ವಿಜಯಪುರ: ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಬಂದ ಮೂವರು ಖದೀಮರಿಂದ ಬೇಕರಿ ಮಾಲೀಕರೊಬ್ಬರನ್ನು ಕಿಡ್ನಾಪ್ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟ ಘಟನೆ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಿನ್ನೆ ಸಂಜೆ 6.30ರ ಸುಮಾರಿಗೆ ನಡೆದಿದೆ.
ರಾಜಸ್ಥಾನ ಮೂಲದ ಅರ್ಬುದಾ ಬೇಕರಿ ಮಾಲೀಕ ಮಾಸಸಿಂಗ್ ಕಿಡ್ನಾಪ್ ಆದ ವ್ಯಕ್ತಿ. ಮಾಲೀಕನನ್ನು ಕಿಡ್ನಾಪ್ ಮಾಡಿಕೊಂಡು ಹೊದ ಬಿಳಿ ಸ್ವಿಫ್ಟ್ ಕಾರು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾಸಸಿಂಗ್ ಅವರನ್ನು ಕಿಡ್ನಾಪ್ ಮಾಡಿ, 50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಖದೀಮರು ವ್ಯಕ್ತಿಯನ್ನು ಕಿಡ್ನಾಪ್ ಮಾಡಿ, ಕೈ ಹಾಗೂ ಕಾಲಿಗೆ ಚಾಕು ಚುಚ್ಚಿ ಮನಬಂದಂತೆ ಹಲ್ಲೆ ನಡೆಸಿದ್ದರು. ಇದನ್ನೂ ಓದಿ: ಹರ್ಷನ ಒಂದೊಂದು ರಕ್ತದ ಹನಿಯೂ ವ್ಯರ್ಥವಾಗದಂತೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಶಪಥ ಮಾಡ್ತೇವೆ: ಪ್ರಮೋದ್ ಮುತಾಲಿಕ್
Advertisement
Advertisement
ಹಲ್ಲೆಗೊಳಗಾದ ಮಾಸಸಿಂಗ್ ಇಂಡಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ವೀಟ್ ಆರ್ಡರ್ ಕೊಡೊದಿದೆ ಅಂತ ಮಾಲೀಕನನ್ನು ಕಾರಿನ ಬಳಿ ಕರೆದಿದ್ದರು. ಈ ವೇಳೆ ಅವರು ಕಾರಿನ ಹತ್ತಿರ ಬರುತ್ತಿದ್ದಂತೆ ಕಿಡ್ನಾಪ್ ಮಾಡಿದ್ದಾರೆ. ಕಿಡ್ನಾಪ್‍ರಗಳು ಅವರಿಗೆ 50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಲ್ಲದೇ 20 ಲಕ್ಷಕ್ಕೆ ವ್ಯವಹಾರ ಕುದುರಿಸಿದ್ದು, ಝಳಕಿ ಬಳಿ ಬಂದು ಹಣ ಕೊಡುವಂತೆ ಹೇಳಿದ್ದರು. ಮಾಸಸಿಂಗ್ ಕಳೆದ ಹತ್ತು ವರ್ಷಗಳಿಂದ ಇಂಡಿಯಲ್ಲಿ ಬೇಕರಿ ನಡೆಸುತ್ತಿದ್ದರು.
Advertisement
ಮಾಸಸಿಂಗ್ ಕಿಡ್ನಾಪ್ ಮತ್ತು ಟಾರ್ಚರ್ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇಂಡಿ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ ನಡೆದಿದ್ದು, ಪೊಲೀಸರು ಬೇಕರಿ ಮಾಲೀಕ ಮಾಸಸಿಂಗ್ ಕಿಡ್ನಾಪ್ ವಿಚಾರ ತಿಳಿಯುತ್ತಿದ್ದಂತೆ ಜಾಗೃತಗೊಂಡಿದ್ದಾರೆ. ಇದನ್ನೂ ಓದಿ: ಪ್ರಕ್ಷುಬ್ಧಗೊಂಡ ಶಿವಮೊಗ್ಗದಲ್ಲಿ 2 ದಿನ ಕರ್ಫ್ಯೂ – ನಾಳೆ ಬೆಳಗ್ಗೆವರೆಗೂ ನಿಷೇಧಾಜ್ಞೆ, ಖಾಕಿ ಭದ್ರತೆ
Advertisement
ಮಾಸಸಿಂಗ್ ಕುಟುಂಬಸ್ಥರು, ದರೋಡೆಕೋರರು ಝಳಕಿ ಬಳಿ ಬಂದು 20 ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದರಿಂದ ಹಣ ಕೊಡಲು ಸಿದ್ಧವಾಗಿದ್ದರು. ಈ ವೇಳೆ ಪೊಲೀಸರು ಕಿಡ್ನಾಪರ್ಸ್ ಸೆರೆಗೆ ಜಾಲ ರಚಿಸಿದ್ದರು. ಝಳಕಿ ಬಳಿ ಬರುತ್ತಿದ್ದಂತೆ ಪೊಲೀಸರು ಬಂದಿರುವ ವಿಚಾರ ತಿಳಿದ ಕಿಡ್ನಾಪರ್ಸ್ ಇದ್ದಕ್ಕಿದ್ದಂತೆ ಲೋಣಿ ಗ್ರಾಮದ ಕಡೆ ಕಾರು ತಿರುಗಿಸಿದ್ದಾರೆ.
ಬಳಿಕ ಕಾರನ್ನು ಬೆನ್ನಟ್ಟಿದ ಪೊಲೀಸರು ಕಿಡ್ನಾಪರ್ಸ್ ಅನ್ನು ಸರೆ ಹಿಡಿದು ಪೊಲೀಸರು ಬೇಕರಿ ಮಾಲೀಕನನ್ನು ರಕ್ಷಿಸಿದ್ದಾರೆ. ತಡರಾತ್ರಿ ವರೆಗೂ ಕಾರ್ಯಾಚರಣೆ ನಡೆಸಿ ಕೊನೆಗೂ ಕಿಡ್ನಾಪ್ ಪಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.
ಘಟನೆಯು ಇಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.