Bengaluru CityKarnatakaLatestMain Post

ಚಾಮರಾಜಪೇಟೆ ಮೈದಾನ ಬಳಿ ಗಣೇಶ ಗಲಾಟೆ – ಗಣೇಶ ಪ್ರತಿಷ್ಠಾಪನೆಗೆ ಪಟ್ಟು, ಠಾಣೆಗೆ ಮುತ್ತಿಗೆ

ಬೆಂಗಳೂರು: ಚಾಮರಾಜಪೇಟೆ ಮೈದಾನ ಗಲಾಟೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಈದ್ಗಾ ಮೈದಾನದ ಸನಿಹದಲ್ಲಿಯೇ ಇರುವ ಮಲೆಮಹದೇಶ್ವರ ದೇಗುಲದ ಮುಂದೆ ಗಣೇಶ ಪ್ರತಿಷ್ಠಾಪನೆ ಪೊಲೀಸರು ಅವಕಾಶ ನೀಡಿಲ್ಲ. ಇದರಿಂದ ಕೆಲ ಹೊತ್ತು ಹೈಡ್ರಾಮಾವೇ ನಡೆದಿದೆ.

ಈದ್ಗಾ ಮೈದಾನದ ಸನಿಹದಲ್ಲಿಯೇ ಇರುವ ಮಲೆಮಹದೇಶ್ವರ ದೇಗುಲದ ಮುಂದೆ ಗಣೇಶ ಪ್ರತಿಷ್ಠಾಪನೆ ಪೊಲೀಸರು ಅವಕಾಶ ನೀಡಿಲ್ಲ. ಇದರಿಂದ ಕೆಲವೊತ್ತು ಹೈಡ್ರಾಮಾವೇ ನಡೀತು. ಈದ್ಗಾ ಸನಿಹದಲ್ಲಿರೋ ಮಹದೇಶ್ವರ ದೇವಾಲಯದ ಅರಳಿಮರದ ಬಳಿ ಗಣೇಶ ಪ್ರತಿಷ್ಠಾಪನೆಗೆ ಹಿಂದೂ ಸಂಘಟನೆ ಮುಂದಾಗಿತ್ತು. ಆದರೆ ಸುಪ್ರೀಂಕೋರ್ಟ್ ಯಥಾಸ್ಥಿತಿ ಸೂಚನೆ ಹಿನ್ನೆಲೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಗಣೇಶನ ಮೆರವಣಿಗೆ ರೂಟ್ ಬಗ್ಗೆ ಮಾಹಿತಿ ನೀಡದೇ, ಪ್ರತಿಷ್ಠಾಪನೆ ಮಾಡಲಿರುವ ಗಣೇಶನ ಎತ್ತರ ತಿಳಿಸದ ಕಾರಣ ಗಣೇಶನನ್ನು ಕೂರಿಸಲು ಅವಕಾಶ ನೀಡಲ್ಲ ಎಂದು ಪೊಲೀಸರು ಖಡಕ್ ಸೂಚನೆ ನೀಡಿದರು. ಇದನ್ನೂ ಓದಿ: ಮೋದಿ ತಿಂಗಳಿಗೊಮ್ಮೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ – ಪ್ರಚಾರಕ್ಕೂ ಬರುತ್ತಾರೆ: ಬಿಎಸ್‍ವೈ

ಬಳಿಕ ಪಾದರಾಯನಪುರ, ಜೆಜೆಆರ್ ನಗರ, ಸಿರ್ಸಿ ಸರ್ಕಲ್, ಗೋರಿಪಾಳ್ಯದಲ್ಲಿ ಮೆರವಣಿಗೆ ಮಾಡ್ತೀವಿ. ಅನುಮತಿ ನೀಡಿ ಎಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದವು. ಆದ್ರೆ ಮನವಿಯನ್ನು ಪೊಲೀಸರು ತಿರಸ್ಕರಿಸಿದ್ರು. ಇದನ್ನು ಖಂಡಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಗಣೇಶ ಉತ್ಸವ ಸಮಿತಿ ಸದಸ್ಯರು ಚಾಮರಾಜಪೇಟೆ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದ್ರು. ಈ ವೇಳೆ ಪೊಲೀಸರು ಮತ್ತು ಗಣೇಶ ಉತ್ಸವ ಸಮಿತಿ ಸದಸ್ಯರ ಮಧ್ಯೆ ವಾಗ್ವಾದ ನಡೀತು. 30ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ರು. ಈ ಮಧ್ಯೆ ಈದ್ಗಾ ಮೈದಾನಕ್ಕೆ ಡಿಸಿಪಿ ಲಕ್ಷ್ಮಣ್ ನಿಂಬರಗಿ ಭೇಟಿ ನೀಡಿ ಭದ್ರತೆ ಪರಿಶೀಲಿಸಿದ್ರು. ಇದನ್ನೂ ಓದಿ: ತನಿಖೆಗೆ ಸಹಕರಿಸದೇ ಮುರುಘಾ ಶ್ರೀ ಮತ್ತೆ ಆಸ್ಪತ್ರೆ ಸುತ್ತಾಟ

Live Tv

Leave a Reply

Your email address will not be published.

Back to top button