ಬೆಂಗಳೂರು: ಈಗ ಕರ್ನಾಟಕದ (Karnataka) ದೂರ ದೂರದ ಪ್ರದೇಶಗಳಲ್ಲಿಯೂ ರಿಲಯನ್ಸ್ ಜಿಯೋದ (Reliance Jio) ನೆಟ್‌ವರ್ಕ್ ಸಿಗುತ್ತಿದೆ.
ಶಿವಮೊಗ್ಗದ ಗಾಜನೂರು, ಚಾಮರಾಜನಗರದ ಕೊಳ್ಳೇಗಾಲ, ಹುಗ್ಯಂನಲ್ಲಿ ಸಂಪರ್ಕ ದೊರೆಯುವಂತೆ ಮಾಡುವಲ್ಲಿ ಜಿಯೋ ಯಶಸ್ಸು ಕಂಡಿದೆ. ಇದಕ್ಕೂ ಮುನ್ನ ಈ ಪ್ರದೇಶಗಳಲ್ಲಿ ಸಂವಹನ ಮೂಲಸೌಕರ್ಯಕ್ಕೆ ಕೊರತೆ ಇತ್ತು. ಇದನ್ನೂ ಓದಿ: ಗೂಗಲ್, ಆಪಲ್‌ಗೆ ಜಿಯೋ ಠಕ್ಕರ್ – ಕ್ಲೌಡ್ ಸ್ಟೋರೇಜ್‌ನಲ್ಲೂ ದರ ಸಮರ ಆರಂಭ?
ಪರಿಸರ ಮತ್ತು ಭೌಗೋಳಿಕ ಸವಾಲುಗಳನ್ನು ದಾಟುವ ಮೂಲಕವಾಗಿ ಜಿಯೋ ತನ್ನ ದೃಢವಾದ 4ಜಿ ಮತ್ತು 5ಜಿ ನೆಟ್‌ವರ್ಕ್ ಅನ್ನು ರಾಜ್ಯದ್ಯಂತ ಹಳ್ಳಿ ಹಳ್ಳಿಗಳಿಗೆ ವಿಸ್ತರಿಸುತ್ತಿದೆ. ಈ ತಾಲೂಕುಗಳಲ್ಲಿ ಇರುವ ಅನೇಕ ಹಳ್ಳಿಗಳು (Village) ಈಗ ಜಿಯೋ ನೆಟ್‌ವರ್ಕ್‌ನಿಂದಾಗಿ (Jio Network) ಮಾತ್ರ ಪ್ರಯೋಜನ ಪಡೆಯುತ್ತಿವೆ.
ಜಿಯೋ ಟವರ್‌ನಿಂದಾಗಿ ಮಕ್ಕಳು ನೆಟ್‌ವರ್ಕ್ ಸಂಪರ್ಕಕ್ಕಾಗಿ ದೂರದ ಸ್ಥಳಗಳಿಗೆ ಪ್ರಯಾಣ ಮಾಡುವ ಅಗತ್ಯವಿಲ್ಲ. ಯುವಜನರಿಗೆ ವರ್ಕ್ ಫ್ರಮ್ ಹೋಮ್ ಮಾಡುವುದಕ್ಕೆ ಅನುಕೂಲವಾಗಿದ್ದು, ಇದರಿಂದ ಅವಕಾಶಗಳು ತೆರೆದುಕೊಂಡಿವೆ.
ಈ ಗ್ರಾಮದ ಜನರು ಜಿಯೋದ ಪ್ರೀಮಿಯಂ ಅಪ್ಲಿಕೇಷನ್‌ಗಳಾದ ಜಿಯೋಟಿವಿ ಮತ್ತು ಜಿಯೋ ಸಿನಿಮಾ ಮೂಲಕ ಮನರಂಜನೆಯನ್ನು ಪಡೆಯಬಹುದಾಗಿದೆ.