Connect with us

Districts

ಕೊಡಗು ಸಂತ್ರಸ್ತರಿಗೆ ನೆರವಾಗಲು 1 ಎಕ್ರೆ ಕಾಫಿ ತೋಟ ದಾನ ನೀಡಿದ್ರು ಜಿ.ಪಂ ಸದಸ್ಯ!

Published

on

ಮಡಿಕೇರಿ: ಕೊಡಗಿನಲ್ಲಿ ಸುರಿದ ಭಾರೀ ಮಳೆ ಹಾಗೂ ಭೀಕರ ಭೂಕುಸಿತಕ್ಕೆ ಸಿಲುಕಿದ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಅವರೆಲ್ಲರಿಗೂ ಮಾದರಿ ಎಂಬಂತೆ ಕೊಡಗು ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ತಮ್ಮ 1 ಎಕರೆ ಕಾಫಿ ತೋಟವನ್ನು ನಿರಾಶ್ರಿತರ ಮನೆಗಳ ನಿರ್ಮಾಣಕ್ಕೆ ದಾನವಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ.

ಕೊಡಗಿನ ಕುಡಿಯರ ದಂಪತಿ ತಮ್ಮ 1 ಎಕರೆ ಜಾಗವನ್ನು ದಾನ ಮಾಡೋದಾಗಿ ಘೋಷಿಸಿದ್ದಾರೆ. ಇದೀಗ ಕೊಡಗು ಜಿಲ್ಲಾ ಪಂಚಾಯತ್ ಸದಸ್ಯ ಲತೀಫ್ ಅವರು ತಮ್ಮ 5 ಎಕರೆ ಕಾಫಿ ತೋಟದಲ್ಲಿ 1 ಎಕರೆಯನ್ನು ನಿರಾಶ್ರಿತರ ಮನೆ ನಿರ್ಮಾಣಕ್ಕೆ ನೀಡಲು ಮುಂದಾಗಿದ್ದಾರೆ.

ಮಡಿಕೇರಿ ಮೈಸೂರು ಹೆದ್ದಾರಿ ಸಮೀಪದ ಸುಂಟಿಕೊಪ್ಪ ನಿವಾಸಿಯಾಗಿರೋ ಜಿಲ್ಲಾ ಪಂಚಾಯತ್ ಸದಸ್ಯ ಲತೀಫ್, ಸುಂಟಿಕೊಪ್ಪ ವ್ಯಾಪ್ತಿಯ ತಮ್ಮ 1 ಎಕರೆ ತೋಟವನ್ನು ದಾನವಾಗಿ ನೀಡುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಹಾಗೂ ಸುಂಟಿಕೊಪ್ಪ ಪಟ್ಟಣದಿಂದ 1 ಕಿಲೋ ಮೀಟರ್ ದೂರದಲ್ಲಿ ಈ ಜಾಗದಲ್ಲಿ ಲತೀಫ್ ಕಾಫಿ ಮತ್ತು ಕಾಳು ಮೆಣಸನ್ನು ಬೆಳೆಯುತ್ತಿದ್ದರು. ಈಗ ಈ ಜಾಗದಲ್ಲಿ 30 ಮನೆಗಳು ನಿರ್ಮಾಣವಾಗಲಿದೆ.

ಎಸ್‍ಎಸ್‍ಎಫ್ ಹಾಗೂ ಪಿಎಫ್‍ಐ ಸಂಘಟನೆ ವತಿಯಿಂದ ಈ ಜಾಗದಲ್ಲಿ ಮನೆ ನಿರ್ಮಿಸಿಕೊಡಲು ತೀರ್ಮಾನಿಸಲಾಗಿದೆ. ಹಿಂದೂ,ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದ ನಿರಾಶ್ರಿತರನ್ನು ಗುರುತಿಸಿ ಮನೆ ನೀಡಲು ಮುಂದಾಗಿರೋ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *