ಬೆಂಗಳೂರು: ಮಂಡ್ಯ ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮಗು ಬಲಿಯಾಗಿರುವುದು ತಲೆತಗ್ಗಿಸುವಂಥ ಘಟನೆ. ಇಂತಹ ಘಟನೆಗಳು ಮುಂದೆ ನಡೆಯದಂತೆ ಕ್ರಮ ವಹಿಸುತ್ತೇವೆ ಎಂದು ಗೃಹಸಚಿವ ಜಿ ಪರಮೇಶ್ವರ್ (G Parameshwar) ಹೇಳಿದರು.
ಬೆಂಗಳೂರಿನಲ್ಲಿ (Bengaluru) ಮಾಧ್ಯಮದವರೊಂದಿಗೆ ಮಂಡ್ಯದಲ್ಲಿ (Mandya) ಸೋಮವಾರ ಟ್ರಾಫಿಕ್ ಪೊಲೀಸರ (Traffic Police) ಎಡವಟ್ಟಿಗೆ ಮಗು ಮೃತಪಟ್ಟಿರುವ ಘಟನೆ ಬಗ್ಗೆ ಮಾತನಾಡಿದರು. ಇವತ್ತು ಸಭೆ ಕರೆದಿದ್ದೇನೆ. ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ. ಪೊಲೀಸರು ಸೋಮವಾರ ಮಾನವೀಯತೆ ತೋರಲಿಲ್ಲ. ಸ್ವಂತಿಕೆಯೂ ಪ್ರದರ್ಶಿಸಲಿಲ್ಲ ಎಂದು ಮಂಡ್ಯ ಟ್ರಾಫಿಕ್ ಪೊಲೀಸರ ನಡೆಗೆ ಖಂಡನೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಂಡ್ಯ | ಬೈಕ್ ಅಡ್ಡಗಟ್ಟಿದ ಪೊಲೀಸ್ರು – ಆಯತಪ್ಪಿ ಬಿದ್ದು ತಾಯಿ ಮಡಿಲಲ್ಲೇ ಪ್ರಾಣಬಿಟ್ಟ ಮಗು
ಸೋಮವಾರದ ಘಟನೆ ದುರಾದೃಷ್ಟಕರ. ಆ ಘಟನೆ ನಡೆಯಬಾರದಿತ್ತು. ಪೊಲೀಸರು ಪೋಷಕರ ಜತೆ ಸರಿಯಾಗಿ ನಡೆದುಕೊಳ್ಳಲಿಲ್ಲ. ಈ ರೀತಿ ನಡೆದುಕೊಳ್ಳದಂತೆ ಪೊಲೀಸರಿಗೆ ಎಚ್ಚರಿಕೆ ಕೊಟ್ಟಿದ್ದೇವೆ. ಮೂವರನ್ನು ಅಮಾನತು ಮಾಡಿದ್ದು, ಶಿಸ್ತುಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಕಾರಿನಲ್ಲಿ ಒಂದೇ ಕುಟುಂಬದ 7 ಮಂದಿ ವಿಷ ಸೇವಿಸಿ ಆತ್ಮಹತ್ಯೆ
ಪೊಲೀಸರು ಅವೈಜ್ಞಾನಿಕವಾಗಿ ವಾಹನ ಸವಾರರನ್ನು ತಡೆಯೋದು ಬೇಡ. ಎಲ್ಲೋ ಮೂಲೆಯಲ್ಲಿ ನಿಂತು ಏಕಾಏಕಿ ಬಂದು ಪೊಲೀಸರು ವಾಹನ ತಡೆಯುತ್ತಾರೆ. ಈ ರೀತಿ ಮಾಡಬಾರದು, ಅದಕ್ಕೇ ಆದ ಒಂದು ಪದ್ಧತಿ ಇದೆ. ಆ ಪದ್ಧತಿಯನ್ನು ಪೊಲೀಸರು ಅನುಸರಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಬಮೂಲ್ ಚುನಾವಣೆ ಹಿಂದಿನ ದಿನ ಜೆಡಿಎಸ್ ಬೆಂಬಲಿತ 17 ಮತದಾರರು ಅನರ್ಹ – ಕಾಂಗ್ರೆಸ್‌ನಿಂದ ಅಧಿಕಾರ ದುರುಪಯೋಗ?
ಡ್ರಿಂಕ್ ಅಂಡ್ ಡ್ರೈವ್, ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಇದರೆಲ್ಲದರ ವಿರುದ್ಧ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕೋ ಅದೇ ರೀತಿ ಕ್ರಮ ಆಗಬೇಕು. ಅಲ್ಲದೇ ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ವಾಹನ ಸವಾರರು ವೇಗವಾಗಿ ಬರುತ್ತಿರುವಾಗ ಹೋಗಿ ಪೊಲೀಸರು ತಡೆಯುವ ಕೆಲಸ ಮಾಡ್ತಾರೆ. ಇದು ನಿಲ್ಲಬೇಕು ಎಂದರು. ಇದನ್ನೂ ಓದಿ: ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ರಶ್ಮಿಕಾ ಐಟಂ ಡ್ಯಾನ್ಸ್?
ಇವತ್ತು ಇದೆಲ್ಲದರ ಬಗ್ಗೆ ಚರ್ಚಿಸಿ ಸೂಚನೆ ಕೊಡ್ತೇವೆ. ನಿನ್ನೆ ಪೋಷಕರು ಮಗುವಿಗೆ ನಾಯಿ ಕಚ್ಚಿದೆ ಕರ್ಕೊಂಡು ಹೋಗ್ತಿದೀವಿ ಎಂದ್ರೂ ಪೊಲೀಸರು ಬಿಡಲಿಲ್ಲ. ಇಂಥ ಸಂದರ್ಭಗಳಲ್ಲಿ ಪೊಲೀಸರು ಸ್ವಂತಿಕ ಪ್ರದರ್ಶನ ಮಾಡಬೇಕು. ಸ್ವಂತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.