ವಿಶ್ವದ 20 ಪ್ರಮುಖ ಮುಂದುವರಿದ ಮತ್ತು ಉದಯೋನ್ಮುಖ ಆರ್ಥಿಕತೆಯ ರಾಷ್ಟ್ರಗಳು ಇಂಡೋನೇಷ್ಯಾದ (Indonesia) ಬಾಲಿಯಲ್ಲಿ ಆಯೋಜಿಸಿರುವ ಎರಡು ದಿನಗಳ ಶೃಂಗಸಭೆಯಲ್ಲಿ (G20 Summit) ಪಾಲ್ಗೊಂಡಿವೆ. ಇದು 17ನೇ ವಾರ್ಷಿಕ ಶೃಂಗಸಭೆಯಾಗಿದೆ. ಸಭೆಯ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರತಿನಿಧಿಸುವ ಭಾರತವು ಜಿ20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ. ಮುಂದಿನ ವರ್ಷ ಭಾರತದಲ್ಲಿ (India) 18ನೇ ಶೃಂಗಸಭೆ ನಡೆಯಲಿದೆ.
2022ರ ಶೃಂಗಸಭೆಯ ಅಜೆಂಡಾದಲ್ಲಿ ಏನಿದೆ?
ಜಾಗತಿಕ ಬೆಳವಣಿಗೆ, ಆಹಾರ ಮತ್ತು ಇಂಧನ ಭದ್ರತೆ, ಪರಿಸರ, ಆರೋಗ್ಯ ಮತ್ತು ಡಿಜಿಟಲ್ ರೂಪಾಂತರ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತ ಚರ್ಚೆಗೂ ಸಭೆ ವೇದಿಕೆ ಕಲ್ಪಿಸಲಿದೆ. ಇದನ್ನೂ ಓದಿ: ಜಿ20 ಶೃಂಗಸಭೆಯಲ್ಲಿ ಮೊದಲ ಬಾರಿಗೆ ರಿಷಿ ಸುನಾಕ್ ಭೇಟಿಯಾದ ಮೋದಿ
Advertisement
Advertisement
ಆರ್ಥಿಕ ಸಂಕಷ್ಟದಲ್ಲಿ ಜಿ20 ದೇಶಗಳು
ಅಕ್ಟೋಬರ್ 2021 ರಲ್ಲಿ ರೋಮ್‌ನಲ್ಲಿ ಶೃಂಗಸಭೆ ನಡೆದ ನಂತರ, ಜಾಗತಿಕ ಆರ್ಥಿಕತೆಯ ಭವಿಷ್ಯ ಹದಗೆಟ್ಟಿದೆ. G20 ದೇಶಗಳು ವಿಶ್ವದ ಜನಸಂಖ್ಯೆಯ ಶೇ.60, ವಿಶ್ವದ GDPಯ ಶೇ.80 ಮತ್ತು ವಿಶ್ವದ ರಫ್ತುಗಳಲ್ಲಿ ಶೇ.75 ರಷ್ಟನ್ನು ಹೊಂದಿವೆ. ಅಂತೆಯೇ ಅವು ಜಾಗತಿಕ ಬೆಳವಣಿಗೆಯ ಎಂಜಿನ್ ಎಂದೇ ಗುರುತಿಸಿಕೊಂಡಿವೆ.
Advertisement
ಆದಾಗ್ಯೂ, ಜಿ20 ದೇಶಗಳ ಕುರಿತಾದ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಇತ್ತೀಚಿನ ವರದಿಯಂತೆ, ಕೋವಿಡ್-19 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಜಿ20 ದೇಶಗಳು ಗಮನಾರ್ಹ ಉತ್ಪಾದನಾ ನಷ್ಟವನ್ನು ಅನುಭವಿಸಿವೆ. ಭಾರತವು ತನ್ನ ಒಟ್ಟು ಉತ್ಪಾದನೆಯ ಸುಮಾರು ಶೇ.14 ರಷ್ಟನ್ನು ಕಳೆದುಕೊಂಡಿದೆ. ಎಲ್ಲಾ G20 ದೇಶಗಳಲ್ಲಿ ಅತಿ ಹೆಚ್ಚು ನಷ್ಟವಾಗಿದೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಕದನ ವಿರಾಮ, ರಾಜತಾಂತ್ರಿಕತೆ ಮಾರ್ಗ ಕಂಡುಕೊಳ್ಳಬೇಕಿದೆ – ಜಿ20 ಶೃಂಗಸಭೆಯಲ್ಲಿ ಮೋದಿ ಮಾತು
Advertisement
ಪರಿಸ್ಥಿತಿ ಏಕೆ ಹದಗೆಟ್ಟಿದೆ?
ಜಾಗತಿಕ ಬೆಳವಣಿಗೆ ಮತ್ತು ಜಾಗತೀಕರಣದ ಭರವಸೆ ತೀವ್ರ ಹಿನ್ನಡೆಯನ್ನು ಅನುಭವಿಸುವುದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ, ಉಕ್ರೇನ್ (Ukraine) ಮೇಲಿನ ರಷ್ಯಾ (Russia) ಆಕ್ರಮಣವು ಭೌಗೋಳಿಕ ರಾಜಕೀಯ ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಅಲ್ಲದೇ ಜಾಗತಿಕ ಹಣದುಬ್ಬರ ಹೆಚ್ಚಿಸಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಿಂದ ವಿಧಿಸಿದ ನಿರ್ಬಂಧಗಳು ಸಹ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ.
ಎರಡನೆಯದಾಗಿ, ಹಣದುಬ್ಬರ ಪರಿಣಾಮವಾಗಿ ಕೇಂದ್ರೀಯ ಬ್ಯಾಂಕುಗಳು ಬಡ್ಡಿದರಗಳನ್ನು ಹೆಚ್ಚಿಸಿವೆ. ಇದು ಆರ್ಥಿಕ ಚಟುವಟಿಕೆಯನ್ನು ಮತ್ತಷ್ಟು ಕುಂಠಿತಗೊಳಿಸಿದೆ. ಪ್ರಮುಖ ಆರ್ಥಿಕತೆ ಕೇಂದ್ರಗಳಾದ US ಮತ್ತು UK ರಾಷ್ಟ್ರಗಳೇ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿವೆ.
ಮೂರನೆಯದಾಗಿ, ಜಾಗತಿಕ ಬೆಳವಣಿಗೆಯ ಪ್ರಮುಖ ಎಂಜಿನ್‌ಗಳಲ್ಲಿ ಒಂದಾದ ಚೀನಾ, ರಿಯಲ್ ಎಸ್ಟೇಟ್ ಬಿಕ್ಕಟ್ಟಿನ ವಿರುದ್ಧ ಹೋರಾಡುತ್ತಿರುವುದು ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಇದನ್ನೂ ಓದಿ: ಅಶ್ವಾರೋಹಣ ಸ್ಪರ್ಧೆಗೆ ಅಭ್ಯಾಸ ನಡೆಸುತ್ತಿದ್ದ ಬಿಎಸ್‌ಎಫ್ ಯೋಧನಿಗೆ ಕುದುರೆ ತುಳಿದು ಸಾವು
ಕೊನೆಯದಾಗಿ, ವಿಶ್ವದ ಆರ್ಥಿಕತೆ ಕೇಂದ್ರಗಳಾದ ಯುಎಸ್ ಮತ್ತು ಚೀನಾ ನಡುವಿನ ಉದ್ವಿಗ್ನತೆ ಅಥವಾ ಬ್ರೆಕ್ಸಿಟ್ ನಿರ್ಧಾರದ ಹಿನ್ನೆಲೆಯಲ್ಲಿ ಯುಕೆ ಮತ್ತು ಯೂರೋ ಪ್ರದೇಶದ ನಡುವಿನ ವ್ಯಾಪಾರದಲ್ಲಿ ಕುಸಿತ ಉಂಟಾಗಿದೆ. ಈ ಭೌಗೋಳಿಕ ರಾಜಕೀಯ ಬಿರುಕುಗಳೊಂದಿಗೆ ವಿಶ್ವ ಆರ್ಥಿಕತೆಯು ಹೋರಾಡುತ್ತಿದೆ.
ಪರಿಹಾರ ಎಲ್ಲಿದೆ?
ಜಾಗತಿಕ ಭವಿಷ್ಯವು ಸುಧಾರಿಸಲು ಜಿ20 ರಾಷ್ಟ್ರಗಳು ಒಟ್ಟಾಗಿ ಸಾಗಬೇಕು. ಆಗ ಆರ್ಥಿಕವಾಗಿ ವೇಗವಾಗಿ ಬೆಳೆಯಬಹುದು. ಅಂತಹ ಬೆಳವಣಿಗೆಗೆ ಶಾಂತಿಯ ಅಗತ್ಯವಿರುತ್ತದೆ. IMF ಪ್ರಕಾರ, ಸಾಲದ ಮಟ್ಟವನ್ನು ತಗ್ಗಿಸುವುದು, ದುರ್ಬಲ ರಾಷ್ಟ್ರಗಳ ನೆರವಿಗೆ ಧಾವಿಸುವುದು, ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸುವ ಕೆಲಸ ಆಗಬೇಕು. G20 ನಾಯಕರು ಹೆಚ್ಚು ʻಮುಕ್ತ, ಸ್ಥಿರ ಮತ್ತು ಪಾರದರ್ಶಕ ನಿಯಮ ಆಧಾರಿತʼ ವ್ಯಾಪಾರಕ್ಕೆ ಒತ್ತಾಯಿಸಬೇಕಾಗಿದೆ.
ರೋಮ್‌ನಲ್ಲಿ ಅಕ್ಟೋಬರ್ 2021 ರಲ್ಲಿ ನಡೆದ ಶೃಂಗಸಭೆಯ ನಂತರ, ಜಾಗತಿಕ ಆರ್ಥಿಕತೆ ಭವಿಷ್ಯವು ಹದಗೆಟ್ಟಿದೆ. ಇದಕ್ಕೆ ಪರಿಹಾರಗಳನ್ನು ಹುಡುಕುವ ನಿಟ್ಟಿನಲ್ಲಿ G20 ನಾಯಕರು ಹೇಗೆ ಕೆಲಸ ಮಾಡಬಹುದು ಎಂಬುದು ಕುತೂಹಲ ಮೂಡಿಸಿದೆ. ರೋಗಗ್ರಸ್ಥವಾಗಿರುವ ಜಾಗತಿಕ ಆರ್ಥಿಕತೆಗೆ 17ನೇ ಶೃಂಗಸಭೆಯು ಬೂಸ್ಟರ್ ಡೋಸ್ ನೀಡಬಹುದೇ ಎಂಬುದನ್ನು ಕಾದು ನೋಡಬೇಕಿದೆ.