ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ನಿನ್ನೆಯಷ್ಟೇ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಿನಿಮಾದ ನಿರ್ದೇಶಕ ಅಮೋಘ ವರ್ಷ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಈ ಸಿನಿಮಾದ ಹತ್ತು ಹಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.
Advertisement
ಗಂಧದ ಗುಡಿ ಚಿತ್ರವನ್ನು ರಾಜ್ಯೋತ್ಸವದ ವಾರವೇ ರಿಲೀಸ್ ಮಾಡಬೇಕು ಎಂದೇ ಅಕ್ಟೋಬರ್ 28 ದಿನಾಂಕವನ್ನು ಆಯ್ಕೆ ಮಾಡಿಕೊಂಡಿರುವ ಅವರು ಅಂದು ಪುನೀತ್ ಅವರ ಮೊದಲ ವರ್ಷದ ಪುಣ್ಯಾರಾಧನೆ ಎನ್ನುವುದನ್ನೂ ನೆನಪಿಸಿದರು. ಮತ್ತೆ ಗಂಧದ ಗುಡಿಯನ್ನು ನೆನಪಿಸಿಕೊಳ್ಳುತ್ತಾ, “ಇದು ಡಾಕ್ಯುಮೆಂಟರಿ ಅಂತ ಜನ ಈಗಲೂ ಅನ್ಕೊಂಡಿದಾರೆ. ಇದು ಯಾವುದೇ ಕಾರಣಕ್ಕೂ ಡಾಕ್ಯುಮೆಂಟರಿ ಅಲ್ಲ. ಗಂಧದ ಗುಡಿ ಇದು ಫೀಚರ್ ಫಿಲ್ಮ್. ಒಂದು ಸಿನಿಮಾ. ಒಂದು ಸಿನಿಮಾಕ್ಕೆ ಬೇಕಾಗುವ ಡ್ಯುರೇಷನ್ ಎಷ್ಟಿರಬೇಕೋ ಅಷ್ಟೇ ಡ್ಯುರೇಷನ್ ನಲ್ಲಿ ಈ ಸಿನಿಮಾ ರಿಲೀಸ್ ಆಗುತ್ತೆ” ಎನ್ನುತ್ತಾರೆ. ಇದನ್ನೂ ಓದಿ : ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್
Advertisement
Advertisement
ಈ ಸಿನಿಮಾವನ್ನು ಪ್ಯಾನ್ ವರ್ಲ್ಡ್ ರಿಲೀಸ್ ಮಾಡುವ ತಯಾರಿ ನಡೆಯುತ್ತಿದೆಯಂತೆ. ಎಷ್ಟು ಭಾಷೆ , ಅಥವಾ ಸಬ್ ಟೈಟಲ್ ಇಡಬೇಕಾ ಅದೆಲ್ಲ ಇನ್ನೂ ಚರ್ಚೆ ಹಂತದಲ್ಲಿದ್ದು, ಅಪ್ಪು ಅಭಿಮಾನಿಗಳಿಗೆ ಇದು ಕೊನೆಯ ಚಿತ್ರವಾಗಲಿದೆ. “ನಾಡು, ನುಡಿ, ವನ್ಯಜೀವಿಗಳ ಬಗ್ಗೆ ಅಪ್ಪು ಅವ್ರಿಗಿದ್ದ ಅಪಾರ ಪ್ರೀತಿ ಕಾಳಜಿ ಈ ಚಿತ್ರದಲ್ಲಿ ಕಾಣುತ್ತದೆ. ವಿಶೇಷ ಅಂದ್ರೆ ಚಿತ್ರದಲ್ಲಿ ಹಾಡುಗಳೂ ಇರ್ತವೆ. ಎಷ್ಟಿರುತ್ತೆ ಹೇಗಿರುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ” ಎನ್ನುತ್ತಾರೆ ಅಮೋಘ.
Advertisement
ಅಕ್ಟೋಬರ್ 29 ಕ್ಕೆ ಅಪ್ಪು ಅಗಲಿ ಒಂದು ವರ್ಷ ಆಗುತ್ತೆ. ಅಕ್ಟೋಬರ್ 28 ಕ್ಕೆ ಗಂಧದ ಗುಡಿ ಚಿತ್ರ ಬರ್ತಿರೋದು ಅಭಿಮಾನಿಗಳಿಗೆ ಭಾವುಕ ಸುದ್ದಿ ಹೌದು. ಆದರೆ ಅಪ್ಪು ಎಲ್ಲೂ ಹೋಗಿಲ್ಲ. ನಮ್ಮ ಜೊತೆ ಒಂದಲ್ಲ ಒಂದು ವಿಧದಲ್ಲಿ ಇದ್ದಾರೆ. ಸಿನಿಮಾಕ್ಕಾಗಿ ಬೇಕು ಅಂತ ಡಬ್ ಮಾಡ್ಸಿಲ್ಲ ಇದಕ್ಕೆ ನಾವು, ಅಪ್ಪು ಧ್ವನಿಯಲ್ಲೇ ಪೂರ್ತಿ ಸಿನಿಮಾ ಇರುತ್ತದೆ. ಅಪ್ಪು ಧ್ವನಿ ಶೂಟಿಂಗ್ ವೇಳೆಯೇ ರೆಕಾರ್ಡ್ ಆಗಿದೆ ಎನ್ನುವುದು ಅಮೋಘ ವರ್ಷ ಮಾತು.