ಬೆಂಗಳೂರು: ಗಣೇಶ ಚತುರ್ಥಿಗೆ (Ganesh Chaturthi) ಎಲ್ಲ ಕಡೆ ವಿಭಿನ್ನವಾಗಿ ವಿಶೇಷವಾಗಿ ಗಣೇಶನನ್ನ ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರ ಮಾಡುತ್ತಾರೆ. ಅನೇಕ ವರ್ಷಗಳಿಂದ ಗಣೇಶನನ್ನ ಹೀಗೂ ಕೂರಿಸಬಹುದಾ ಅಂತಾ ಅಚ್ಚರಿ ಪಡುವಂತೆ ವಿನಾಯಕನನ್ನ ಕೂರಿಸಿ ಹಬ್ಬ ಮಾಡುತ್ತಾ ಬಂದಿರೋ ಜೆಪಿ ನಗರದ ಬಳಿ ಇರೋ ಪುಟ್ಟೇನಹಳ್ಳಿಯ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್ ನವರು ಈ ಬಾರಿ ಅತ್ಯಂತ ವಿಭಿನ್ನವಾದ ಅಲಂಕಾರವನ್ನ ಮಾಡಿದ್ದಾರೆ.
Advertisement
ಹೌದು, ಗಣೇಶ ಹಬ್ಬದ ಪ್ರಯುಕ್ತ 52.5 ಲಕ್ಷ ರೂ. ಮೊತ್ತದ ನಾಣ್ಯ, ಕೋಟ್ಯಂತರ ರೂ ಮೌಲ್ಯದ ನೋಟುಗಳಿಂದ ಗಣಪತಿಗೆ ವಿಶೇಷ ಅಲಂಕಾರವನ್ನ ಮಾಡಲಾಗಿದೆ. ಇಡೀ ದೇವಾಲಯದ ಆವರಣವನ್ನ 5,10,20 ರೂಪಾಯಿ ಮೌಲ್ಯದ ನಾಣ್ಯಗಳು ಮತ್ತು 10, 20, 50, 100, 200, 500 ರೂಪಾಯಿ ನೋಟ್‍ಗಳನ್ನ ಬಳಸಿಕೊಂಡು ಹೂವಿನಂತೆ ಮಾಲೆಗಳನ್ನ ಮಾಡಿ ಅಲಂಕಾರ ಮಾಡಿದ್ದಾರೆ. ಇದನ್ನೂ ಓದಿ: ವಿಘ್ನ ನಿವಾರಕ ಗಣೇಶ ಹಬ್ಬದ ಮಹತ್ವವೇನು?
Advertisement
Advertisement
ಸರಿಸುಮಾರು 2.5 ಕೋಟಿ ಮೌಲ್ಯದ ನೋಟು ಮತ್ತು ನಾಣ್ಯಗಳ ಮೂಲಕ ಅಲಂಕಾರ ಮಾಡಿದ್ದು, ಇದಕ್ಕಾಗಿ 150 ಜನ ಒಂದು ತಿಂಗಳಿಂದ ಶ್ರಮಿಸಿದೆ. ಯಾವುದೇ ಸಮಸ್ಯೆಗಳು ಆಗದಂತೆ 25 ಜನ ಸೆಕ್ಯೂರಿಟಿ ಮತ್ತು ಇಡೀ ದೇವಾಲಯದಲ್ಲಿ ಸಿಸಿಟಿವಿ ಆಳವಡಿಸಿದ್ದಾರೆ. ಭಕ್ತಿರಿಗೆ ದೇವರ ದರ್ಶನಕ್ಕೆ ಬ್ಯಾರಿಕೇಟ್ ಹಾಕಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ನಾಣ್ಯಗಳಿಂದಲೇ ಗಣೇಶನ ಫೋಟೋಗಳು, ಭಾರತದ ನಕ್ಷೆ, ಕರ್ನಾಟಕದ ನಕ್ಷೆ, ಚಂದ್ರಯಾನದ ಚಿತ್ರ ಸೇರಿದಂತೆ ಜೈ ಜವಾನ್ ಜೈ ಕಿಸಾನ್ ಚಿತ್ರಗಳನ್ನ ಮಾಡಿದ್ದಾರೆ. ಈ ಅಲಂಕಾರ ನೋಡಿದ ಭಕ್ತರು ಸಹ ತುಂಬಾ ಸಂತೋಷಗೊಂಡಿದ್ದಾರೆ.
Advertisement
ಒಟ್ಟಿನಲ್ಲಿ ನೋಟು ಹಾಗೂ ಕಾಯಿನ್ಸ್‍ಗಳಿಂದ ಅಲಂಕಾರವಾಗಿರೋ ದೇವಾಲದಲ್ಲಿ ಗಣೇಶನ ದರ್ಶನ ಪಡೆಯೋ ಫೀಲೇ ಬೇರೆ. ಇನ್ನೂ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನ ಭಕ್ತರು, ದೇವಾಲಯದ ಟ್ರೆಸ್ಟಿಗಳು, ಮತ್ತು ಸಿನಿ ನಾಯಕರು ದಾನವಾಗಿ ನೀಡಿದ್ದಾರೆ. ಭಕ್ತರ ಡಿಮ್ಯಾಂಡ್ ಇರೋವರೆಗೆ ಈ ಅಲಂಕಾರವನ್ನ ಉಳಿಸಿಕೊಳ್ಳೋ ಯೋಜನೆಯನ್ನ ದೇವಾಲಯದ ಆಡಳಿತ ಮಂಡಳಿ ಮಾಡಿಕೊಂಡಿದೆ.
Web Stories