ಬೆಂಗಳೂರು: ಗಂಗೇನಹಳ್ಳಿ ಡಿನೋಟಿಫಿಕೇಶನ್ (Gangenahalli Denotification) ಪ್ರಕರಣ ಸಂಬಂಧ ಮಾಜಿ ಸಿಎಂ ಯಡಿಯೂರಪ್ಪನವರು (BS Yediyurappa) ಲೋಕಾಯುಕ್ತ ವಿಚಾರಣೆ ಎದುರಿಸಿದ್ದಾರೆ.
ಸುಮಾರು ಒಂದೂವರೆ ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಬಳಿಕ ಯಡಿಯೂರಪ್ಪ ಲೋಕಾಯುಕ್ತ ಕಚೇರಿಯಿಂದ ನಿರ್ಗಮಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೂ ವಿಚಾರಣೆಗೆ ಬರುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡುವ ಸಾಧ್ಯತೆಯಿದೆ. ಇದನ್ನೂ ಓದಿ: ಮಹಿಳಾ ಪಿಎಸ್‍ಐ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನ – ಕೊಲೆ ಆರೋಪಿಗೆ ಗುಂಡೇಟು
ಈ ಸಂಬಂಧ ಗುರುವಾರ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ ಸಚಿವರಾದ ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್ 2015ರಲ್ಲಿ ಲೋಕಾಯುಕ್ತದಲ್ಲಿ (Lokayukta) ಕೇಸ್ ದಾಖಲಾದರೂ ಈವರೆಗೂ ತನಿಖೆ ಪೂರ್ತಿಯಾಗಿಲ್ಲ. 2021ರಿಂದ ಲೋಕಾಯುಕ್ತದಲ್ಲಿ ಈ ಕೇಸ್ ವಿಚಾರದಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಕಿಡಿಕಾರಿದ್ದರು.
ಕಾಂಗ್ರೆಸ್ ಆರೋಪ ಏನಿತ್ತು?
1976 ರಲ್ಲಿ ಗಂಗೇನಹಳ್ಳಿಯಲ್ಲಿ ಬಿಡಿಎ (BDA) ನೋಟಿಫಿಕೇಶನ್ ಆಗಿದೆ. ಅದರಲ್ಲಿ 1.11 ಎಕ್ರೆ ಜಾಗ ಡಿನೋಟಿಫೈ ಮಾಡಲು 30 ವರ್ಷದ ನಂತರ ಅರ್ಜಿ ಸಲ್ಲಿಸಲಾಗಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಡಿನೋಟಿಫೈಗೆ ರಾಜಶೇಖರಯ್ಯ ಎಂಬವರು ಅರ್ಜಿ ಸಲ್ಲಿಸಿದ್ದರು. ಆದರೆ ಈ ಜಮೀನಿಗೂ ರಾಜಶೇಖರಯ್ಯಗೂ ಯಾವುದೇ ಸಂಬಂಧ ಇಲ್ಲ.
ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಡಿನೋಟಿಫಿಕೇಶನ್‌ಗೆ ಸೂಚನೆ ಕೊಡುತ್ತಾರೆ. ಸೆಪ್ಟೆಂಬರ್ 11, 2007 ರಲ್ಲಿ ಇದೇ ಜಮೀನನ್ನು ಅನಿತಾ ಕುಮಾರಸ್ವಾಮಿ ತಾಯಿ ವಿಮಲಾ ಅವರಿಗೆ ಜಿಪಿಎ ಮಾಡಲಾಗಿದೆ. ಜಿಪಿಎ ರಾಜಶೇಖರಯ್ಯ ಮಾಡಿಸಿಕೊಳ್ಳದೇ ಮೂಲ ಮಾಲೀಕರ 21 ಮಂದಿ ವಾರಸುದಾರರಿಂದ ಆಗುತ್ತದೆ. ನಂತರ ಆ ಭೂಮಿ ಕುಮಾರಸ್ವಾಮಿ ಬಾಮೈದ ಚನ್ನಪ್ಪ ಎಂಬುವವರ ಹೆಸರಿಗೆ ರಿಜಿಸ್ಟ್ರರ್ ಆಗುತ್ತದೆ. ಇದನ್ನೂ ಓದಿ: ಕಾಂಗ್ರೆಸ್‌ನವರಿಂದಲೇ ಪಕ್ಷಕ್ಕೆ ಸೋಲು: ಈಶ್ವರ್ ಖಂಡ್ರೆ
2008ರಲ್ಲಿ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪನವರು ಡಿನೋಟಿಫೈಯಿಂದ ಕೈಬಿಡಿ ಅಂತ ಷರಾ ಬರೆಯುತ್ತಾರೆ. ಈ ರಾಜಶೇಖರಯ್ಯ ಎಂಬ ಬೇನಾಮಿ ಅರ್ಜಿ ಮೇರೆಗೆ ಈ ಷರಾ ಬರಯಲಾಗಿದೆ. 2015ರಲ್ಲಿ ಈ ಸಂಬಂಧ ಲೋಕಾಯುಕ್ತದಲ್ಲಿ ದೂರು ದಾಖಲಾಗುತ್ತದೆ. 2021 ರಲ್ಲಿ ಲೋಕಾಯುಕ್ತದಲ್ಲಿ ಕೊನೆಯ ಬಾರಿಗೆ ವಿಚಾರಣೆ ನಡೆಯುತ್ತದೆ.
ಕುಮಾರಸ್ವಾಮಿ ಇದ್ದಾಗ ಡಿನೋಟಿಫೈ ಮಾಡಲು ಮುಂದಾಗಿ ಯಡಿಯೂರಪ್ಪ ಸಿಎಂ ಆದಾಗ ಮಾಡಲು ಶಿಫಾರಸ್ಸು ಮಾಡಲಾಗಿದೆ. ಅಂದಿನ ಮುಖ್ಯ ಕಾರ್ಯದರ್ಶಿ ಡಿನೋಟಿಫೈ ಮಾಡಲು ಬರುವುದಿಲ್ಲ ಎಂದರೂ ಡಿನೋಟಿಫೈ ಮಾಡಲಾಗಿದೆ.