– ಬಿಜೆಪಿ ಕಾಲದ ಕೆಲ ಹಗರಣಗಳು ಅಂತಿಮ ಹಂತದ ತನಿಖೆಯಲ್ಲಿವೆ ಎಂದ ಸಚಿವ
ಬೆಂಗಳೂರು: ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಅವರಿಂದು ಸದಾಶಿವನಗರದ ನಿವಾಸದಲ್ಲಿ ಗೃಹ ಸಚಿವ ಪರಮೇಶ್ವರ್ (G Parameshwara) ಅವರನ್ನ ಭೇಟಿ ಮಾಡಿದ್ದಾರೆ. ಹೆಚ್‌ಡಿಕೆ ಹಾಗೂ ಯಡಿಯೂರಪ್ಪ ವಿರುದ್ಧ ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ, ಮುಡಾ ಪ್ರಕರಣ ಸೇರಿ ಕೆಲವು ಮಹತ್ವದ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು, ಪ್ರತ್ಯೇಕ ಸಭೆಗಳಿಗೆ ಹೈಕಮಾಂಡ್ ಬ್ರೇಕ್ ಹಾಕಲು ತಾಕೀತು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನಾನಾಗಲೀ ಸತೀಶ್ ಜಾರಕಿಜೊಳಿ (Satish Jarkiholi) ಆಗಲೀ, ಮಹಾದೇಪ್ಪ ಆಗಲೀ ನಾವು ಸಿಎಂ ಪದವಿ ಬಗ್ಗೆ ಚರ್ಚೆ ಯಾವತ್ತೂ ಮಾಡಿಲ್ಲ. ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿರ್ತಾರೆ ಅಂತ ನಾವು ಅನೇಕ ಬಾರಿ ಹೇಳಿದ್ದೀವಿ. ಇದು ಬಿಟ್ಟು ನಾವ್ಯಾರೂ ಕೂಡಾ ಸಿಎಂ ಅವರನ್ನ ಬದಲಾಯಿಸಿ, ಬೇರೆಯವರನ್ನು ಮಾಡಿ, ನಮಗೆ ಮಾಡಿ ಅಂತ ಮಾತಾಡಿಲ್ಲ. ಇನ್ಮುಂದೆ ನಾನು ಸಿಎಂ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.
Advertisement
Advertisement
ನಾವು ಅನವಶ್ಯಕವಾಗಿ ಡಿನ್ನರ್ ಮೀಟಿಂಗ್ (Dinner Meeting), ರಾಜಕೀಯ ಮೀಟಿಂಗ್ಸ್ ಮಾಡಿಲ್ಲ, ಮಾಡುವುದೂ ಇಲ್ಲ. ಮುಂದೆಯೂ ಅನವಶ್ಯಕ ಭೇಟಿಗಳನ್ನು ಮಾಡಲ್ಲ. ಇದು ನನ್ನ ಸ್ಪಷ್ಟ ಹೇಳಿಕೆ. ಏನೂ ಇಲ್ಲದೇ ನಮ್ಮನ್ನು ಆಪಾದಿತರ ಸ್ಥಾನದಲ್ಲಿ ನಿಲ್ಲಿಸಿದರೆ ಬೇಜಾರಾಗಲ್ವಾ? ನಾವೆಲ್ಲ ಜವಾಬ್ದಾರಿ ಇರೋರು, ಹುಡುಗಾಟಿಕೆ ಮಾಡೋರಲ್ಲ, ನಾವು ಪಕ್ಷದಲ್ಲಿ ಹಿರಿಯರು, ನಮಗೂ ಜವಾಬ್ದಾರಿ ಇದೆ ಎಂದು ಗರಂ ಆಗಿದ್ದಾರೆ. ಇದನ್ನೂ ಓದಿ: ಮಾಂಸಾಹಾರ ಸೇವನೆಯಿಂದ ಫುಡ್ ಪಾಯಿಸನ್ – 20 ಮಂದಿ ಅಸ್ವಸ್ಥ, 10 ಮಂದಿ ಆಸ್ಪತ್ರೆಗೆ ದಾಖಲು
Advertisement
ಇದೇ ವೇಳೆ ಬಿಜೆಪಿ ಕಾಲದ ಹಗರಣಗಳ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿ, ತನಿಖೆ ಮುಗಿದಾಗ ತನಿಖಾ ವರದಿ ಬಿಡುಗಡೆ ಮಾಡ್ತೇವೆ. ಕೆಲವು ಅಂತಿಮ ಹಂತದ ತನಿಖೆಯಲ್ಲಿವೆ, ಅವು ಪೂರ್ತಿ ಆಗಲಿ. ಹಣಕಾಸು ಅಕ್ರಮಗಳಿವೆ, ಇನ್ನೂ ಬೇರೆ ಬೇರೆ ಇವೆ ಎಂದಿದ್ದಾರೆ.
Advertisement
ಗಂಗಾ ಕಲ್ಯಾಣ ಯೋಜನೆ ಹಣ ದುರುಪಯೋಗ ವಿಚಾರ ಕುರಿತು ಮಾತನಾಡಿದ ಸಚಿವರು, ಗಂಗಾ ಕಲ್ಯಾಣ ಅಕ್ರಮ ಆರೋಪದ ಪರಿಶೀಲನೆ ನಮ್ಮ ಸಮಿತಿ ಮಾಡ್ತಿದೆ. ಅವ್ಯವಹಾರ ಆಗಿದೆ ಅನ್ನೋದು ಪತ್ತೆ ಆಗಬೇಕು, ಅಕ್ರಮ ಆಗಿದ್ರೆ ಪತ್ತೆ ಮಾಡ್ತೇವೆ, ಈಗಲೇ ಅದರ ಬಗ್ಗೆ ಹೇಳೋಕ್ಕಾಗಲ್ಲ ಎಂದು ಹೇಳಿದರು. ಇದನ್ನೂ ಓದಿ: ಹಾಲಿನ ದರ ಏರಿಕೆಗೆ ಕೆಎಂಎಫ್ ತಾತ್ಕಾಲಿಕ ಬ್ರೇಕ್- ಈ ವರ್ಷ ಹಾಲಿನ ದರ ಏರಿಕೆ ಬಹುತೇಕ ಡೌಟ್
ಸಿಎಂ ಆಗಲು ಸಿದ್ಧಗಂಗಾ ಮಠದಲ್ಲಿ ಪರಮೇಶ್ವರ್ ವಿಶೇಷ ಪೂಜೆ ಮಾಡಿದ್ದಾರೆಂಬ ಅಶೋಕ್ ಆರೋಪ ವಿಚಾರಕ್ಕೆ ತಿರುಗೇಟು ನೀಡಿದ ಪರಮೇಶ್ವರ್, ಸಿದ್ಧಗಂಗಾ ಮಠದ ಜತೆ ನಮ್ಮ ಸಂಬಂಧವೇ ಬೇರೆ. ನಮ್ಮ ತಂದೆ ಕಾಲದಿಂದಲೂ ಮಠಕ್ಕೆ ನಡೆದುಕೊಳ್ತೇವೆ. ದೊಡ್ಡ ಸ್ವಾಮೀಜಿ ಇದ್ದಾಗಿಂದಲೂ ಹೋಗ್ತೀವಿ, ಅವರು ನಮಗೆಲ್ಲ ಆದರ್ಶ. ಇತ್ತೀಚೆಗೆ ನಾನು ಮಠಕ್ಕೆ ಹೋಗಿಲ್ಲ. ಅಲ್ಲಿ ಹೋಗಿ ರಾಜಕೀಯ ಎಲ್ಲ ಮಾತಾಡಲ್ಲ ನಾವು ಎಂದು ತಿಳಿಸಿದರು. ಇದನ್ನೂ ಓದಿ: Photo Gallery | ಮಂಗಳೂರು ದಸರಾ ವೈಭವ – ಶಾರದಾ ಮಾತೆಗೆ ಅಷ್ಟ ದಿನದ ಅಲಂಕಾರ
ಇನ್ನೂ ಸಂಪುಟದಲ್ಲಿ ಕೋವಿಡ್ ಅಕ್ರಮ ಕುರಿತ ಮೈಕೆಲ್ ಡಿ ಕುನ್ಹಾ ವರದಿ ಚರ್ಚೆ ಕುರಿತು ಮಾತನಾಡಿದ ಗೃಹಸಚಿವರು, ಮಧ್ಯಂತರ ವರದಿ ಪ್ರಕಾರ ಇನ್ನಷ್ಟು ಮಾಹಿತಿ ಕಲೆ ಹಾಕಬೇಕಿದೆ, ಸಂಪುಟದಲ್ಲಿ ಏನು ಚರ್ಚೆ ಆಗುತ್ತೋ ನೋಡೋಣ. ನಿನ್ನೆ ಕೂಡ ನನ್ನ ನೇತೃತ್ವದ ಸಮಿತಿ ಸಭೆ ನಡೆಸಲಾಯಿತು. ಎಲ್ಲ ಹಗರಣಗಳ ಪರಿಶೀಲನೆ ಬಗ್ಗೆ ಸಮಿತಿ ರಚನೆ ಮಾಡಿದ್ದಾರೆ. ಕೋವಿಡ್ ಬಗ್ಗೆ ತನಿಖಾ ವರದಿ ಬಂದಿದೆ, ಇನ್ನೂ ಪೊಲೀಸ್ ತನಿಖೆ ಆಗಬೇಕು ಎಂದಿದ್ದಾರೆ.