ಶಾಲಾ ಮಕ್ಕಳಿಗೆ ಪೂರ್ಣ ಪ್ರಮಾಣದ ತರಗತಿ – ದಸರಾಗೆ 14 ದಿನ ರಜೆ

Public TV
2 Min Read
SCHOOL UNIFORAM

ಬೆಂಗಳೂರು: 2022-23ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಕೊರೊನಾದಿಂದ ಎರಡು ವರ್ಷ ಸಂಪೂರ್ಣ ತರಗತಿಗಳು ನಡೆದಿರಲಿಲ್ಲ. ಆದರೆ ಈ ವರ್ಷ ಪೂರ್ಣ ಪ್ರಮಾಣದ ತರಗತಿಗಳು ನಡೆಸಲು ವೇಳಾಪಟ್ಟಿ ಪ್ರಕಟ ಮಾಡಲಾಗಿದೆ.

ಈ ಶೈಕ್ಷಣಿಕ ವರ್ಷದಲ್ಲಿ 270 ದಿನಗಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲು ಇಡಲಾಗಿದೆ. ಈ ವರ್ಷದ ದಸರಾಗೆ 14 ದಿನ ರಜೆ ಘೋಷಣೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ಕಾರ್ಯಕ್ರಮವನ್ನು ಇಲಾಖೆ ಈ ಬಾರಿ ಹಮ್ಮಿಕೊಂಡಿದೆ. ಸರ್.ಎಂ. ವಿಶ್ವೇಶ್ವರಯ್ಯ ದಿನಾಚರಣೆ, ಮಹಾತ್ಮ ಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ, ಕನಕದಾಸರ ಜಯಂತಿ, ಸಂವಿಧಾನ ದಿನ, ಸಾವಿತ್ರ ಬಾಯಿ ಫುಲೆ, ವಿವೇಕಾನಂದರು ಸೇರಿದಂತೆ ಹಲವು ದಿನಾಚರಣೆ ಮತ್ತು ದಾರ್ಶನಿಕರ ಜಯಂತಿ ಆಚರಣೆಗೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಸಂಪ್ರದಾಯಕ್ಕೆ ಬ್ರೇಕ್‌ – ಸೂರ್ಯಾಸ್ತದ ಬಳಿಕ ಕೆಂಪು ಕೋಟೆಯಲ್ಲಿ ಮೋದಿ ಭಾಷಣ

telangana school

ಶಿಕ್ಷಣ ಇಲಾಖೆ ಶೈಕ್ಷಣಿಕ ವೇಳಾಪಟ್ಟಿಗೆ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸಿವೆ. ಖಾಸಗಿ ಶಾಲೆಗಳ ಸಂಘಟನೆ ಕ್ಯಾಮ್ಸ್ ನಿಂದ ವೇಳಾಪಟ್ಟಿ ವಿರೋಧ ಮಾಡಿದ್ದು, ವೇಳಾಪಟ್ಟಿಯಲ್ಲಿ ಕೆಲವು ಗೊಂದಲಗಳಿವೆ, ಅದನ್ನು ಸರಿ ಮಾಡುವಂತೆ ಒತ್ತಾಯಿಸಿದ್ದಾರೆ.

ಅಕ್ಟೋಬರ್ ತಿಂಗಳಿನಲ್ಲಿ 22 ದಿನ ಶೈಕ್ಷಣಿಕ ಚಟುವಟಿಕೆ ಮಾಡುವಂತೆ ನಿಗಧಿ ಮಾಡಲಾಗಿದೆ. ಆದರೆ ಅಕ್ಟೋಬರ್ ತಿಂಗಳಿನಲ್ಲಿ ದಸರಾಗೆ 14 ದಿನ ರಜೆ ನೀಡಲಾಗಿದೆ. ದೀಪಾವಳಿ ರಜೆ ಸೇರಿ 14-16 ದಿನ ಅಕ್ಟೋಬರ್ ತಿಂಗಳಲ್ಲಿ ಕಡಿಮೆ ಆಗಲಿದೆ. 14 ದಿನ ರಜೆ ಕೊಟ್ಟು 22 ದಿನ ಚಟುವಟಿಕೆಗಳನ್ನು ನಡೆಸಿ ಎನ್ನುವುದು ಸರಿಯಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಬೇಕು ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಒತ್ತಾಯ ಮಾಡಿದ್ದಾರೆ. 2022-23ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಹೀಗಿದೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಬಾರುಕೋಲು ಬೀಸುತ್ತೇನೆ: ಸಿದ್ದರಾಮಯ್ಯ

yadagiri school students 2 1
ಯಾವ ದಿನ ಏನು?

ಮೇ 16 – ಶಾಲೆಗಳು ಪ್ರಾರಂಭ
ಮೇ 16 ರಿಂದ 20 – ಶಾಲಾ ದಾಖಲಾತಿ ಪ್ರಕ್ರಿಯೆ
ಮೇ 17 ರಿಂದ 31 – ಕಲಿಕಾ ಚೇತರಿಕೆ ಕಾರ್ಯಕ್ರಮ
ಮೇ 28 – ಪೋಷಕರು, ತಾಯಂದಿರ ಸಭೆ
ಜೂನ್ 1 – ಪ್ರಸಕ್ತ ಸಾಲಿನ ಪಠ್ಯ ಬೋಧನೆಗೆ ಚಾಲನೆ
ಅಕ್ಟೋಬರ್ 3 ರಿಂದ 16 – ದಸರಾ ರಜೆ
ಅಕ್ಟೋಬರ್ 17 ರಿಂದ 25 – ಅರ್ಧ ವಾರ್ಷಿಕ ಪರೀಕ್ಷೆಗಳು
2023 ಫೆಬ್ರವರಿ 20 ರಿಂದ 25 – ಪೂರ್ಣ ಸಿದ್ದತಾ ಪರೀಕ್ಷೆ
2023 ಮಾರ್ಚ್ 23 ರಿಂದ 31 – ವಾರ್ಷಿಕ ಪರೀಕ್ಷೆ

Share This Article
Leave a Comment

Leave a Reply

Your email address will not be published. Required fields are marked *