ಚಿಕ್ಕೋಡಿ: ಗಸ್ತು ತಿರುಗುತ್ತಿದ್ದ ಪೊಲೀಸರನ್ನೇ (Police) ಬೆದರಿಸಿ ಕಳ್ಳರ ಗ್ಯಾಂಗ್ (Gang Of Thieves) ಪರಾರಿಯಾಗಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ನಿಪ್ಪಾಣಿ (Nippani) ಪಟ್ಟಣದಲ್ಲಿ ನಡೆದಿದೆ.
ನಿಪ್ಪಾಣಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ರಾಜಾರೋಷವಾಗಿ ಮನೆ ಕಳ್ಳತನಕ್ಕೆ ಯತ್ನಿಸಿ ಕಳ್ಳರು ಪೊಲೀಸರನ್ನೆ ತಳ್ಳಿ ಪರಾರಿಯಾಗಿದ್ದಾರೆ. ನಿಪ್ಪಾಣಿ ನಗರದ ಮಾನೆ ಪ್ಲಾಟ್‌ನಲ್ಲಿ ಕಳೆದ ರಾತ್ರಿ ಪೊಲೀಸರ ಮೇಲೆ ಹಲ್ಲೆಗೆ ಯತ್ನ ನಡೆಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಳ್ಳರು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಗೋವು ಸಂರಕ್ಷಣೆ ಕಾಯ್ದೆ ತಿದ್ದುಪಡಿ; ಸರ್ಕಾರದ ವಿರುದ್ಧ ವಿಶ್ವ ಹಿಂದೂ ಪರಿಷತ್ ಕಿಡಿ
ಪೊಲೀಸರನ್ನ ಹೆದರಿಸಿ ಖದೀಮರ ಗ್ಯಾಂಗ್ ಓಡಿ ಹೋಗಿದೆ. ಮನೆಯೊಂದರಲ್ಲಿ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರು ಕಳ್ಳತನಕ್ಕೆ ಯತ್ನಿಸುತ್ತಿದ್ದ ವೇಳೆ ಗಸ್ತು ತಿರುಗುತ್ತಿದ್ದ ಇಬ್ಬರು ಪೊಲೀಸರನ್ನ ಕಂಡು ಅಲ್ಲೇ ಅಡಗಿ ಕುಳಿತಿದ್ದರು. ಅನುಮಾನ ಬಂದು ವಾಪಸ್ ಬಂದಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನ ನಡೆಸಿ ಕಳ್ಳರು ಓಡಿ ಹೋಗಿದ್ದಾರೆ. ಇದನ್ನೂ ಓದಿ: ಕೇವಲ 100 ರೂ.ಗೆ ಹಾಟ್‌ಸ್ಟಾರ್, ಡೇಟಾ ಸೇರಿ ಜಿಯೋ ಸಖತ್ ಬಂಪರ್ ಆಫರ್
ಕೈಯಲ್ಲಿ ಬಂದೂಕು ಇದ್ದರೂ ಹೆದರದ ಕಳ್ಳರ ಗ್ಯಾಂಗ್ ಪೊಲೀಸರನ್ನೇ ಹೆದರಿಸಿ ಓಡಿ ಹೋಗಿದ್ದು, ಪೊಲೀಸರ ಕೈಯಲ್ಲಿರುವ ಬಂದೂಕಗಳ ಕುರಿತು ಪ್ರಶ್ನೆ ಮೂಡಿಸುತ್ತಿದೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ನಿಪ್ಪಾಣಿ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ದೈವದ ಅಭಯ: ರಿಷಬ್ ಟೀಮ್‌ನಲ್ಲಿ ಸಂಚಲನ

