ರಾಷ್ಟ್ರದಾದ್ಯಂತ ಗಣೇಶ ಹಬ್ಬದ ಸಂಭ್ರಮ, ಸಡಗರ ಮನೆ ಮಾಡಿದೆ. ವಿಘ್ನವಿನಾಶಕ, ಪಾರ್ವತಿ ಪುತ್ರ ಗಣಪನ ಆರಾಧನೆ ಮಾಡಲಾಗ್ತಿದೆ. ಪ್ರತಿ ಮನೆ ಮನಗಳಲ್ಲಿ ಗೌರಿ ಹಾಗೂ ಗಣೇಶನ ಆಗಮನವಾಗಿದೆ. ವಿಶೇಷವಾಗಿ ಅಲಂಕರಿಸಿ ವಿವಿಧ ರೀತಿಯಲ್ಲಿ ಅದ್ಧೂರಿಯಾಗಿ ಪೂಜೆ ಪುನಸ್ಕಾರಗಳನ್ನ ಮಾಡಲಾಗ್ತಿದೆ. ಇನ್ನು ಸ್ಯಾಂಡಲ್‌ವುಡ್ ಇದಕ್ಕೆ ಹೊರತಾಗಿಲ್ಲ. ಸೆಲೆಬ್ರಿಟಿಗಳು ತುಂಬಾನೇ ವಿಶೇಷವಾಗಿ ಗಣೇಶ ಹಬ್ಬವನ್ನ (Ganeshotsava) ಆಚರಿಸಿದ್ದಾರೆ.
ರಿಯಲ್‌ಸ್ಟಾರ್ ಉಪೇಂದ್ರ (Upendra) ತಮ್ಮ ಮನೆಯಲ್ಲಿ ಗೌರಿ ಗಣೇಶನನ್ನ ಕೂರಿಸಿ ಪೂಜೆ ಮಾಡಿ ಸಂಭ್ರಮಿಸಿದ್ದಾರೆ. ಕುಟುಂಬಸ್ಥರು ಗೌರಿ ಗಣೇಶ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ಹಬ್ಬದ ಸಂಭ್ರಮದಲ್ಲಿ ಕುಟುಂಬಸ್ಥರೆಲ್ಲ ಒಟ್ಟಾಗಿ ಗಣೇಶ ಚತುರ್ಥಿ ಆಚರಿಸಿದ ಕ್ಷಣವನ್ನ ಫೋಟೋದಲ್ಲಿ ಸೆರೆಹಿಡಿಯಲಾಗಿದೆ. ಸದ್ಯ ರಿಯಲ್‌ಸ್ಟಾರ್ ನಟಿಸಿ, ನಿರ್ದೇಶನ ಮಾಡಿರೋ `ಯುಐ’ ಸಿನಿಮಾಗಾಗಿ ಫ್ಯಾನ್ಸ್ ವೇಟ್ ಮಾಡ್ತಿದ್ದಾರೆ.
`ಕೆಡಿ’ ಸಿನಿಮಾ ತಂಡದಿಂದ ಗೌರಿ ಗಣೇಶ ಹಬ್ಬದ ಆಚರಣೆ ಮಾಡಲಾಗಿದೆ. ನಾಯಕ ಧ್ರುವ ಸರ್ಜಾ (Dhruva Sarja), ನಾಯಕಿ ರೀಷ್ಮಾ ನಾಣಯ್ಯ, ನಿರ್ದೇಶಕ ಪ್ರೇಮ್ ಹಾಗೂ ಇಡೀ ಚಿತ್ರತಂಡ ಗಣೇಶ ಚತುರ್ಥಿಯಲ್ಲಿ ಭಾಗಿಯಾಗಿದೆ. `ಕೆಡಿ’ ಸಿನಿಮಾತಂಡ ಶ್ವೇತ ವಸ್ತçಧಾರಿಗಳಾಗಿ ಪೂಜೆಯಲ್ಲಿ ಭಾಗಿಯಾಗಿದ್ದು, ವಿಶೇಷವಾಗಿ ಗಮನಸೆಳೆದಿದೆ. ಆ್ಯಕ್ಷನ್‌ಪ್ರಿನ್ಸ್ ಧ್ರುವ ಸರ್ಜಾ ನಟನೆಯ `ಮಾರ್ಟಿನ್’ ಸಿನಿಮಾ ಅಕ್ಟೋಬರ್‌ನಲ್ಲಿ ತೆರೆಗೆ ಬರೋಕೆ ಸಿದ್ಧವಾಗಿದೆ.
ನಟಿ ಶ್ವೇತಾ ಚಂಗಪ್ಪ ಕೂಡಾ ತಮ್ಮ ಮನೆಯಲ್ಲಿ ವಿಘ್ನೇಶ್ವರನನ್ನ ಕೂರಿಸಿ ವಿಶೇಷವಾಗಿ ಪೂಜೆ ಮಾಡಿದ್ದಾರೆ. ಗಣೇಶನ ಮುಂದೆ ಕುಳಿತು ನಾಡಿನ ಸಮಸ್ತ ಜನತೆಗೆ ಶುಭಾಶಯ ಕೋರಿದ್ದಾರೆ. ನಟಿ ಕವಿತಾ ಗೌಡ ಕೂಡಾ ಮನೆಯಲ್ಲಿ ಗಣೇಶನ ಕೂರಿಸಿ ವಿಶೇಷವಾಗಿ ಪೂಜೆ ಮಾಡಿದ್ದಾರೆ. ಕವಿತಾ ಹಾಗೂ ಚಂದನ್ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.