ಮುಂಬೈ: ಮಹಾರಾಷ್ಟ್ರದಲ್ಲಿ (Maharashtra) 180 ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧನಕ್ಕೊಳಗಾದ ಆರೋಪಿಯ ಮನೆ ಮೇಲೆ ಅಧಿಕಾರಿಗಳು ಬುಲ್ಡೋಜರ್ ದಾಳಿ (Bulldozer Action) ಮಾಡಿದ್ದಾರೆ. ಅಮರಾವತಿ ಜಿಲ್ಲೆಯ ಪರತ್ವಾಡ ನಗರದಲ್ಲಿರುವ ಒಂದು ಅಂತಸ್ತಿನ ಮನೆಯ ಅಕ್ರಮ ಭಾಗಗಳನ್ನು ಅಧಿಕಾರಿಗಳು ಕೆಡವಿದ್ದಾರೆ.
ಪರತ್ವಾಡದ ನಿವಾಸಿ ಮೊಹಮ್ಮದ್ ಅಯಾಜ್ ಅಲಿಯಾಸ್ ತನ್ವೀರ್ (19) ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿದ ಆರೋಪ ಹೊರಿಸಲಾಗಿದೆ. ಆರೋಪಿ ಪ್ರೇಮದ ನಾಟಕವಾಡಿ ಬಾಲಕಿಯರನ್ನು ಮುಂಬೈ ಮತ್ತು ಪುಣೆಗೆ ಕರೆದೊಯ್ದ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಅದನ್ನು ವಿಡಿಯೋ ಮಾಡಿಕೊಂಡು ಬ್ಲಾಕ್‌ಮೇಲ್ ಮಾಡಿ ಬಾಲಕಿಯರನ್ನು ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದ ಎಂದು ತಿಳಿದು ಬಂದಿದೆ. ಅಯಾಜ್ ಒಳಗೊಂಡ ಕೆಲವು ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆತನನ್ನು ಪೊಲೀಸರು (Police) ಬಂಧಿಸಿದ್ದರು. ಇದನ್ನೂ ಓದಿ: 180 ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯ, 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿದ್ದ ಆರೋಪಿ ಬಂಧನ
ಆತನ ಮನೆಯ ಮೇಲೆ ಅಚಲ್ಪುರ್ ಮುನ್ಸಿಪಲ್ ಕೌನ್ಸಿಲ್‌ನ ತಂಡವು ಕಾರ್ಯಾಚರಣೆ ನಡೆಸಿ, ಅಕ್ರಮ ಭಾಗಗಳನ್ನು ಕೆಡವಿದೆ. ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಪುರಸಭೆಯು ಅಯಾಜ್ ಅವರ ಕುಟುಂಬಕ್ಕೆ ಈಗಾಗಲೇ ನೋಟಿಸ್ ನೀಡಿತ್ತು. ಕಾರ್ಯಾಚರಣೆ ವೇಳೆ ಮನೆ ಆವರಣದ ಹೊರಗೆ ಭಾರೀ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ತೆರವು ಕಾರ್ಯದ ವೇಳೆ ಮೇಲ್ವಿಚಾರಣೆಗೆ ಬಿಜೆಪಿ ಶಾಸಕ ಪ್ರವೀಣ್ ತಯಾಡೆ ಹಾಜರಿದ್ದರು.
#WATCH | Maharashtra | Amravati District Administration, in the presence of police, conducts bulldozer action against the illegal construction at the property of the primary accused in the minor girls’ abuse and blackmail case in Paratwada pic.twitter.com/xiLyu1FstT
— ANI (@ANI) April 15, 2026
ಅಯಾಜ್ AIMIM ಮಾಜಿ ಪದಾಧಿಕಾರಿ?
ಮೊಹಮ್ಮದ್ ಅಯಾಜ್ ಈ ಹಿಂದೆ AIMIMನ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಂದು ತಿಳಿದುಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೋಗಳು ಮತ್ತು ಫೋಟೋಗಳಲ್ಲಿ, AIMIM ನ ಅಮರಾವತಿ ಅಧ್ಯಕ್ಷ ಹಾಜಿ ಇರ್ಫಾನ್ ಖಾನ್ ಅವರಿಂದ ಪತ್ರವನ್ನು ಸ್ವೀಕರಿಸುವ, ರ‍್ಯಾಲಿಗಳಲ್ಲಿ ಭಾಗಿಯಾದ ವಿಡಿಯೋಗಳಿವೆ. ಈ ಪ್ರಕರಣ ಬೆಳಕಿಗೆ ಬಂದ ನಂತರ ಅಂತಹ ವಿಡಿಯೋಗಳನ್ನು ಅಳಿಸಲಾಗಿದೆ.
ಅಚಲ್ಪುರ ಗ್ರಾಮ ಪಂಚಾಯತ್ ಚುನಾವಣೆಯ ಸಮಯದಲ್ಲಿ, ಪಕ್ಷದ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಅಯಾಜ್‌ಗೆ ವಹಿಸಲಾಗಿತ್ತು. ಆದಾಗ್ಯೂ, ಆತ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವಿಫಲರನಾಗಿದ್ದರಿಂದ ಆತನನ್ನು ಕೈಬಿಟ್ಟಿದ್ದೆವು. ಆರೋಪಿ ಪಕ್ಷದ ಕಾರ್ಯಕರ್ತನೂ ಅಲ್ಲ ಅಥವಾ AIMIM ನ ಪದಾಧಿಕಾರಿಯೂ ಅಲ್ಲ ಎಂದು ಪಕ್ಷ ಮುಖಂಡರು ಹೇಳಿದ್ದಾರೆ.
ಪೊಲೀಸರು ಅಯಾಜ್‌ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಆತನನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪ್ರಕರಣ ಸಂಬಂಧ ಉಜರ್ ಖಾನ್ ಸೇರಿದಂತೆ ಇನ್ನೂ ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಅಯಾಜ್ ಮತ್ತು ಉಜರ್ ತಮ್ಮ ಅಪರಾಧಗಳನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: Honor Killing | ಕುಡುಕ ಗಂಡನ ಬಿಟ್ಟು ಪ್ರೀತಿಸಿದವನ ಜೊತೆ ಹೋದ ಮಹಿಳೆಗೆ ವಿಷ ಕುಡಿಸಿ ಕೊಂದ ಪೋಷಕರು

