ಬೆಂಗಳೂರು: ಫೆಬ್ರವರಿ 3ರಿಂದ ಕಾಂಗ್ರೆಸ್ (Congress) 2ನೇ ಹಂತದ ಬಸ್ ಯಾತ್ರೆ ಆರಂಭವಾಗುತ್ತಿದೆ. ಬೀದರ್‌ನಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹಾಗೂ ಕೋಲಾರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಯಾತ್ರೆ ಆರಂಭಿಸುತ್ತಿದ್ದಾರೆ.
Advertisement
2 ದಿನಗಳ ಕಾಲ ಸಿದ್ದರಾಮಯ್ಯ ಹಾಗೂ ಡಿಕೆಶಿ ಪ್ರತ್ಯೇಕ ಬಸ್ ಯಾತ್ರೆ (Prajadvani Bus Yatra) ಕೈಗೊಳ್ಳಲಿದ್ದಾರೆ. ಮುಳಬಾಗಿಲಿನ ಕುರುಡುಮಲೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಡಿಕೆಶಿ ಪ್ರಜಾಧ್ವನಿ ಯಾತ್ರೆ ಆರಂಭಿಸಲಿದ್ದಾರೆ. ಇತ್ತ ಬಸವಕಲ್ಯಾಣದಿಂದ ಸಿದ್ದರಾಮಯ್ಯ ಬಸ್ ಯಾತ್ರೆ ಮಾಡಲಿದ್ದಾರೆ. ಇದನ್ನೂ ಓದಿ: ಮಾ. 31ರೊಳಗೆ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ. ಅನುದಾನ – ಕ್ರಿಯಾಯೋಜನೆ ಸಲ್ಲಿಸಲು ಬೊಮ್ಮಾಯಿ ಸೂಚನೆ
Advertisement
Advertisement
ಈ ನಡುವೆಯೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಡಿಕೆಶಿ ಜೊತೆ ಬಸ್ ಯಾತ್ರೆಗೆ ಹೋಗಲ್ಲ ಅಂತಾ ಡಾ. ಪರಮೇಶ್ವರ್ (G Parameshwara) ಪಟ್ಟು ಹಿಡಿದಿದ್ದಾರೆ. ಇತ್ತೀಚೆಗೆ ಸುರ್ಜೇವಾಲ ಭೇಟಿ ವೇಳೆ ಬಿ.ಕೆ ಹರಿಪ್ರಸಾದ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಕೆ.ಹೆಚ್ ಮುನಿಯಪ್ಪ ಮೂಲಕ ಸಂಧಾನಕ್ಕೆ ಯತ್ನಿಸಿದ್ದಾರೆ. ಆದ್ರೆ ಯಾವುದೇ ಮನವೊಲಿಕೆಗೆ ಪರಮೇಶ್ವರ್ ಒಪ್ಪಿಲ್ಲ. ಫೆ.3ರಂದು ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಹಗರಣ – 1 ವಾರದ ಒಳಗೆ ತನಿಖಾ ವರದಿ ಸಲ್ಲಿಸಿ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k