ಬೆಂಗಳೂರು: ವಿಧಾನಸೌಧ ಪಡಸಾಲೆ ವಸ್ತುಗಳು ಮಾಜಿ ಸ್ಪೀಕರ್ ಕೋಳಿವಾಡ ನಿವಾಸದಲ್ಲಿರುವುದು ಕಂಡು ಬಂದಿದೆ.
ಜಾಲಹಳ್ಳಿಯಲ್ಲಿರೋ ಖಾಸಗಿ ನಿವಾಸದಲ್ಲಿ ಲಕ್ಷ ಲಕ್ಷ ವೆಚ್ಚದಲ್ಲಿ ಖರೀದಿಸಿದ್ದ ಸೋಫಾ ಸೆಟ್‍ಗಳು ಇದ್ದು, ಸೋಫಾ ಸೆಟ್ ಮೇಲೆ ಕೆಎಲ್‍ಎಎಸ್/ಎಲ್‍ಎಚ್/5ಕೆ ಅಂತ ನಮೂದು ಮಾಡಲಾಗಿದೆ. ಈ ಮೂಲಕ ಕೋಳಿವಾಡ ಅವರು ಅಧಿಕಾರದಲ್ಲಿದ್ದಾಗ ಖರೀದಿಸಿದ್ದ ವಸ್ತುಗಳನ್ನು ಹೊತ್ತೊದ್ರಾ ಎಂಬ ಪ್ರಶ್ನೆಯೊಂದು ಎದ್ದಿದೆ.
ವಿಧಾನಸೌಧದಲ್ಲಿರಬೇಕಾದ ವಸ್ತುಗಳು ಕೋಳಿವಾಡ ನಿವಾಸಕ್ಕೆ ಬಂದಿದ್ದೇಗೆ? ಅಧಿಕಾರ ಮುಗಿಯುತ್ತಿದ್ದಂತೆ ಸರ್ಕಾರಿ ವಸ್ತುಗಳನ್ನು ನೀಡಬೇಕೆಂಬ ಪರಿಜ್ಞಾನವೂ ಇಲ್ಲವೇ? ಅಧಿಕಾರ ಇಲ್ಲದಿದ್ದರೂ ಸರ್ಕಾರಿ ಸವಲತ್ತು ಅನುಭವಿಸುತ್ತಿರೋದು ಸರೀನಾ ಅನ್ನೋ ಸಾಕಷ್ಟು ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.
ಕೋಳಿವಾಡ ಅವರು ಸ್ಪೀಕರ್ ಆಗಿದ್ದಂತಹ ಸಂದರ್ಭದಲ್ಲಿ ಅನೇಕ ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದರು. ಅದರ ಮುಂದುವರಿದ ಭಾಗವೂ ಇದಾಗಿದೆ ಎನ್ನುವ ಮಾತುಗಳು ಈಗ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.