ಸಿಡ್ನಿ: ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ ಗಣೇಶ ಚತುರ್ಥಿಯ ಶುಭಕೋರಿ ಭಾರತೀಯ ಅಭಿಮಾನಿಗಳ ಮನಗೆದ್ದಿದ್ದಾರೆ.
ಇಂದು ಭಾರತದಲ್ಲಿ ಗಣೇಶ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಈ ಸಂದರ್ಭದಲ್ಲಿ ಭಾರತೀಯರ ಮೇಲೆ ಹೆಚ್ಚಿನ ಅಭಿಮಾನ ಹೊಂದಿರುವ ವಾರ್ನರ್ ಭಾರತದಲ್ಲಿ ಆಚರಿಸುತ್ತಿರುವ ಗಣೇಶ ಹಬ್ಬಕ್ಕೆ ವಿಶೇಷವಾಗಿ ಪೋಸ್ಟರ್ ರಚಿಸಿ ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಶುಭಹಾರೈಸಿದ್ದಾರೆ. ಇದನ್ನೂ ಓದಿ: ಏಷ್ಯಾಕಪ್ ಸೋಲು – ಪಾಕಿಸ್ತಾನ ಕಾಲೆಳೆದ ವಾಸಿಮ್ ಜಾಫರ್
View this post on Instagram
ವಾರ್ನರ್ ಆಸ್ಟ್ರೇಲಿಯಾದ ಆಟಗಾರರಾಗಿದ್ದರೂ ಭಾರತ ಮತ್ತು ಇಲ್ಲಿನ ಆಚರಣೆಗಳ ಮೇಲೆ ನಂಬಿಕೆ ಹೊಂದಿದ್ದಾರೆ. ಐಪಿಎಲ್ ವೇಳೆ ಇಲ್ಲಿನ ಆಚಾರ ವಿಚಾರಗಳ ಬಗ್ಗೆ ತಿಳಿದುಕೊಂಡು ವಾರ್ನರ್ ಭಾರತದ ಬಗ್ಗೆ ಹೆಚ್ಚಿನ ಅಭಿಮಾನ ಹೊಂದಿದ್ದಾರೆ. ಇಲ್ಲಿನ ಸಿನಿಮಾ, ಹಾಡಿನ ಕುರಿತಾಗಿ ವಾರ್ನರ್ ವಿಶೇಷ ಒಲವನ್ನು ಹೊಂದಿದ್ದು, ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದನ್ನೂ ಓದಿ: ಟಿವಿ ಸ್ಕ್ರೀನ್ನಲ್ಲೇ ಹಾರ್ದಿಕ್ ಪಾಂಡ್ಯಾಗೆ ಮುತ್ತಿಟ್ಟ ಅಫ್ಘನ್ ಅಭಿಮಾನಿ