ನವದೆಹಲಿ: ಗಂಗಾ ನದಿಯ ನೀರು ಸ್ನಾನ ಮಾಡಲು ಯೋಗ್ಯವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಗಂಗಾ ನದಿ ಸ್ನಾನದ ಮಾನದಂಡಗಳ ಸ್ವೀಕಾರಾರ್ಹ ಮಿತಿಗಳಲ್ಲಿದೆ ಎಂದಿದೆ.
ಕೇಂದ್ರ ಜಲಶಕ್ತಿ ಹಾಗೂ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ ಬಿಶ್ವೇಶ್ವರ ಟುಡು, ಜಲಶಕ್ತಿ ರಾಜ್ಯ ಸಚಿವ ಬಿಶ್ವೇಶ್ವರ ತುಡು ಮಾತನಾಡಿ, ಗಂಗಾ ಸ್ಟ್ರೆಚ್‌ಗಳು (Ganga stretches) ಆದ್ಯತೆಯ ವರ್ಗದಲ್ಲಿ 4 ವರೆಗೆ ಇಲ್ಲ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, ಗಂಗಾ ನದಿಯ ಎರಡು ಸ್ಟ್ರೆಚ್‌ಗಳು 3 ಮತ್ತು 6 ಮಿಲಿಗ್ರಾಂ ಲೀಟರ್‌ವರೆಗಿನ ಜೈವಿಕ ಆಮ್ಲಜನಕದೊಂದಿಗೆ (BOD) 4 ವರ್ಗದಲ್ಲಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾಳೆ ಬೆಳಗ್ಗೆ 10:30ಕ್ಕೆ ಹಿಜಬ್ ಹೈಕೋರ್ಟ್ ತೀರ್ಪು
Advertisement
Advertisement
ವರ್ಗ 1 ಅನ್ನು ಹೆಚ್ಚಿನ ಪ್ರಮಾಣದ ಜೈವಿಕ ಆಮ್ಲಜನಕದಿಂದ ಹೆಚ್ಚು ಕಲುಷಿತಗೊಂಡಿದೆ ಎಂದು ಪರಿಗಣಿಸಲಾಗುತ್ತದೆ. ಆದರೆ 4 ವರ್ಗವನ್ನು ಕಡಿಮೆ ಮಾಲಿನ್ಯವೆಂದು ಪರಿಗಣಿಸಲಾಗುತ್ತದೆ.
Advertisement
2021 ರ CPCB ದತ್ತಾಂಶದ ಪ್ರಕಾರ, ಗಂಗಾ ನದಿಯ ನೀರಿನ ಗುಣಮಟ್ಟವು ಕರಗಿದ ಆಮ್ಲಜನಕ (DO) ಅಧಿಸೂಚಿತವು ಸ್ನಾನದ ನೀರಿನ ಗುಣಮಟ್ಟದ ಮಾನದಂಡಗಳ ಸ್ವೀಕಾರಾರ್ಹ ಮಿತಿಯೊಳಗೆ ಕಂಡುಬಂದಿದೆ. ನದಿಯ ಪರಿಸರ ವ್ಯವಸ್ಥೆಯು ಒಪ್ಪಿಕೊಳ್ಳುವ ಸ್ಥಿತಿಯಲ್ಲಿದೆ ಎಂದು ಸೂಚಿಸುತ್ತದೆ. ಇದನ್ನೂ ಓದಿ: ಏರ್ ಇಂಡಿಯಾ ಅಧ್ಯಕ್ಷರಾಗಿ ಟಾಟಾ ಸನ್ಸ್ ಮುಖ್ಯಸ್ಥ ಎನ್.ಚಂದ್ರಶೇಖರನ್ ನೇಮಕ
Advertisement
ನಮಾಮಿ ಗಂಗೆ ಕಾರ್ಯಕ್ರಮದಡಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಐದು ರಾಜ್ಯಗಳ 97 ಸ್ಥಳಗಳಲ್ಲಿ ಆಯಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳ ಮೂಲಕ ಗಂಗಾ ನದಿಯ ನೀರಿನ ಗುಣಮಟ್ಟ ಮೌಲ್ಯಮಾಪನ ನಡೆಸುತ್ತಿದೆ. ಕಾರ್ಯಕ್ರಮದಡಿ 30,853 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಒಟ್ಟು 364 ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದ್ದು, 183 ಯೋಜನೆಗಳನ್ನು ಪೂರ್ಣಗೊಳಿಸಿ ಕಾರ್ಯಾರಂಭ ಮಾಡಲಾಗಿದೆ.