ಬೆಂಗಳೂರು: ಕನ್ನಡದ ಸುದ್ದಿವಾಹಿನಿ ‘ಪಬ್ಲಿಕ್ ಟಿವಿ’ (Public TV) ಕಚೇರಿಯಲ್ಲಿ ಇಂದು ಗೌರಿ-ಗಣೇಶ ಹಬ್ಬವನ್ನು (Ganesh Chaturthi) ಆಚರಿಸಲಾಯಿತು.
ಪಬ್ಲಿಕ್ ಟಿವಿಯಲ್ಲಿ ಸತತವಾಗಿ 12 ವರ್ಷಗಳಿಂದ ಅದ್ಧೂರಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಅದರಂತೆ ಈ ಬಾರಿಯೂ 12 ನೇ ವರ್ಷದ ಗಣೇಶೋತ್ಸವ ಅದ್ಧೂರಿಯಾಗಿ ಆಚರಿಸಲಾಯಿತು. ಇದನ್ನೂ ಓದಿ: ಬಲಮುರಿ ಹಾಗೂ ಎಡಮುರಿ ಗಣಪತಿಗೆ ಇರುವ ವ್ಯತ್ಯಾಸವೇನು?
`ಕೈಲಾಸದಲ್ಲಿ ಗಣಪ’ ಈ ಬಾರಿಯ ವಿಶೇಷವಾಗಿತ್ತು. ಇಂದು ಬೆಳಗ್ಗೆ 10:30 ಕ್ಕೆ ಕಚೇರಿಯಲ್ಲಿ ಪೂಜಾ ಕಾರ್ಯಕ್ರಮ ಜರುಗಿತು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್, ಸಂಪಾದಕರಾದ ಸಿ. ದಿವಾಕರ್ ಸೇರಿದಂತೆ ಪಬ್ಲಿಕ್ ಟಿವಿಯ ಎಲ್ಲಾ ಸಿಬ್ಬಂದಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಪೂಜೆ ನಂತರ ಸಿಬ್ಬಂದಿಗೆ ಪ್ರಸಾದ ವಿತರಣೆ ಮಾಡಲಾಯಿತು. ಮೂರು ದಿನಗಳ ಕಾಲ ವಿಜೃಂಭಣೆಯಿಂದ ಪೂಜೆ ನಡೆಯಲಿದೆ. ಇದನ್ನೂ ಓದಿ: Ganesh Chaturthi: ದೇಶದೆಲ್ಲೆಡೆ ಗೌರಿ-ಗಣೇಶ ಹಬ್ಬ ಸಂಭ್ರಮ – ಎಲ್ಲೆಲ್ಲಿ ಆಚರಣೆ ಹೇಗೆ?