ಬೆಂಗಳೂರು: ಫೆಬ್ರವರಿ 5 ರಿಂದ 7ರ ವರೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಡೆಯಲಿರುವ ಜಿ20 ಶೃಂಗಸಭೆ (G20 Summit) ಹಿನ್ನೆಲೆ ತಾಜ್ ವೆಸ್ಟ್ ಎಂಡ್ (Taj West End) ಆವರಣದ ಮೇಲೆ ತಾತ್ಕಾಲಿಕ ನೋ ಫ್ಲೈಝೋನ್ (No Fly Zone) ಜಾರಿ ಮಾಡಲಾಗಿದೆ.
Advertisement
ಈ ಬಾರಿ ಜಿ20 ರಾಷ್ಟ್ರಗಳ ಸಭೆಗಳು ಭಾರತದ ವಿವಿಧೆಡೆ ನಡೆಯಲಿದ್ದು, ಅದರಲ್ಲಿ ಒಂದು ಬೆಂಗಳೂರಿನಲ್ಲಿ ಆಗುತ್ತಿದೆ. ಫೆಬ್ರವರಿ 5 ರಿಂದ 7ರ ವರೆಗೆ ಜಿ20ಯ ಇಂಧನ ಪರಿವರ್ತನಾ ಕಾರ್ಯಕಾರಿ ಗುಂಪಿನ (Energy Transition Working Group) ಮೊದಲ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಸಭೆಗೆ ಹಲವು ದೇಶಗಳ ಗಣ್ಯರು, ವಿವಿಐಪಿಗಳು ಭಾಗವಹಿಸಲಿದ್ದಾರೆ. ಹೀಗಾಗಿ ಗಣ್ಯರು ಆಗಮಿಸಲಿರುವ ನಗರದ ತಾಜ್ ವೆಸ್ಟ್ ಎಂಡ್ನ ಸುತ್ತ ತಾತ್ಕಾಲಿಕ ನೋ ಫ್ಲೈಝೋನ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಟ್ರಾಫಿಕ್ ನಿಯಮ ಉಲ್ಲಂಘನೆ – ದಂಡ ಪಾವತಿಗೆ 50% ಡಿಸ್ಕೌಂಟ್
Advertisement
ಫೆಬ್ರವರಿ 5ರಿಂದ 11ರ ವರೆಗೆ ನೋ ಫ್ಲೈಝೋನ್ ಜಾರಿ ಮಾಡಲಾಗಿದ್ದು, ತಾಜ್ ವೆಸ್ಟ್ ಎಂಡ್ನ ಸುತ್ತ 1 ಕಿಮೀ ವ್ಯಾಪ್ತಿಯಲ್ಲಿ ಇದು ಜಾರಿಯಿರಲಿದೆ. ಈ ಪ್ರದೇಶದಲ್ಲಿ ಯಾವುದೇ ಡ್ರೋನ್, ಗ್ಲೈಡರ್ ಏರ್ಕ್ರಾಫ್ಟ್ ಹಾರಾಡುವಂತಿಲ್ಲ.
Advertisement
Advertisement
ನೋ ಫ್ಲೈಝೋನ್ನೊಂದಿಗೆ ತಾಜ್ ವೆಸ್ಟ್ ಎಂಡ್ ಸುತ್ತ 144 ಸೆಕ್ಷನ್ ಸಹ ಜಾರಿ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಸಿದ್ದು-ಡಿಕೆಶಿ `ಪ್ರಜಾಧ್ವನಿ’ ಬಸ್ ಯಾತ್ರೆ – ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k