ತುಮಕೂರು: ಕ್ಷೇತ್ರದ ಜನ 2 ಬಾರಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಆದರೆ ಒಳ್ಳೆ ಟೈನಲ್ಲಿ ಪಲ್ಟಿ ಹೊಡೆಸಿದ್ದಾರೆ. ಹಣೆಬರಹ ಸರಿ ಇದ್ದಿದ್ದರೇ ನಾನು ಸಿಎಂ ಆಗುತ್ತಿದ್ದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ (G Parameshwara) ಬೇಸರ ವ್ಯಕ್ತಪಡಿಸಿದರು.
ಕೊರಟಗೆರೆಯ (Koratagere) ತೋವಿನಕೆರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2013ರಲ್ಲಿ ಒಂದೇ ಒಂದು ಓಟ್‍ನಲ್ಲಿ ಗೆದ್ದಿದ್ದರೇ ಈ ರಾಜ್ಯದ ಮುಖ್ಯಮಂತ್ರಿ (Chief Minister) ಆಗುವ ಅವಕಾಶ ಇತ್ತು. ಆದರೆ ನನ್ನದು ಹಣೆಬರಹ ಇರಬೇಕಲ್ಲಾ ಬರೇ ನಿಮ್ಮದೇ ಹೇಳಿದ್ರೆ ಸರಿಯಾಗಲ್ಲ. ಹಣೆ ಬರಹ ಬಹುಶಃ ನನಗಿರಲಿಲ್ಲ ಅಂತಾ ಕಾಣಿಸುತ್ತೆ ಎಂದು ಮುಖ್ಯಮಂತ್ರಿ ಆಗುವ ಆಸೆ ನನಸಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಆಜಾದ್ ನಗರದಲ್ಲಿ ಕಾರು ಜಖಂ – ಹರ್ಷ ಸಹೋದರಿ ಅಶ್ವಿನಿ ವಿರುದ್ಧ FIR
Advertisement
Advertisement
ಇಂದು ನನ್ನ ಕೈಲಾದ ಕೆಲಸ ಮಾಡಿದ್ದೇನೆ ಎನ್ನುವ ಅತ್ಮತೃಪ್ತಿ ನನಗಿದೆ. ತಮಗೆ ಇದೆಯೋ ಇಲ್ವೋ ಗೊತ್ತಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕಾರ್ಗಿಲ್ ಯುದ್ಧಭೂಮಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಮೋದಿ