ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್‍ ಅವರಿಗೆ ‘ಗೇಮ್ ಚೇಂಜರ್’ ಅವಾರ್ಡ್

Public TV
1 Min Read
game changer award to public tv chief hr ranganath1

ಚೆನ್ನೈ: ಕರ್ನಾಟಕದ ಜನಪ್ರಿಯ ಸುದ್ದಿವಾಹಿನಿ ಪಬ್ಲಿಕ್ ಟಿವಿ (PUBLiC TV) ಮುಕುಟಕ್ಕೆ ಮತ್ತೊಂದು ಗರಿ ಸಿಕ್ಕಿದೆ.

ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ (H.R Ranganath) ಅವರಿಗೆ 2022ನೇ ಸಾಲಿನ ಪ್ರತಿಷ್ಠಿತ ‘ಗೇಮ್ ಚೇಂಜರ್’ (Game Changer Award) ಪ್ರಶಸ್ತಿ ಲಭಿಸಿದೆ. ಪಬ್ಲಿಕ್ ಟಿವಿ ಹಾಗೂ ಹೆಚ್.ಆರ್ ರಂಗನಾಥ್ ಅವರ ಜವಬ್ದಾರಿ ಜರ್ನಲಿಸಂ, ವಿಶ್ವಾಸಾರ್ಹತೆ ಹಾಗೂ ಜನಪ್ರಿಯತೆಯನ್ನು ಪರಿಗಣಿಸಿ ಮೀಡಿಯಾ ನ್ಯೂಸ್ ಫಾರ್ ಯೂ.ಕಾಮ್ ಈ ಪ್ರಶಸ್ತಿ ಕೊಟ್ಟಿದೆ.

game changer award to public tv chief hr ranganath

ದಕ್ಷಿಣ ಭಾರತದ ನ್ಯೂಸ್ ಚಾನೆಲ್ ಗಳ ವಿಭಾಗದಲ್ಲಿ ಪಬ್ಲಿಕ್ ಟಿವಿಗೆ ಈ ಗೌರವ ದೊರೆತಿದೆ. ಚೆನ್ನೈ (Chennai) ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಸಿಒಒ ಸಿ.ಕೆ ಹರೀಶ್ ಕುಮಾರ್ (C. K Harish Kumar) ಅವರು ಸಂಸ್ಥೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಮಕ್ಕಳ ಜೊತೆ ಕ್ರಿಕೆಟ್ ಆಡಿದ ರೇಣುಕಾಚಾರ್ಯ

Share This Article