ಬೆಂಗಳೂರು: ಗಣೇಶೋತ್ಸವದ ವೇಳೆ ಆಹಾರ ಪದಾರ್ಥ ಹಾಗೂ ಪ್ರಸಾದ ಸೇವೆಯ ಮೇಲೆ ಕಟ್ಟೆಚ್ಚರವಹಿಸಲಾಗಿದ್ದು, ಎಫ್‌ಎಸ್‌ಎಸ್‌ಎಐ (Food Safety And Standards Authority Of India)ನಿಂದ ಅನುಮತಿ ಪಡೆಯದೇ ಆಹಾರ ನೀಡಿದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಎಚ್ಚರಿಸಿದೆ.
ಗಣಪತಿ ಉತ್ಸವಕ್ಕೆ ಮೂರೇ ದಿನ ಬಾಕಿ ಇರುವಾಗ, ಗಣಪತಿ ಉತ್ಸವದ ಆಯೋಜಕರಿಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯಿಂದ (FSSAI) ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದು ಸೂಚಿಸಿದೆ.ಇದನ್ನೂ ಓದಿ: ನಿಮ್ಮನ್ನು ತಾಯಿಯಾಗಿ ಪಡೆದಿರುವುದು ನನ್ನ ಪುಣ್ಯ- ಜೈಲಿನಲ್ಲಿರುವ ಪವಿತ್ರಾರನ್ನು ನೆನೆದು ಮಗಳು ಭಾವುಕ ಪೋಸ್ಟ್
Advertisement
Advertisement
ಈ ಬಗ್ಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯು ಬಿಬಿಎಂಪಿಗೆ (BBMP) ಪತ್ರ ಬರೆದು, ಎಫ್‌ಎಸ್‌ಎಸ್‌ಎಐ ಇಲಾಖೆಯಿಂದ ಅನುಮತಿ ಪತ್ರ ಪಡೆದವರು ಮಾತ್ರ ಆಹಾರ ವಿತರಿಸಲು ಸೂಚನೆ ನೀಡಿದೆ.
Advertisement
ನಗರದ ಯಾವುದೇ ಜಾಗದಲ್ಲಿ ಗಣಪತಿ ಉತ್ಸವ ಮಾಡಿದರೂ ಎಫ್‌ಎಸ್‌ಎಸ್‌ಎಐನಿಂದ ಕಡ್ಡಾಯವಾಗಿ ಪರವಾನಿಗೆ ಪಡೆಯಲೇಬೇಕು. ಗಣೇಶೋತ್ಸವ ವೇಳೆ ಪ್ರಸಾದ ವಿನಿಯೋಗ ಇದ್ದರೆ ಅಲ್ಲಿ ಶುಚಿತ್ವ ಮತ್ತು ಗುಣಮಟ್ಟ ಸುರಕ್ಷತೆ ಪತ್ರ ಕಡ್ಡಾಯವಾಗಿದೆ. ಬಿಬಿಎಂಪಿ ಅನುಮತಿ ಜೊತೆಗೆ ಆಹಾರ ವಿತರಣೆಗೂ ಅನುಮತಿ ಪತ್ರ ಇರಲೇಬೇಕಿದೆ.ಇದನ್ನೂ ಓದಿ: ʻಕೈʼ ಹಿಡಿಯುತ್ತಾರಾ ಕುಸ್ತಿಪಟು ವಿನೇಶ್, ಬಜರಂಗ್ ಪುನಿಯಾ – ತೀವ್ರ ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ಭೇಟಿ
Advertisement
ಜನರ ಆರೋಗ್ಯ ದೃಷ್ಟಿಯಿಂದ ಪಾಲಿಕೆಗೆ ಪತ್ರದ ಮೂಲಕ ಸಂದೇಶ ರವಾನಿಸಲಾಗಿದೆ. ಗಣಪತಿ ಉತ್ಸವದ ವೇಳೆ ಪ್ರಸಾದ, ಆಹಾರ ಪದಾರ್ಥಗಳು ವಿತರಣೆ ಮಾಡುವವರು ಎಫ್‌ಎಸ್‌ಎಸ್‌ಎಐ ಪರವಾನಗಿ ಪಡೆದಿದ್ದಾರೆಯೇ ಎಂಬುದನ್ನ ಪರಿಶೀಲಿನೆ ಮಾಡಲು ಆದೇಶಿಸಿದೆ.