ಬೆಂಗಳೂರು: ಕೊಪ್ಪಳದ ಹಳ್ಳಿ ಕೋಗಿಲೆ ಗಂಗಮ್ಮ ಅವರಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ಲಭಿಸಿದ್ದು, ಗಾಯಕಿಯಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡಿದ್ದಾರೆ.
‘ಪರದೇಸಿ ಕೇರ್ ಆಫ್ ಲಂಡನ್’ ಚಿತ್ರದ ಮೂಲಕ ಗಂಗಮ್ಮ ಗಾಯಕಿಯಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡಿದ್ದಾರೆ. ಸದ್ಯ ಈಗ ನಾದಬ್ರಹ್ಮ ಹಂಸಲೇಖ ಅವರ ಸ್ಟುಡಿಯೋದಲ್ಲಿ ಗಂಗಮ್ಮ ಅವರ ಹಾಡು ರೆಕಾರ್ಡಿಂಗ್ ನಡೆಯುತ್ತಿದೆ. ಅಷ್ಟೇ ಅಲ್ಲದೇ ಇನ್ನೂ ಇಬ್ಬರು ನಿರ್ದೇಶಕರು ಗಂಗಮ್ಮ ಅವರನ್ನು ತಮ್ಮ ಚಿತ್ರಕ್ಕೆ ಹಾಡು ಹಾಡಿಸಲೆಂದು ಸ್ಟುಡಿಯೋ ಬಳಿ ಕಾಯುತ್ತಿದ್ದಾರೆ.
ವೀರ ಸಮರ್ಥ್ ಸಂಗೀತ ನಿರ್ದೇಶನದ ಸಿನಿಮಾ ಇದಾಗಿದ್ದು, ಈಗ ಅವರಿಗೆ ಮೈಕ್ ಮುಂದೆ ಹೇಗೆ ನಿಲ್ಲಬೇಕು, ಹೇಗೆ ಧ್ವನಿ ಬದಲಾಯಿಸಿ ಯಾವ ರೀತಿ ಹಾಡಬೇಕು ಎನ್ನುವುದನ್ನು ವೀರ ಸಮರ್ಥ್ ಹೇಳಿಕೊಡುತ್ತಿದ್ದಾರೆ. ‘ಪರದೇಸಿ ಕೇರ್ ಆಫ್ ಲಂಡನ್’ ಚಿತ್ರವನ್ನು ರಾಜಶೇಖರ್ ನಿರ್ದೇಶಿಸುತ್ತಿದ್ದು, ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ಇದನ್ನೂ ಓದಿ: ಕೇವಲ 24 ಗಂಟೆಯಲ್ಲಿ 5 ಲಕ್ಷ ವೀವ್ಸ್, 10 ಸಾವಿರ ಶೇರ್ ಆಯ್ತು ಕೊಪ್ಪಳದ ಹಾಡು ಕೋಗಿಲೆಯ ವಿಡಿಯೋ!
ಗಂಗಮ್ಮ ತಮ್ಮ ಮೊದಲ ಹಾಡು ಪೂರ್ಣಗೊಳಿಸಿಲ್ಲ. ಅಷ್ಟರಲ್ಲೇ ಎರಡೂ ಸಿನಿಮಾದ ನಿರ್ದೇಶಕರು ಬಂದು ತಮ್ಮ ಸಾಹಿತ್ಯಕ್ಕೆ ಇವರ ಕಂಠ ಹೋಲುತ್ತಾ ಎಂದು ಪರೀಕ್ಷೆ ಮಾಡಲು ಬಂದಿದ್ದಾರೆ.
ಇತ್ತೀಚಿಗೆ ಗಂಗಮ್ಮ ಅವರ ಹಾಡಿನ ವಿಡಿಯೋ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಲಾಗಿತ್ತು. ಆ ಹಾಡು ಒಂದೇ ದಿನದಲ್ಲಿ ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ವ್ಯೂ ಆಗಿತ್ತು. ಅಲ್ಲದೇ ಸುಮಾರು 10 ಸಾವಿರ ಜನ ಇವರ ಹಾಡಿನ ವಿಡಿಯೋ ಪೋಸ್ಟ್ ಅನ್ನು ಶೇರ್ ಮಾಡಿದ್ದರು.
ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದ ಸಂಗೀತಾ ನಿರ್ದೇಶಕ ಅರ್ಜುನ್ ಜನ್ಯ, ಗಂಗಮ್ಮ ಅವರ ಹಾಡನ್ನು ಕೇಳಿ ಸಂಗೀತಕ್ಕೆ ವಯಸ್ಸು ಇರಲ್ಲ ಎಂಬುದು ತಿಳಿಯಿತು. ತುಂಬಾ ಚೆನ್ನಾಗಿ ಹಾಡುತ್ತಿದ್ದು ಅವರಿಗೆ 20 ವರ್ಷ ಅನುಭವವಿರುವುದು ಅವರ ಹಾಡು ಕೇಳಿ ತಿಳಿಯುತ್ತದೆ. ಗಂಗಮ್ಮ ಹಾಗೂ ಅವರ ಕುಟುಂಬಕ್ಕೆ ನಾನು ಶುಭಾಶಯ ತಿಳಿಸುತ್ತೇನೆ ಎಂದಿದ್ದರು.
https://www.youtube.com/watch?v=pf0De5WBDJk