ಬೆಂಗಳೂರು: ಗಾಂಧೀಜಯಂತಿ (Gandhi Jayanti) ಅಂಗವಾಗಿ ಇಲ್ಲಿನ ಖಾದಿ ಎಂಪೋರಿಯಂಗೆ (Khadhi Emporium) ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಲೇಡಿಸ್ ಡ್ರೆಸ್ ಕೋಲ್ ಟಾಪ್ (LadiesCowltop), ರೆಡಿಮೇಡ್ ಫುಲ್ ಶರ್ಟ್ ಸೇರಿದಂತೆ ಒಟ್ಟು 3,329 ರೂ. ಬೆಲೆಯ ಖಾದಿ ಬಟ್ಟೆ ಖರೀದಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಜೊತೆಗೂಡಿ ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು, ಸಚಿವ ಗೋವಿಂದ ಕಾರಜೋಳ ಬೆಂಗಳೂರಿನ ಗಾಂಧಿ ಭವನದ ಬಳಿ ಇರುವ ಖಾದಿ ಎಂಪೋರಿಯಂನಲ್ಲಿ ಖಾದಿ ಬಟ್ಟೆಗಳನ್ನು ಖರೀದಿಸಿದ್ದಾರೆ. ಇದನ್ನೂ ಓದಿ: ಫುಟ್ಬಾಲ್ ತಂಡ ಸೋತಿದಕ್ಕೆ ಸ್ಟೇಡಿಯಂನಲ್ಲೇ ಗಲಭೆ – ಸಾವಿನ ಸಂಖ್ಯೆ 174ಕ್ಕೆ ಏರಿಕೆ, 180 ಮಂದಿಗೆ ಗಾಯ
ಸತ್ಯಾಗ್ರಹ ಮತ್ತು ಅಹಿಂಸೆ ಎಂಬ ಅಸ್ತ್ರಗಳಿಂದ ಭಾರತ ದೇಶವನ್ನು ದಾಸ್ಯದಿಂದ ಮುಕ್ತಿಗೊಳಿಸಲು ಸಮಸ್ತ ಭಾರತೀಯರನ್ನು ಒಗ್ಗೂಡಿಸಿ ಜಾಗತಿಕ ಮನ್ನಣೆಗಳಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು. pic.twitter.com/heTpZCsCPS
— Basavaraj S Bommai (@BSBommai) October 2, 2022
ಸಂಕಷ್ಟದಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಸಂಘ-ಸಂಸ್ಥೆಗಳಿಗೆ ಆರ್ಥಿಕ ಬಲ ನೀಡುವ ದೃಷ್ಟಿಯಿಂದ ಸಿಎಂ ಭೇಟಿ ನೀಡಿ 3 ಸಾವಿರಕ್ಕೂ ಹೆಚ್ಚು ಮೌಲ್ಯದ ಖಾದಿ ಬಟ್ಟೆಗಳನ್ನು (Khadi Dress) ಖರೀದಿಸಿದ್ದಾರೆ.
ಇದೇ ವೇಳೆ ಸಿಎಂಗೆ ಶಾಲು ಹೊದಿಸಿ, ಸನ್ಮಾನಿಸಿದ ಸಿಬ್ಬಂದಿ, ಹುಬ್ಬಳ್ಳಿಯ ಖಾದಿ ಎಂಪೋರಿಯಂಗೆ ಭೇಟಿ ನೀಡುವಂತೆ ಮನವಿ ಮಾಡಿದ್ದಾರೆ. ಕಳೆದ ಬಾರಿ ಆಶ್ವಾಸನೆ ನೀಡಿದ್ದೀರಿ ಇನ್ನೂ ಬಂದಿಲ್ಲ. ಒಂದು ಬಾರಿಯಾದರೂ ಭೇಟಿ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ. ಸಿಎಂ ಸಹ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದನ್ನೂ ಓದಿ: ಮಹಿಳಾ ತಹಶೀಲ್ದಾರ್‌ಗೆ ಎಷ್ಟು ಮದುವೆ ಆಗಿದೆ?- RTI ಮಾಹಿತಿ ಕೇಳಿದ ಕಾರ್ಯಕರ್ತ ಅರೆಸ್ಟ್
ಸಿಎಂ ಏನೇನು ಖರೀದಿಸಿದ್ರು?
ಖಾದಿ ಎಂಪೋರಿಯಂನಲ್ಲಿ ಸಿಎಂ ಬೊಮ್ಮಾಯಿ 1 ಲೇಡಿಸ್ ಡ್ರೆಸ್ ಕೋಲ್ ಟಾಪ್, 1 ರೆಡಿಮೇಡ್ ಫುಲ್ ಶರ್ಟ್, 1 ರೆಡಿಮೇಡ್ ಟೀ ಶರ್ಟ್, 3 ಜುಬ್ಬಾ, ಸೇರಿದಂತೆ 8 ವಿವಿಧ ಬಟ್ಟೆಗಳನ್ನ ಖರೀದಿಸಿದರು.