ಸಾವೋ ಪೌಲೋ: ಬ್ಯಾಂಕ್ ಕಳ್ಳತನ ಮಾಡಲು ಸರಿಸುಮಾರು 2 ಸಾವಿರ ಅಡಿ ಸುರಂಗ ಕೊರೆದಿದ್ದ ಖತರ್ನಾಕ್ ಕಳ್ಳರು ಸಿಕ್ಕಿಬಿದ್ದ ಘಟನೆ ಬ್ರೆಜಿಲ್‍ನಲ್ಲಿ ನಡೆದಿದೆ.
Advertisement
ಇಲ್ಲಿನ ಸಾವೋ ಪೌಲೋನಲ್ಲಿನ ಬ್ಯಾಂಕ್‍ನಲ್ಲಿ ಕಳ್ಳರು ದರೋಡೆಗೆ ಯತ್ನಿಸಿದ್ದರು. ಈ ಗ್ಯಾಂಗ್ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಸುರಂಗ ಕಾರ್ಯ ಕೊನೆ ಹಂತ ತಲುಪುವ ವೇಳೆಗೆ ಸೆಪ್ಟೆಂಬರ್ 27 ರಂದು ಒಳಗೆ ಹೋಗಲು ನಿರ್ಧರಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 16 ಮಂದಿಯನ್ನ ಸೋಮವಾರದಂದು ಬಂಧಿಸಿದ್ದಾರೆ.
Advertisement
ಬ್ಯಾಂಕೋ ಡೋ ಬ್ರೆಜಿಲ್‍ನ ಶಾಖೆಯೊಂದರಲ್ಲಿ ಕಳ್ಳತನ ಮಾಡಲು ಈ ಗುಂಪು ಸುರಂಗದ ಮೂಲಕ ಎಂಟ್ರಿ ಕೊಡುವ ವೇಳೆಯೇ ಪೊಲೀಸರು ದಾಳಿ ಮಾಡಿದ್ದಾರೆ. ಒಂದು ಬಿಲಿಯನ್ ರಿಯಲ್(ಅಂದಾಜು 2 ಸಾವಿರ ಕೋಟಿ ರೂ.) ಹಣ ಕಳ್ಳತನ ಮಾಡಲು ಯತ್ನಿಸಿದ್ದಾಗಿ ತಂಡ ಹೇಳಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಒಂದು ವೇಳೆ ಈ ದರೋಡೆ ನಡೆದುಬಿಟ್ಟಿದ್ದರೆ ಇದು ವಿಶ್ವದ ಅತ್ಯಂತ ದೊಡ್ಡ ದರೋಡೆಯಾಗುತ್ತಿತ್ತು ಎಂದು ಪೊಲೀಸ್ ಮುಖ್ಯಸ್ಥ ಫಾಬಿಯೋ ಪಿನ್ಹೀರೋ ಲೋಪ್ಸ್ ಇಲ್ಲಿನ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಆದ್ರೆ ಈ ಕಳ್ಳರ ಗುಂಪು ಚೇಂಬರ್‍ನ ಗೋಡೆಯವರೆಗೆ ಹೋದರಾದ್ರೂ ಸೇಫ್ ಲಾಕರ್ ತಲುಪಲು ಸಾಧ್ಯವಾಗಿರಲಿಲ್ಲ. ಸುರಂಗ ಕೊರೆಯಲು ಈ ಗುಂಪು ಸುಮಾರು 8.3 ಕೋಟಿ ರೂ ಹಣ ಹೂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ನಾಲ್ಕು ತಿಂಗಳ ಹಿಂದೆಯೇ ಸುರಂಗ ಕೊರೆಯಲು ಆರಂಭಿಸಿದ್ದರು. ಸುರಂಗದೊಳಗೆ ಫ್ಯಾನ್, ಲೈಟ್ ದೇರಿದಂತೆ ಅತ್ಯಾಧುನಿಕ ವ್ಯವಸ್ಥೆಗಳಿದ್ದವು. ಮರದ ತುಂಡುಗಳು ಮತ್ತು ಕಬ್ಬಿಣದ ಬಾರ್‍ಗಳನ್ನ ಸುರಂಗಕ್ಕೆ ಬಳಸಿದ್ದರು. ಇದರಲ್ಲಿ ವಯಸ್ಕ ವ್ಯಕ್ತಿಯೊಬ್ಬ ಎದ್ದುನಿಲ್ಲುವಷ್ಟು ದೊಡ್ಡದಾಗಿತ್ತು.
ಇಲ್ಲಿನ ಚಾಕಾರಾ ಸಾಂಟೋ ಆಂಟೋನಿಯೋದಲ್ಲಿನ ಬಾಡಿಗೆ ಮನೆಯೊಂದರಿಂದ ಸುರಂಗ ಶುರುವಾಗಿತ್ತು. ಈ ಮನೆಯಲ್ಲಿ ಆಹಾರ ಮತ್ತು ಸಲಕರಣೆಗಳನ್ನ ಶೇಖರಣೆ ಮಾಡಲಾಗಿತ್ತು. ಬ್ಯಾಂಕ್ ಕಡೆಗೆ ಹೋಗುವ ರಸ್ತೆಯ ಕೆಳಗೆ ಸುರಂಗ ಮಾರ್ಗವನ್ನ ಕೊರೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
https://www.youtube.com/watch?v=LmlH2z11uio