ದರ್ಶನ್ (Darshan) ನಟನೆಯ ‘ಗಜ’ (Gaja Film) ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಮಲಯಾಳಂ ಬ್ಯೂಟಿ ನವ್ಯಾ ನಾಯರ್ (Navya Nair) ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮದ ಆಯೋಜಕರು ನಟಿಯ ಫ್ಯಾಮಿಲಿ ಬಗ್ಗೆ ತಪ್ಪಾದ ಮಾಹಿತಿ ನೀಡಿದ್ದು ನವ್ಯಾ ಬೇಸರ ವ್ಯಕ್ತಪಡಿಸಿದ್ದಾರೆ.
ನಿಮಗೆ ಒಂದು ವಿಚಾರವನ್ನು ಹೇಳಲು ಬಯಸುತ್ತೇನೆ. ನಾನಿಲ್ಲಿರುವ ಬುಕ್‌ಲೆಟ್ ಅನ್ನು ನೋಡಿದೆ. ಅದರಲ್ಲಿ ನನಗೆ ಇಬ್ಬರೂ ಮಕ್ಕಳಿದ್ದಾರೆ ಎಂದು ಬರೆಯಲಾಗಿದೆ. ಈ ಬಗ್ಗೆ ನನ್ನ ಕುಟುಂಬ ಚಿಂತಿಸುವುದಿಲ್ಲವೇ ಎಂದು ನಟಿ ಆಯೋಜಕರ ಯಡವಟ್ಟಿಗೆ ಖಡಕ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ:ಹಾಲಿವುಡ್ ನಲ್ಲೂ ಪ್ರಭಾಸ್ ನಟನೆಯ ‘ಕಲ್ಕಿ’ ರಿಲೀಸ್
ನನಗಿರುವುದು ಒಬ್ಬನೇ ಮಗ. ನೀವು ಯಮಿಕಾ ಎಂದು ಮಗಳಿದ್ದಾಳೆ ಎಂದು ಬರೆದಿದ್ದೀರಿ. ಜನರು ನನ್ನ ತಪ್ಪು ತಿಳಿದುಕೊಳ್ಳುವುದಿಲ್ಲವೇ. ವಿಕಿಪಿಡಿಯಾದಲ್ಲಿ ಮಾಹಿತಿ ಲಭ್ಯವಿದೆ. ಈ ರೀತಿ ಬರೆಯುವಾಗ ವಿಚಾರ ಅರಿತು ಬರೆಯಬೇಕು ಎಂದು ಆಯೋಜಕರನ್ನು ನಟಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅದಷ್ಟೇ ಅಲ್ಲ, ತಾವು ನಟಿಸದೇ ಇರುವ ಸಿನಿಮಾಗಳ ಹೆಸರು ಹಾಕಿರೋದ್ದಕ್ಕೆ ನಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡದ ಗಜ, ಬಾಸ್, ನಮ್ಮೆಜಮಾನ್ರು, ಭಾಗ್ಯದ ಬಳೆಗಾರ, ದೃಶ್ಯ 1, ದೃಶ್ಯ ಪಾರ್ಟ್ 2 ಸಿನಿಮಾಗಳಲ್ಲಿ ನವ್ಯಾ ನಟಿಸಿದ್ದಾರೆ.