ಎಲ್ಲರ ಮನೆಗಳಲ್ಲಿ ಗಣೇಶ ಹಬ್ಬಕ್ಕೆ ಭರ್ಜರಿ ನಡೆಯುತ್ತಿರುತ್ತದೆ. ಅದರಲ್ಲೂ ಮಹಿಳೆಯರಿಗೆ ಪ್ರಸಾದಕ್ಕೆ ಏನು ಮಾಡಬೇಕು ಗೊಂದಲದಲ್ಲಿಯೇ ಮುಳುಗಿರುತ್ತಾರೆ. ಸಾಮಾನ್ಯವಾಗಿ ಗಣೇಶನ ಹಬ್ಬಕ್ಕೆ ಮೋದಕ, ಸಿಹಿ ಕಡಬು ಮಾಡುತ್ತಾರೆ. ಈ ವರ್ಷ ಸ್ವಲ್ಪ ವಿಭಿನ್ನವಾಗಿ ಚೂರ್ಮಾ ಲಡ್ಡು ಮಾಡಿ. ಚೂರ್ಮಾ ಲಡ್ಡು ಮಾಡುವ ವಿಧಾನ ಈ ಕೆಳಗಿನಂತಿದೆ.
ಬೇಕಾಗುವ ಸಾಮಾಗ್ರಿಗಳು:
1. ಚೂರ್ಮ(ರವೆ) – 2 ಕಪ್
2. ತುಪ್ಪ – ಅರ್ಧ ಕಪ್
3. ಬೆಲ್ಲ – ಒಂದುವರೆ ಕಪ್
4. ಏಲಕ್ಕಿ ಪುಡಿ – 1/4 ಚಮಚ
5. ಒಣಗಿದ ತೆಂಗಿನ ತುರಿ -2 ಚಮಚ
6. ಬಾದಾಮಿ, ಗೋಡಂಬಿ – ಅರ್ಧ ಕಪ್
7. ಒಣದ್ರಾಕ್ಷಿ -2 ಚಮಚ
8. ಗಸೆಗಸೆ – 1/2 ಚಮಚ
Advertisement
Advertisement
ಮಾಡುವ ವಿಧಾನ
* ಒಂದು ಬೌಲ್ಗೆ ರವಾ, ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ಸ್ವಲ್ಪ ನೀರು (ಅರ್ಧ ಕಪ್) ಹಾಕಿ ಊರ್ಣದ ರೀತಿ ಮಿಕ್ಸ್ ಮಾಡಿಕೊಳ್ಳಿ.
* ಈಗ ಪ್ಲೇಟ್ ಮುಚ್ಚಿಟ್ಟು 30 ನಿಮಿಷ ಹಾಗೆ ಬಿಡಿ.
* ಈಗ ಮಿಕ್ಸ್ ಮಾಡಿದ್ದ ಊರ್ಣವನ್ನು ಸಣ್ಣಗೆ ಉಂಡೆ ಮಾಡಿ, ವಡೆ ರೀತಿ ಸ್ವಲ್ಪ ತಟ್ಟಿ ಒಂದು ಪ್ಲೇಟಿನಲ್ಲಿ ಇಟ್ಟುಕೊಳ್ಳಿ.
* ಒಂದು ಬಾಣಲೆಗೆ ಎಣ್ಣೆ ಹಾಕಿ, ಕಾದ ನಂತರ ಉಂಡೆ ಮಾಡಿಟ್ಟಿದ್ದನ್ನು ಹಾಕಿ 12-13 ನಿಮಿಷ ಬೇಯಿಸಿ.
* ಈಗ ಒಂದು ಬೌಲ್ಗೆ ಹಾಕಿ ಸಣ್ಣ ಸಣ್ಣಗೆ ಕಟ್ ಮಾಡಿ ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಿ.
* ಒಂದು ಪ್ಯಾನ್ಗೆ ಎರಡು ಚಮಚ ತುಪ್ಪ ಹಾಕಿ, ಅದಕ್ಕೆ ಪೀಸ್ ಪೀಸ್ ಮಾಡಿದ್ದ ಬೆಲ್ಲವನ್ನು ಹಾಕಿ. (ಸಿಹಿ ಬೇಕಾದಲ್ಲಿ ಇನ್ನೂ ಹಾಕಬಹುದು)
* ಬೆಲ್ಲ ಕರಗಿದ ನಂತರ ಅದಕ್ಕೆ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ.
* ಈಗ ಒಂದು ಬೌಲ್ಗೆ ರುಬ್ಬಿದ ಪುಡಿ, ಬೆಲ್ಲದ ಪಾಕ, ತೆಂಗಿನ ತುರಿ, ಸಣ್ಣಗೆ ಪೀಸ್ ಮಾಡಿರುವ ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಗಸಗಸೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಕೈಯಲ್ಲಿ ಲಡ್ಡು ಆಕಾರಕ್ಕೆ ಉಂಡೆ ಮಾಡಿ ಒಂದು ಪ್ಲೇಟ್ಗೆ ಹಾಕಿ 2-3 ಗಂಟೆ ಒಣಗಲು ಬಿಡಿ. ನಂತರ ಗಣೇಶನಿಗಾಗಿ ಚೂರ್ಮ ಲಡ್ಡು ಸಿದ್ಧ. ಮೋಲ್ಡ್ ಬಳಸಿ ಬೇಕಾದ ಆಕಾರದಲ್ಲಿ ಲಡ್ಡುಗಳನ್ನು ಮಾಡಬಹುದು.
Advertisement
ಇದನ್ನೂ ಓದಿ: ಗಣೇಶನಿಗೆ ಪ್ರಿಯವಾದ ಮೋದಕ ಮಾಡುವ ವಿಧಾನ
Advertisement
ಇದನ್ನೂ ಓದಿ: ಗಣೇಶನಿಗಾಗಿ ಸಿಹಿ ಕಡುಬು ಮಾಡುವ ವಿಧಾನ