ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಗ್ಯಾಂಗ್ ರೇಪ್ ನಡೆದಿರುವುದು ಬೆಳಕಿಗೆ ಬಂದಿದೆ.
ಎಲೆಕ್ಟ್ರಾನಿಕ್ ಸಿಟಿ (Electronic City) ನೀಲಾದ್ರಿ ನಗರದ ಬಳಿ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೇರಳ ಮೂಲದ ಯುವತಿ ಮೇಲೆ ಇಬ್ಬರು ಯುವಕರು ರೇಪ್ ಮಾಡಿದ್ದಾರೆ. ರ‍್ಯಾಪಿಡೋ ಬೈಕ್ ಪಿಕಪ್ ಮಾಡೋ ಸವಾರ ಹಾಗೂ ಆತನ ಸ್ನೇಹಿತನಿಂದ ಅತ್ಯಾಚಾರ ನಡೆದಿದೆ. ಸದ್ಯ ಯುವತಿ ದೂರಿನ ಮೇರೆಗೆ ಗ್ಯಾಂಗ್ ರೇಪಿಸ್ಟ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಡೆದಿದ್ದೇನು..?: ಬಿಟಿಎಂ ಲೇಔಟ್ (BTM Layout) ನ ಸಂಸ್ಥೆಯೊಂದರಲ್ಲಿ ಫ್ರೀಲ್ಯಾನ್ಸರ್ ಆಗಿ ಯುವತಿ ಕೆಲಸ ಮಾಡುತ್ತಿದ್ದಾಳೆ. ಹೀಗಾಗಿ ಕೆಲಸ ಮುಗಿದ ಬಳಿಕ ಗುರುವಾರ ರಾತ್ರಿ ರ‍್ಯಾಪಿಡೋ ಬೈಕ್ (Rapido Bike) ಮಾಡಿದ್ದಳು. ಬಿಟಿಎಂ ಲೇಔಟ್‍ನಿಂದ ನೀಲಾದ್ರಿ ನಗರಕ್ಕೆ ರ‍್ಯಾಪಿಡೋ ಬೈಕ್ ಬುಕ್ಕಿಂಗ್ ಮಾಡಿದ್ದಳು. ಬೈಕ್ ಹುಡುಗ ಪಿಕ್‍ಅಪ್ ವೇಳೆ ಯುವತಿ ಮದ್ಯಪಾನ ಮಾಡಿದ್ದಳು. ನೀಲಾದ್ರಿ ನಗರ ತಲುಪುವ ಹೊತ್ತಿಗೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದಳು. ಇದನ್ನೂ ಓದಿ: ಹಸುವಿನೊಂದಿಗೆ ಲೈಂಗಿಕ ತೃಷೆ ತೀರಿಸಿಕೊಳ್ಳುತ್ತಿದ್ದ ಪಾಪಿ ಜೈಲುಪಾಲು
ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು ರ‍್ಯಾಪಿಡೋ ಯುವಕ ಡ್ರಾಪ್ ಪಾಯಿಂಟ್‍ನಲ್ಲಿ ಬಿಡಲಿಲ್ಲ. ಅಲ್ಲದೆ ಇದೇ ಸಂದರ್ಭದಲ್ಲಿ ಆತ ತನ್ನ ಸ್ನೇಹಿತನನ್ನು ಕೂಡ ಸ್ಥಳಕ್ಕೆ ಕರೆಸಿಕೊಳ್ಳುತ್ತಾನೆ. ನಂತರ ಇಬ್ಬರು ನೀಲಾದ್ರಿ ನಗರದ ತನ್ನ ರೂಮ್‍ಗೆ ಕರೆದೊಯ್ದು ಯುವತಿ ಮೇಲೆ ಗ್ಯಾಂಗ್ ರೇಪ್ ಮಾಡಿದ್ದಾರೆ. ಪ್ರಜ್ಞೆ ಬಂದ ಬಳಿಕ ಯುವತಿಯನ್ನು ಬಿಟ್ಟು ಕಳುಹಿಸಿದ್ದಾರೆ. ಅಲ್ಲದೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ.
ಘಟನೆ ಬಳಿಕ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಯುವತಿ ದೂರು ಕೊಟ್ಟಿದ್ದಾಳೆ. ಸದ್ಯ ದೂರು ಆಧರಿಸಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.