ಬಾಲಿವುಡ್ ನಟಿ ಅಮೀಷಾ ಪಟೇಲ್ (Ameesha Patel) ಅವರು ‘ಗದರ್ 2’ (Gadar 2) ಸಕ್ಸಸ್ ಬಳಿಕ ಸಿನಿಮಾಗಿಂತ ಹೆಚ್ಚು ವೈಯಕ್ತಿಕ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಇದೀಗ ತನಗಿಂತ 19 ವರ್ಷ ಕಿರಿಯ ಉದ್ಯಮಿ ಜೊತೆ ಅಮೀಷಾ ಪಟೇಲ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ಬಿಹಾರದಲ್ಲಿ ನಡೆಯಲಿದೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಟ್ರೈಲರ್ ಲಾಂಚ್
49 ವರ್ಷದ ನಟಿ ಅಮೀಷಾ ಪಟೇಲ್ ಈ ಹಿಂದೆ ನಿರ್ದೇಶಕ ವಿಕ್ರಮ್ ಭಟ್ ಸೇರಿದಂತೆ ಹಲವರ ಜೊತೆ ತಳುಕು ಹಾಕಿಕೊಂಡಿತ್ತು. ಇದೀಗ 31 ವರ್ಷದ ಶ್ರೀಮಂತ ಉದ್ಯಮಿ ನಿರ್ವಾಣ (Nirvaan Birla) ಜೊತೆ ಅಮಿಷಾ ಪಟೇಲ್ ಸುತ್ತಾಟ ನಡೆಸುತ್ತಿದ್ದಾರೆ. ಇಬ್ಬರ ಡೇಟಿಂಗ್ ವಿಚಾರ ಬಾಲಿವುಡ್‌ನಲ್ಲಿ ಅಂಗಳದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
View this post on Instagram
ಡೇಟಿಂಗ್ ವದಂತಿಗೆ ಪುಷ್ಠಿ ನೀಡುವಂತ ಪೋಸ್ಟ್‌ವೊಂದನ್ನು ಕೂಡ ಅಮಿಷಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಉದ್ಯಮಿ ನಿರ್ವಾಣ ಬಿರ್ಲಾ ಅವರೊಂದಿಗಿನ ಖಾಸಗಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ‘ನನ್ನ ಡಾರ್ಲಿಂಗ್ ಜೊತೆ ಒಂದೊಳ್ಳೆಯ ಸಂಜೆ’ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್‌ಗೆ ನಿರ್ವಾಣ ಕಾಮೆಂಟ್ ಮಾಡಿ, ಫನ್ ಆಗಿತ್ತು, ಲವ್ ಯೂ ಎಂದಿದ್ದಾರೆ.ಫೋಟೋದಲ್ಲಿ ಅಮಿಷಾ ಮತ್ತು ನಿರ್ವಾಣ ಇಬ್ಬರೂ ಖುಷಿಯಿಂದ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಫೋಟೋದಲ್ಲಿ ಇಬ್ಬರೂ ಕಪ್ಪು ಬಟ್ಟೆ ಧರಿಸಿ ಮಿಂಚಿದ್ದಾರೆ. ಇಬ್ಬರೂ ಎಂಗೇಜ್ ಆಗಿದ್ದಾರಾ? ಎಂದೆಲ್ಲಾ ನೆಟ್ಟಿಗರು ನಟಿಯ ಕಾಲೆಳೆದಿದ್ದಾರೆ. ಈ ಡೇಟಿಂಗ್ ಸುದ್ದಿ ನಿಜನಾ? ನಟಿ ಕ್ಲ್ಯಾರಿಟಿ ಕೊಡುತ್ತಾರಾ? ಕಾದುನೋಡಬೇಕಿದೆ.