ಬೆಂಗಳೂರು: ಎರಡು ತಿಂಗಳ ಹಿಂದೆ ಬೆಂಗಳೂರು ಹೊರವಲಯ ಕೆ.ಆರ್.ಪುರದ ಮೋರಿಯಲ್ಲಿ ಸುರಂಗ ಮಾರ್ಗ ಕೊರೆದು, ಜ್ಯುವೆಲ್ಲರಿ ಅಂಗಡಿಯಿಂದ ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ ಹಾಗೂ ಚಿನ್ನಾಭರಣಗಳನ್ನ ಕದ್ದಿದ್ದ ನಾಲ್ಕು ಮಂದಿ ದರೋಡೆಕೋರರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ಈ ಕಳ್ಳರನ್ನ ಬಂಧಿಸುವಲ್ಲಿ ನೆಲಮಂಗಲ ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ. ಕೆ.ಆರ್.ಪುರಂ ಮೂಲದ ಸುಶಾಂತ್, ಜಗದೀಶ್, ಜಿಗಣಿ ಮೂಲದ ಸಿದ್ದರಾಜು, ಸುನಿಲ್ ಕುಮಾರ್ ಬಂಧಿತ ಆರೋಪಿಗಳು.
Advertisement
ನೆಲಮಂಗಲ ಪಟ್ಟಣದಲ್ಲಿಯೂ ಸಹ ಕಳ್ಳತನಕ್ಕೆ ಮುಂದಾಗುತ್ತಿದ್ದ ವೇಳೆ ಈ ನಾಲ್ವರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿದಾಗ ನಾವೇ ಕೆ.ಆರ್.ಪುರದ ಮೋರಿಯಲ್ಲಿ ಸುರಂಗ ಮಾರ್ಗ ಕೊರೆದು ಜ್ಯುವೆಲ್ಲರಿ ಶಾಪಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ ಹಾಗೂ ಚಿನ್ನಾಭರಣಗಳನ್ನ ಕದ್ದಿದ್ದು ಎಂಬುದಾಗಿ ಬಾಯಿಬಿಟ್ಟಿದ್ದಾರೆ.
Advertisement
ಬಂಧಿತ ಆರೋಪಿಗಳು ಜುಲೈ ತಿಂಗಳ 15 ರಂದು ಕೆ.ಆರ್.ಪುರಂನ, ಬಾಲಾಜಿ ಜ್ಯುವೆಲ್ಲರಿ ಅಂಗಡಿಯಲ್ಲಿ ಸುರಂಗ ಮಾರ್ಗ ಕೊರೆದು ಸುಮಾರು, 29 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನ ಕದ್ದು ನಾಪತ್ತೆಯಾಗಿದ್ದರು. ಪೊಲೀಸರು ಪ್ರಕರಣವನ್ನ ಕೈಗೆತ್ತಿಕೊಂಡು ಕಾರ್ಯಾಚರಣೆ ನಡೆಸಿ 14 ಕೆ.ಜಿ ಬೆಳ್ಳಿ, 200 ಗ್ರಾಂ ಚಿನ್ನ, 10 ಬೈಕುಗಳು ಸೇರಿದಂತೆ, 1 ಹೊಂಡಾ ಅಮೇಜ್ ಕಾರನ್ನ ವಶಕ್ಕೆ ಪಡೆದಿದ್ದಾರೆ.
Advertisement
ಈ ಆರೋಪಿಗಳು ಕೆ.ಆರ್.ಪುರಂ, ಆನೇಕಲ್, ಬನ್ನೇರುಘಟ್ಟ, ಅತ್ತಿಬೆಲೆ ಸೇರಿಂದತೆ, ನೆಲಮಂಗಲ ಠಾಣೆಯಲ್ಲಿ ಕಳ್ಳತನ ಕೊಲೆ ಸೇರಿದಂತೆ ಅನೇಕ ಪ್ರಕರಣಗಳಿದ್ದು ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಎಸ್‍ಪಿ ಅಮಿತ್ ಸಿಂಗ್ ಹೇಳಿದರು.
Advertisement
ಇದನ್ನೂ ಓದಿ: ಮೋರಿ ಒಳಗೆ ಸುರಂಗ ಕೊರೆದು ಜ್ಯುವೆಲ್ಲರಿ ಅಂಗಡಿಗೆ ಕನ್ನ