ಶಿವಮೊಗ್ಗ: ರಾಜ್ಯದ ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಿದ್ದ ಅದ್ಧೂರಿ ಗಣೇಶೋತ್ಸವಕ್ಕೆ ತೆರೆ ಬಿದ್ದಿದೆ.
ಮೆರವಣಿಗೆ ಮೂಲಕ ಮುಂಜಾನೆ 3 ಗಂಟೆಗೆ ಗಣಪತಿಯನ್ನು ವಿಸರ್ಜನೆ ಮಾಡಲಾಗಿದೆ. ಪೊಲೀಸ್ ಭದ್ರತೆಯಲ್ಲಿ ಬಣ್ಣ ಬಣ್ಣದ ಲೈಟ್‍ಗಳ ಮಧ್ಯೆ ಡಿಜೆ ಸದ್ದಿಗೆ ಯುವಕರು ಹೆಜ್ಜೆ ಹಾಕಿದರು.
Advertisement
Advertisement
ಶೋಭಾಯಾತ್ರೆಯಲ್ಲಿ ವೀರ ಸಾವರ್ಕರ್, ಗೋಡ್ಸೆ, ಹರ್ಷ, ಪ್ರವೀಣ್ ನೆಟ್ಟಾರು ಭಾವಚಿತ್ರಗಳು ರಾರಾಜಿಸಿದ್ದವು. ಕಲಾತಂಡಗಳು ಮೆರವಣಿಗೆಗೆ ಇನ್ನಷ್ಟು ಮೆರಗು ತಂದು ಕೊಟ್ಟವು. ಇದನ್ನೂ ಓದಿ: ಗಣಪತಿ ಶೋಭಾಯಾತ್ರೆ ವೇಳೆ ರಾಷ್ಟ್ರೀಯ ಲಾಂಛನಕ್ಕೆ ಅಪಮಾನ
Advertisement
ಮಾರ್ಗದುದ್ದಕ್ಕೂ ಜೈ ಶ್ರೀ ರಾಮ್ ಘೋಷಣೆ, ಎಸ್‍ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತ ಹಾಗೂ ಪ್ರಮುಖ ರಸ್ತೆಗಳಲ್ಲಿ ಕೇಸರಿ ಬಾವುಟ, ವಿವಾದಿತ ಅಮೀರ್ ಅಹಮ್ಮದ್ ವೃತ್ತದಲ್ಲಿ ವೀರ ಸಾವರ್ಕರ್ ಬೃಹತ್ ಫ್ಲೆಕ್ಸ್ ರಾರಾಜಿಸಿತು.
Advertisement
ನೆಹರೂ ರಸ್ತೆಯಲ್ಲಿ ಭಗತ್‍ಸಿಂಗ್, ಸ್ವಾಮಿ ವಿವೇಕಾನಂದ, ಅಂಬೇಡ್ಕರ್ ಸೇರಿ ಅನೇಕ ಮಹನೀಯರ ಕಟೌಟ್‍ಗಳನ್ನು ಹಾಕಲಾಗಿತ್ತು.