ವಾಷಿಂಗ್ಟನ್: ದರೋಡೆಗೆ ಯತ್ನಿಸಿ ಸಿಸಿಟಿವಿ ಕ್ಯಾಮೆರಾದ ಕಣ್ಣಿಗೆ ಸಿಕ್ಕ ಕೆಲವು ದೃಶ್ಯಗಳನ್ನು ಅಮೆರಿಕದ ಕೊಲಾರಾಡೋ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದು, ಅದರಲ್ಲಿ ಒಂದು ವಿಡಿಯೋ ಭಾರೀ ವೈರಲ್ ಆಗಿದೆ.
ಕೊಲಾರಾಡೋ ರಾಜ್ಯದ ಅರೋರಾ ನಗರದ ಇ-ಸಿಗರೇಟ್ ಅಂಗಡಿ ದರೋಡೆಗೆ ವ್ಯಕ್ತಿಯೊಬ್ಬ ಯತ್ನಿಸಿದ್ದಾನೆ. ಆದರೆ ಬೆದರಿಕೆ ಒಡ್ಡಲು ತೆಗೆದ ಗನ್ ಕೆಳಗೆ ಬೀಳುತ್ತಿದ್ದಂತೆ ಗಾಬರಿಗೊಂಡು, ಪರದಾಡಿದ ವಿಡಿಯೋ ವೀಕ್ಷಕರಲ್ಲಿ ಭಾರೀ ನಗೆ ತರಿಸುವಂತಿದೆ.
Advertisement
Advertisement
ವಿಡಿಯೋದಲ್ಲಿ ಏನಿದೆ?
ಕೆಂಪು ಟೋಪಿ, ಕಪ್ಪು ಕನ್ನಡಕ, ನೀಲಿ ಟಿ-ಶರ್ಟ್ ಹಾಕಿಕೊಂಡು ವ್ಯಕ್ತಿಯೊಬ್ಬ ಅಂಗಡಿಯ ಮುಂದೆ ಸ್ವಲ್ಪ ಹೊತ್ತು ನಡೆದಾಡಿದ್ದಾನೆ. ಅಲ್ಲಿಂದಲೇ ಅಂಗಡಿಯಲ್ಲಿ ಯಾರು ಇದ್ದಾರೆ ಎಂದು ಖಚಿತಪಡಿಸಿಕೊಂಡಿದ್ದ. ಬಳಿಕ ಗ್ರಾಹಕನಂತೆ ಅಂಗಡಿಯ ಒಳಗೆ ನುಗ್ಗಿ, ತನ್ನ ಪ್ಯಾಂಟ್‍ನಲ್ಲಿ ಇದ್ದ ಗನ್ ಹೊರತೆಗೆದಿದ್ದಾನೆ. ಕೌಂಟರ್ ಸಮೀಪಕ್ಕೆ ಬರುತ್ತಿದ್ದಂತೆ ಮಹಿಳಾ ಸಿಬ್ಬಂದಿಗೆ ಬೆದರಿಕೆ ಒಡ್ಡಲು ಹೋಗಿ, ಕೈ ಜಾರಿ ಗನ್ ಕೌಂಟರ್ ದಾಟಿ ಕೆಳಗೆ ಬಿದ್ದಿದ್ದರಿಂದ ದರೋಡೆಕೋರ ಗಾಬರಿಗೊಂಡಿದ್ದಾನೆ. ತಕ್ಷಣವೇ ಕೌಂಟರ್ ಹತ್ತಿ ಗನ್ ತೆಗೆದುಕೊಳ್ಳಲು ಪ್ರಯತ್ನಿಸಿ, ವಿಫಲನಾಗಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
Advertisement
ದರೋಡೆಕೋರ ಬಾಗಿಲಿನಿಂದ ಹೊರಗೆ ಹೋಗುತ್ತಿದ್ದಂತೆ ಪ್ಯಾಂಟ್ ಜಾರತೊಡಗಿದೆ. ಓಡುತ್ತಲೇ ಪ್ಯಾಂಟ್ ಸರಿ ಮಾಡಿಕೊಂಡು ಪರಾರಿಯಾಗಿದ್ದಾನೆ. ಬಳಿಕ ಮಹಿಳಾ ಸಿಬ್ಬಂದಿ ಗನ್ ಹಿಡಿದು ಆತನ ಹುಡುಕಾಟಕ್ಕೆ ಕೌಂಟರ್ ನಿಂದ ಹೊರ ಬರುತ್ತಾರೆ. ಆದರೆ ದರೋಡೆಕೋರ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಅರಿತು, ಯಾರಿಗೋ ಫೋನ್ ಕರೆ ಮಾಡಿ, ಮಾಹಿತಿ ನೀಡುತ್ತಾರೆ. ಈ ಎಲ್ಲ ದೃಶ್ಯಗಳು ಅಂಗಡಿಯಲ್ಲಿ ಇರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.facebook.com/AuroraCOPD/videos/303518700424956