Connect with us

Chitradurga

ದುರ್ಗದ ಕೋಟೆಯಲ್ಲಿ ‘ವೀರ ಮದಕರಿ ನಾಯಕ’ನಾಗಿ ಸಾರಥಿಯ ಪಯಣ

Published

on

ಚಿತ್ರದುರ್ಗ: ಗಂಡುಗಲಿ ಮದಕರಿ ನಾಯಕ ಸಿನಿಮಾಗೆ ಸಿದ್ಧತೆ ನಡೆದಿದೆ. ಸಿನಿಮಾ ಅಂದ್ರೆ ಇವತ್ತು ಮೇಕಪ್ ಹಾಕಿಕೊಂಡು ನಾಳೆ ನಟನೆಗೆ ಹೋಗುವುದಲ್ಲ. ಅದಕ್ಕೆ ಬೇಕಾಗಿರುವ ತಯಾರಿ ಅಂತ ಇರುತ್ತದೆ. ಅದನ್ನು ಈಗ ಮಾಡಿಕೊಳ್ಳುತ್ತಿದ್ದೇವೆ ಎಂದು ನಟ ದರ್ಶನ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಹಾಗೂ ವೀರ ಮದಕರಿ ನಾಯಕ ಪಾತ್ರಗಳು ಬೇರೆ ಭಿನ್ನವಾಗಿವೆ. ಆಯಾ ಪಾತ್ರಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎಂದರು.

ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರು, ಗಂಡುಗಲಿ ಮದಕರಿ ನಾಯಕನ ಕುರಿತು ಸಿನಿಮಾ ನಿರ್ಮಿಸುವ ಬಗ್ಗೆ ಸುಮಾರು ವರ್ಷಗಳಿಂದ ಯೋಚನೆ ಮಾಡಿದ್ದೇವು. ಈ ವಿಚಾರವನ್ನು ಹಿರಿಯ ನಿರ್ಮಾಪ ರಾಜೇಂದ್ರಸಿಂಗ್ ಬಾಬು ಅವರೊಂದಿಗೆ ಎಂಟು ವರ್ಷಗಳಿಂದ ಮಾತನಾಡುತ್ತಾ ಬಂದಿದ್ದೇನೆ. ಕಳೆದ ಮೂರು ವರ್ಷಗಳಿಂದ ಸೂಕ್ತ ದಾಖಲೆ, ಮಾಹಿತಿ ಕಲೆ ಹಾಕಿದ್ದೇವೆ ಎಂದು ತಿಳಿಸಿದರು.

ರಾಜೇಂದ್ರಸಿಂಗ್ ಬಾಬು ಅವರು ಇತಿಹಾಸ ಅರಿತವರು. ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿರುವ ಬಗ್ಗೆ ನನಗೆ ಖುಷಿ ಇದೆ. ನಿರ್ಮಾಪಕ ಮುನಿರತ್ನ ಅವರ ಕುರುಕ್ಷೇತ್ರ ಸಿನಿಮಾ ಮೂಲಕ ನನಗೂ ಐತಿಹಾಸಿಕ ಸಿನಿಮಾ ಪ್ರೇರಣೆ ಸಿಕ್ಕಿತು. ಆಗ ದರ್ಶನ್ ಅವರನ್ನು ಕೇಳಿದಾಗ ಯಾವಾಗ ಮಾಡೋಣ ಹೇಳಿ ಅಣ್ಣ ಅಂದ್ರು. ಈ ಮೂಲಕ ಐತಿಹಾಸಿಕ ಸಿನಿಮಾ ಮಾಡಲು ನಾನು ಮುಂದಾದೆ. ಹಿರಿಯ ನಟ ದೊಡ್ಡಣ್ಣ ಕೂಡ ಸಾಥ್ ನೀಡಿದರು ಎಂದು ಹೇಳಿದರು.

ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಮಾತನಾಡಿ, ವೀರ ಮದಕರಿ ನಾಯಕನ ಸಿನಿಮಾ ಮಾಡಲು ಅನೇಕರು ಪ್ರಯತ್ನಿಸಿದರು ಆದರೆ ಆಗಲಿಲ್ಲ. ಮದಕರಿ ನಾಯಕನಿಗೆ ದರ್ಶನ್ ನಟನೆ ಹಾಗೂ ರಾಕ್‍ಲೈನ್ ವೆಂಕಟೇಶ್ ಅವರ ನಿರ್ಮಾಣ ಬೇಕಿತ್ತು ಅಂತ ಕಾಣಿಸುತ್ತದೆ. ನಾನು ಕೂಡ ಪ್ರಯತ್ನಿಸಿದ್ದೆ ನನ್ನಿಂದಲೂ ಸಿನಿಮಾ ಮಾಡಲು ಆಗಲಿಲ್ಲ ಎಂದು ನೆನೆದರು.

ಸಾಹಿತಿ ಬಿ.ಎಲ್.ವೇಣು ಅವರ ಕಥೆಯನ್ನು ಪಡೆದಿದ್ದೇವೆ. ಅದರೊಂದಿಗೆ ಬೇರೆ ಬೇರೆ ರೀತಿಯ ಅಧ್ಯಯನ ಮಾಡಿದ್ದೇನೆ. ಚಿತ್ರದುರ್ಗದ ಮುರುಘಾಶ್ರೀಗಳ ಹಾಗೂ ನವ ದುರ್ಗೆಯರ ಆಶೀರ್ವಾದ ಪಡೆದು ಸಿನಿಮಾ ಆರಂಭಿಸುತ್ತಿದ್ದೇವೆ. ಜನವರಿಯಿಂದ ಚಿತ್ರೀಕರಣ ನಡೆಯಲಿದ್ದು, ಇದೇ ದಿನ ಬಿಡುಗಡೆ ಆಗುತ್ತದೆ ಎಂದು ಹೇಳುವುದು ಕಷ್ಟ ಎಂದು ಮಾಹಿತಿ ನೀಡಿದರು.

1 Comment

1 Comment

Leave a Reply

Your email address will not be published. Required fields are marked *