Connect with us

Districts

ಟಿಪ್ಪು ಜಯಂತಿ ಮಾಡಬೇಕಂತಾ ಹೇಳಿ ಎಚ್‍ಡಿಕೆ ಓಡಿಹೋದ್ರು: ಗೋ.ಮಧುಸೂಧನ್ ವ್ಯಂಗ್ಯ

Published

on

ಮೈಸೂರು: ಟಿಪ್ಪು ಜಯಂತಿ ಮಾಡಬೇಕು ಅಂತಾ ಹೇಳಿದವರು ನೀವೇ. ಈಗ ಓಡಿಹೋಗಿರುವವರು ನೀವೇ. ನಿಮ್ಮ ಎರಡು ನಾಲಿಗೆ ಬುದ್ಧಿಯನ್ನು ಜನ ನಂಬಬೇಕಾ ಕುಮಾರಸ್ವಾಮಿ ಅವರೇ ಎಂದು ಗೋ.ಮಧುಸೂಧನ್ ಪ್ರಶ್ನಿಸಿ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ಟಿಪ್ಪು ಜಯಂತಿ ಬೇಕಿಲ್ಲ. ಹೀಗಾಗಿ ಟಿಪ್ಪು ಜಯಂತಿ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ. ಕಾಂಗ್ರೆಸ್‍ನವರ ಜೊತೆಗೆ ಜೆಡಿಎಸ್ ಆಡಳಿತ ನಡೆಸುತ್ತಿದೆ. ಹೀಗಾಗಿ ಕೈ ನಾಯಕರ ನಿಲುವಿಗೆ ವಿರೋಧ ವ್ಯಕ್ತಪಡಿಸಲು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆಗುತ್ತಿಲ್ಲ. ಇದು ಜೆಡಿಎಸ್ ಕರ್ಮ. ಹೀಗಾಗಿ ಜೆಡಿಎಸ್ ಯಾವಾಗಲೂ ಡಬಲ್ ಸ್ಟ್ಯಾಂಡ್ ಕಾಯ್ದುಕೊಳ್ಳುತ್ತದೆ ಎಂದು ಆರೋಪಿಸಿದರು.

ಹೆತ್ತವರಿಗೆ ಹೆಗ್ಗಣ್ಣ ಮುದ್ದು ಎನ್ನುವಂತೆ ಜೆಡಿಎಸ್‍ಗೆ ಈಗ ಕಾಂಗ್ರೆಸ್ ಮುದ್ದಾಗಿದೆ ಅಷ್ಟೇ. ದೇಶ ಮುಸ್ಲಿಂ ಗುಲಾಮಗಿರಿಯಿಂದ ಹೊರಬರುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಹಿಂದೂ ವಿರೋಧಿ ಟಿಪ್ಪು ಜಯಂತಿ ಮಾಡಲಾಗುತ್ತಿದೆ. ಟಿಪ್ಪು ಒಬ್ಬ ಮತಾಂಧ ಹಾಗೂ ಇಂತವನ ಜಯಂತಿಗೆ ಹೋದರೆ ನನಗೂ ಏನೋ ಕಾದಿದೆ ಅಂತಾ ಕುಮಾರಸ್ವಾಮಿ ಅವರಿಗೆ ಗೊತ್ತು. ಅದೇ ಕಾರಣಕ್ಕೆ ಜಯಂತಿಗೆ ಹೋಗಿಲ್ಲ ಎಂದು ಕುಟುಕಿದರು.

ಮೈಸೂರಿನಲ್ಲಿನ ನಜ್ಹರ್ ಬಾದ್ ಹೆಸರನ್ನು ಬದಲಾಯಿಸಬೇಕು. ಇದು ಟಿಪ್ಪು ಇಟ್ಟ ಹೆಸರಾಗಿದ್ದು, ಮೂಲ ಹೆಸರನ್ನು ಇಡಬೇಕು ಎಂದು ಒತ್ತಾಯಿಸಿದ ಅವರು, ಟಿಪ್ಪು ಸುಲ್ತಾನ್ ಅಲ್ಲ. ಆತ ಸುಲ್ತಾನ್ ಆಗಬೇಕು ಅಂತಾ ಆಸೆ ಪಟ್ಟಿದ್ದ ಅಷ್ಟೇ. ಅದು ಆಗಲಿಲ್ಲ. ಆತ ಬರೀ ಟಿಪ್ಪು, ಮೈಸೂರು ಹುಲಿಯೂ ಅಲ್ಲ. ಇಲಿಯೂ ಅಲ್ಲ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಅವರು, ಟಿಪ್ಪು ಜಯಂತಿ ಜಾರಿಗೆ ತಂದಿದ್ದಕ್ಕೆ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತರು. ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತೆ ಎನ್ನುವುದಕ್ಕೆ ಮಾಜಿ ಸಿಎಂ ಉದಾಹರಣೆ. ಅವರು ಸಿದ್ದರಾಮಯ್ಯ ಅಲ್ಲ. ಸಿದ್ದುಖಾನ್ ಎಂದು ವ್ಯಂಗ್ಯವಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *