ಗದಗ: ಅಕ್ರಮವಾಗಿ ಸಂಗ್ರಹಿಸಿದ್ದ ಅನ್ನಭಾಗ್ಯ ಅಕ್ಕಿ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ಓರ್ವನನ್ನು ವಶಕ್ಕೆ ಪಡೆದ ಘಟನೆ ಗದಗದ (Gadag) ಬೆಟಗೇರಿ ಬಣ್ಣದ ನಗರದಲ್ಲಿ ನಡೆದಿದೆ.
ಅನ್ನಭಾಗ್ಯ ಅಕ್ಕಿಗೆ ಖದೀಮರು ಕನ್ನ ಹಾಕಿ, ರೂಮ್‌ನಲ್ಲಿ ಸುಮಾರು 20 ಕ್ವಿಂಟಲ್‌ನಷ್ಟು ಅಕ್ಕಿ ಸಂಗ್ರಹಿಸಿದ್ದರು. ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಅಕ್ಕಿ ದಂಧೆ ಜಾಲ ಪತ್ತೆಯಾಗಿದೆ. ಇದನ್ನೂ ಓದಿ: Kolar| ದೇವಾಲಯ, ಮನೆ ಕಳವು ಪ್ರಕರಣ – ಇಬ್ಬರು ಆರೋಪಿಗಳ ಬಂಧನ
ಅಕ್ರಮ ಅಕ್ಕಿ ದಂಧೆಯಲ್ಲಿ ಪಾಲ್ಗೊಂಡಿದ್ದ ಶ್ರಿಕಾಂತ್ ಭಜಂತ್ರಿ ಎಂಬಾತನ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಗದಗನ ಬೆಟಗೇರಿ ಪೊಲೀಸ್ (Betageri Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ದಂಧೆಯ ಜಾಲವನ್ನು ಬೆನ್ನು ಹತ್ತಿದ್ದಾರೆ.