೇತ್ರಕ್ಕೆ ಸಿಕ್ಕಿದೆ. ದಿನ ಗುದ್ದಲಿ ಪೂಜೆ ಆಗುತ್ತಿದೆ. ಸಿಎಂ ಹಣಕಾಸು ಸಚಿವರು, ಅವರು ಸಹಿ ಹಾಕದೇ ಡಿಸಿಎಂ ಸಹಿ ಹಾಕೋಕೆ ಆಗುತ್ತಾ? ಯಾರಿಗೆ ಯಾವ ಹೊಟ್ಟೆನೋವು ಇದೆಯೋ ಗೊತ್ತಿಲ್ಲ. ಅದನ್ನ ಈ ರೀತಿ ಕಕ್ಕುತ್ತಿದ್ದಾರೆ. ಪಕ್ಷದ ವೇದಿಕೆಯಲ್ಲಿ ಕಕ್ಕೋದು ಒಳ್ಳೆಯದು. ಒಂದಿಬ್ಬರು ಶಾಸಕರು ಮಾತಾಡ್ತಿದ್ದಾರೆ. ನಿಮ್ಮ ಏನೇ ಸಮಸ್ಯೆಯಿದ್ರೂ ಸಿಎಂ, ಡಿಸಿಎಂ ಜೊತೆ ಮಾತಾಡಿ. ಸಿಎಲ್‌ಪಿ ಸಭೆಯಿದೆ, ಅಲ್ಲಿ ಚರ್ಚೆ ಮಾಡಿ ಎಂದರು.ಇದನ್ನೂ ಓದಿ: ಸರಿ ಮಾತಾಡ್ಸಲ್ಲ ಅಂತ ರಾಜು ಕಾಗೆ ಆರೋಪ – ಶಾಸಕರಿಗೆ ನಮ್ಮ ಮೇಲೆ ಪ್ರೀತಿ ಜಾಸ್ತಿ ಎಂದ ಡಿಕೆಶಿ

Share This Article