ಗದಗ: ನಗರದಲ್ಲಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿಗೆ ಜೀರೊ ಟ್ರಾಫಿಕ್ಸ್ ಕಲ್ಪಿಸಲು ವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿನ ಹೂ, ಹಣ್ಣು, ಕಾಯಿ ಮಾರಾಟ ಮಾಡುತ್ತಿದ್ದ ಸಣ್ಣಪುಟ್ಟ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಯಿತು.
ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ನಗರಕ್ಕೆ ಭೇಟಿ ನೀಡಿದ್ದರು. ಮೊದಲಿಗೆ ತೋಂಟದಾರ್ಯ ಲಿಂಗೈಕ್ಯ ಸಿದ್ದಲಿಂಗ ಮಹಾಸ್ವಾಮಿ ಐಕ್ಯ ಮಂಟಪ ಕಟ್ಟಡ ಉದ್ಘಾಟನೆ ಮಾಡಿದರು. ನಂತರ ವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಕವಿಗವಾಯಿಗಳ ಮಠಕ್ಕೆ ಭೇಟಿ ನೀಡಿದರು. ಇದನ್ನೂ ಓದಿ: ಪಾಪ ಈಶ್ವರಪ್ಪ – ಕಾಂಗ್ರೆಸ್ ಕಾಲದಲ್ಲಿ ನಡೆದ ಪರ್ಸಂಟೇಜ್ ಬಗ್ಗೆ ಯಾರು ಮಾತನಾಡಲಿಲ್ಲ: ಹೆಚ್‍ಡಿ.ರೇವಣ್ಣ
Advertisement
Advertisement
ಸೆಕ್ಯೂರಿಟಿ ಚೆಕ್‌ಗಾಗಿ ಬೆಳಗ್ಗೆ ವೀರೇಶ್ವರ ಪುಣ್ಯಾಶ್ರಮಕ್ಕೆ ಬಂದಿದ್ದ ಪೊಲೀಸರು ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಿದ್ದರು. ಬೆಳಗ್ಗೆ 10:50ಕ್ಕೆ ಸಿಎಂ ಗದಗ ನಗರಕ್ಕೆ ಬಂದಿದ್ದರು. ಬೆಳಗ್ಗೆಯಿಂದಲೇ ಶ್ರೀಮಠದ ಆವರಣದಲ್ಲಿನ 10 ಕ್ಕೂ ಹೆಚ್ಚು ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ಬೆಳಗಿನ ಜಾವ ಆಶ್ರಮಕ್ಕೆ ಬರುವ ಭಕ್ತರನ್ನೇ ನಂಬಿಕೊಂಡು ಇಲ್ಲಿ ವ್ಯಾಪಾರ ನಡೆಯುತ್ತೆ. ಪೊಲೀಸರು ಏಕಾಏಕಿ ಅಂಗಡಿ ಬಂದ್ ಮಾಡಿಸಿದ್ದರಿಂದ ಒಂದು ಅಂಗಡಿಗೆ ಕನಿಷ್ಠ 1,000 ರೂ. ವ್ಯಾಪಾರ ನಷ್ಟವಾಗಿದೆ.
Advertisement
ಸಿದ್ದರಾಮಯ್ಯ, ಯಡಿಯೂರಪ್ಪ ಭೇಟಿ ಕೊಟ್ಟಾಗಲೂ ಬಂದ್ ಆಗಿರಲಿಲ್ಲ
ಇತ್ತೀಚೆಗೆ ವೀರೇಶ್ವರ ಪುಣ್ಯಾಶ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭೇಟಿ ನೀಡಿದ್ದರು. ಆಗಲೂ ಮಠದ ಆವರಣದಲ್ಲಿನ ಮಳಿಗೆಗಳನ್ನು ಬಂದ್ ಮಾಡಿಸಿರಲಿಲ್ಲ. ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗಲೂ ಮಠಕ್ಕೆ ಭೇಟಿ ನೀಡಿದ್ದರು. ಯಾರೇ ಗಣ್ಯ ವ್ಯಕ್ತಿಗಳು ಬಂದರೂ ಮಠಕ್ಕೆ ಭೇಟಿ ಕೊಡುತ್ತಾರೆ. ಆದರೆ ಯಾವ ಸಂದರ್ಭದಲ್ಲೂ ಅಂಗಡಿ ಬಂದ್ ಮಾಡಿಸಿದ ಉದಾಹರಣೆಗಳಿಲ್ಲ. ಬಂದ್ ಮಾಡಿಸಲು ಬಂದಿದ್ದ ಪೊಲೀಸರು ಬೇರೆಯೇ ಕಾರಣ ಕೊಟ್ಟಿದ್ದರು ಎಂದು ಸ್ಥಳೀಯ ವ್ಯಾಪಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾವೆಲ್ಲಾ ಬಾರ್‌ನಲ್ಲಿ ಕುಡಿದಿದ್ವಿ, ಸಂತೋಷ್ ಫ್ರೂಟ್ ಜ್ಯೂಸ್ ತಗೊಂಡು ರೂಮ್‍ಗೆ ಹೋಗಿದ್ದರು – ಸ್ನೇಹಿತರು ಹೇಳಿದ್ದೇನು?
Advertisement
ಜೀರೋ ಟ್ರಾಫಿಕ್‌ನಿಂದಾಗಿ ಜನರು ಅನೇಕ ಸಮಸ್ಯೆ ಅನುಭವಿಸುತ್ತಿದ್ದಾರೆ. ಕಾಮನ್ ಮ್ಯಾನ್ ಎಂದು ಹೇಳಿಕೊಂಡು ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸೆಕ್ಯೂರಿಟಿ ನೆಪದಲ್ಲಿ ಅತೀ ಸಾಮಾನ್ಯ ವ್ಯಾಪಾರಸ್ಥರಿಗೆ ಜಿಲ್ಲೆಯ ಪೊಲೀಸರು ತೊಂದರೆ ಕೊಡುವುದು ಎಷ್ಟು ಸರಿ ಎಂದು ಜನರು ಪ್ರಶ್ನಿಸಿದ್ದಾರೆ.