ರಾಂಚಿ: ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ವಿವಿಧ ರೀತಿಯ ಗಣಪನನ್ನು ಕೂರಿಸಿ ಜನರು ಸಂಭ್ರಮಿಸುತ್ತಿದ್ದಾರೆ. ಇಲ್ಲೊಬ್ಬರು ಗಣೇಶನನ್ನು ಪೆಂಡಾಲ್‌ನ್ನು ಆಧಾರ್ ಕಾರ್ಡ್ ರೀತಿ ಮಾಡಿ ಕೂರಿಸಿದ್ದಾರೆ.
ಈ ವಿಚಿತ್ರ ಘಟನೆ ಜಾರ್ಖಂಡ್‍ನ ಜುಮ್ಶೆಡ್‍ಪುರದಲ್ಲಿ ನಡೆದಿದೆ. ಈ ಪೆಂಡಾಲ್‌ನಲ್ಲಿ ಸಾಮಾನ್ಯವಾಗಿ ಆಧಾರ್ ಕಾರ್ಡ್‍ನಲ್ಲಿ ಯಾವ ಯಾವ ಮಾಹಿತಿ ಇರುತ್ತದೆಯೋ ಅವೆಲ್ಲಾ ಮಾಹಿತಿಯೂ ಇದೆ. ಗಣೇಶನಿಗೆ ಹುಟ್ಟಿದ ದಿನಾಂಕದಿಂದ ಆತನ ವಿಳಾಸವನ್ನು ಇದರಲ್ಲಿ ಎಂದು ಬರೆದಿದ್ದಾರೆ. ಅಷ್ಟೇ ಯಾಕೇ ಕ್ಯೂಆರ್ ಕೋಡ್‍ನ್ನು ರಚಿಸಿದ್ದಾರೆ. ಈ ಬಾರ್‌ಕೋಡ್‍ನ್ನು ಸ್ಕ್ಯಾನ್ ಮಾಡಿದರೆ ಗಣೇಶನ ವಿವಿಧ ಚಿತ್ರಗಳ ಗೂಗಲ್ ಲಿಂಕ್‍ಗಳನ್ನು ನಾವು ನೋಡಬಹುದಾಗಿದೆ.
Advertisement
Advertisement
ಹೆಸರು, ವಿಳಾಸ ಏನಿದೆ?: ಶ್ರೀಗಣೇಶ್, S/O ಮಹದೇವ, ಕೈಲಾಸ ಪರ್ವತ, ಟಾಪ್ ಫ್ಲೋರ್, ಮಾನಸ ಸರೋವರದ ಹತ್ತಿರವಿರುವ ಕೈಲಾಸ ಪಿನ್‍ಕೋಡ್-000001 ಹಾಗೂ ಹುಟ್ಟಿದ ವರ್ಷ ಕ್ರಿ.ಪೂ 01/01/600 ಎಂದು ಬರೆದಿದ್ದಾರೆ. ಇದನ್ನೂ ಓದಿ: ಕ್ಷೇಮವನ ಜೀವನದ ಸೂತ್ರವಾಗಲಿ: ಬೊಮ್ಮಾಯಿ
Advertisement
ಈ ಬಗ್ಗೆ ಗಣೇಶ್ ಪೆಂಡಾಲ್‌ನ ಆಯೋಜಕ ಸರವ್ ಕುಮಾರ್ ಮಾತನಾಡಿ, ನಾನು ಒಮ್ಮೆ ಕೆಲಸದ ನಿಮಿತ್ತ ಕೋಲ್ಕತ್ತಾಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಫೇಸ್‍ಬುಕ್ ಥಿಮ್‍ನ ಪೆಂಡಾಲ್‍ನ್ನು ತಯಾರಿಸಲಾಗಿತ್ತು. ಇದನ್ನು ನೋಡಿದ ನನಗೆ ಗಣೇಶ್ ಪೂಜೆಯನ್ನು ಮಾಡುವಾಗ ನಾವೂ ಏನಾದರೂ ವಿಶಿಷ್ಟ ಕೆಲಸ ಮಾಡಬೇಕು ಎಂಬ ಆಲೋಚನೆ ಬಂತು. ಈ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ಪೆಂಡಾಲ್‌ನ್ನು ಮಾಡಿದ್ದು, ಇದರ ಪ್ರಮುಖ ಮಾಹಿತಿಯೆಂದರೆ, ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿರುವುದರಿಂದ, ಆಧಾರ್ ಕಾರ್ಡ್ ಮಾಡಿಸಿಕೊಳ್ಳದೇ ಇರುವವರು ಆದಷ್ಟು ಬೇಗ ಮಾಡಿಸಿಕೊಡಿ ಎನ್ನುವುದಾಗಿದೆ ಎಂದು ತಿಳಿಸಿದರು.
Advertisement
ಈ ಕುತೂಹಲಕಾರಿಯಾದ ಗಣೇಶನ ಪೆಂಡಾಲ್‌ನ್ನು ಹಲವಾರು ಜನರು ಆನಂದಿಸುತ್ತಿದ್ದಾರೆ. ಅದರೊಂದಿಗೆ ಫೋಟೋಗಳು ಮತ್ತು ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ಹಂದಿಜ್ವರಕ್ಕೆ ತುಂಬು ಗರ್ಭಿಣಿ ಬಲಿ