ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದ ಮಾಲಿಕತ್ವದ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು. ಈದ್ಗಾ ಮೈದಾನದಲ್ಲಿ ಈ ಬಾರಿ ಗಣೇಶೋತ್ಸವಕ್ಕೆ ಅನುಮತಿ ನಿರಾಕರಿಸಿದೆ.
ಈದ್ಗಾ ಮೈದಾನವನ್ನು ಆಟದ ಮೈದಾನವಾಗಿ ಮಾತ್ರವೇ ಬಳಸಬೇಕು, ರಂಜಾನ್, ಬಕ್ರೀದ್ ವೇಳೆ ಮಾತ್ರ ಪ್ರಾರ್ಥನೆ ಸಲ್ಲಿಸಬೇಕು. ಆದರೆ ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ಅವಾಶಕ ಇರುವುದಿಲ್ಲ ಎಂದು ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರಿದ್ದ ಪೀಠ ಆದೇಶಿಸಿದೆ. ಸೆ.23ಕ್ಕೆ ವಿಚಾರಣೆ ಮುಂದೂಡಿದೆ. ಇದನ್ನೂ ಓದಿ: ರಾಕೆಟ್ರಿ’ ಸಿನಿಮಾದಲ್ಲಿ ಇಸ್ರೊಗೆ ಕಳಂಕ ತರುವಂತಹ ಸುಳ್ಳುಗಳನ್ನು ಹೇಳಲಾಗಿದೆ: ಮಾಜಿ ವಿಜ್ಞಾನಿಗಳ ಆರೋಪ
Advertisement
Advertisement
ರಂಜಾನ್ ಹಾಗೂ ಬಕ್ರೀದ್ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ಇದೆ. ಆದರೆ ಶುಕ್ರವಾರದ ಪ್ರಾರ್ಥನೆಗೆ ಅವಕಾಶವಿಲ್ಲ. ಜೊತೆಗೆ ಈದ್ಗಾ ಮೈದಾನದಲ್ಲಿ ಧ್ವಜಾರೋಹಣಕ್ಕೆ ಯಾವುದೇ ಅನುಮತಿ ಬೇಕಿಲ್ಲ ಎಂದು ಹೇಳಿರುವ ಪೀಠವು ಇದನ್ನು ಹುಬ್ಬಳ್ಳಿ ಈದ್ಗಾ ಮೈದಾನದ (ವಿವಾದ) ರೀತಿಯಲ್ಲಿ ಮಾಡಬೇಡಿ. ಯಾವುದೇ ವಿವಾದಕ್ಕೆ ಆಸ್ಪದ ನೀಡದೇ ಯಥಾಸ್ಥಿತಿ ಕಾಪಾಡಿ ಎಂದು ಸರ್ಕಾರಕ್ಕೆ ಮೌಖಿಕ ಸೂಚನೆ ನೀಡಿದೆ. ಇದನ್ನೂ ಓದಿ: ಉರಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ
Advertisement
ಈ ಸಂಬಂಧ ಮಾತನಾಡಿದ ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ, ನಾನು ಶಾಸಕಿ ಆಗಿದ್ದಾಗ ಗಣೇಶ ಉತ್ಸವ, ದಸರಾ ಕನ್ನೆ ರಾಜೋತ್ಸವ ಮಾಡಬಹುದು ಅಂತಾ ಹೇಳಿದ್ದೆವು. ಆದರೆ ಈ ಬಾರಿ ಕೋರ್ಟ್ ಯಥಾಸ್ಥಿತಿ ಕಾಪಾಡಿ ಎಂದು ಹೇಳಿದೆ.
Advertisement
ನಾನು, ಶಾಸಕ ಜಮೀರ್ ಸಾಹೇಬ್ರು ಇದ್ದಾಗ ಈ ಮೈದಾನದಲ್ಲಿ ಗಣೇಶ ಉತ್ಸವ, ರಂಜಾನ್, ದಸರಾ ಉತ್ಸವ ಎಲ್ಲವೂ ಆಗ್ಬೇಕು ಅಂತಾ ಮಾತಾಡಿಕೊಂಡಿದ್ವಿ. ಅದು ಯಥಾಸ್ಥಿತಿ ಅಂತಾ ನಾವು ಅಂದ್ಕೊಂಡಿದ್ವಿ. ಈಗ ಹೈಕೋರ್ಟ್ ಯಥಾಸ್ಥಿತಿ ಅಂತಾ ಆದೇಶ ನೀಡಿದೆ. ಆದೇಶದಲ್ಲಿ ಇದೊಂದು ಮೈದಾನ ಇಲ್ಲಿ ಆಟ ಆಡಬಹುದು ಎಂದಿದೆ. ಈ ಜಾಗ ಸಾರ್ವಜನಿಕರ ಜಾಗವೇ ಹೊರತು ವಕ್ಫ್ ಬೋರ್ಡ್ ಜಾಗ ಅಲ್ಲ. ಕಾರ್ಪೊರೇಷನ್ ಅವ್ರ ಜಾಗವೂ ಅಲ್ಲ ಎಂದು ಹೇಳಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೋರ್ಟ್ ಆದೇಶದಲ್ಲಿ ವರ್ಷದಲ್ಲಿ 2 ಬಾರಿ ಮಾತ್ರ ಪ್ರಾರ್ಥನೆ ಮಾಡೋದಕ್ಕೆ ಅವಕಾಶ ಇದೆ. ಕೋರ್ಟ್ ಮಕ್ಕಳು ಆಟ ಆಡಬಹುದು, ರಂಜಾನ್, ಬಕ್ರೀದ್‌ಗೆ ಪ್ರಾರ್ಥನೆ ಸಲ್ಲಿಸಬಹುದು ಎಂದು ಹೇಳಿದೆಯೇ ಹೊರತು ಬೇರೆ ಆಚರಣೆ ಮಾಡಬೇಡಿ ಎಂದು ಹೇಳಿಲ್ಲ. ಹಾಗಾಗಿ ನಾವು ಗಣೇಶ ಹಬ್ಬ ಮಾಡೇ ಮಾಡ್ತೀವಿ. ಅದು ಸಾರ್ವಜನಿಕ ಆಸ್ತಿ ಅದರಲ್ಲಿ ನಮಗೂ ಸಮಾನ ಹಕ್ಕಿದೆ. ನಾವು ಗಣೇಶ ಹಬ್ಬ ಆಚರಣೆ ಮಾಡೇ ಮಾಡ್ತೀವಿ ಎಂದು ಪಟ್ಟು ಹಿಡಿದಿದ್ದಾರೆ.