ನಾಯಕಿ ತೇಜಸ್ವಿನಿ ಹುಟ್ಟು ಹಬ್ಬಕ್ಕೆ ‘ಫುಲ್ ಮೀಲ್ಸ್’ ಪೋಸ್ಟರ್

Public TV
1 Min Read
Full Meals

ಸಂಕಷ್ಟಕರ ಗಣಪತಿ,  ಫ್ಯಾಮಿಲಿ ಪ್ಯಾಕ್, ಅಬ್ಬಬ್ಬ ಚಿತ್ರಗಳ ಖ್ಯಾತಿಯ ನಾಯಕ ನಟ ಲಿಖಿತ್ ಶೆಟ್ಟಿ (Likhit Shetty) ನಟಿಸಿ ನಿರ್ಮಿಸುತ್ತಿರುವ ‘ಫುಲ್ ಮೀಲ್ಸ್’ (Full Meals) ಚಿತ್ರದ ನಾಯಕಿ ತೇಜಸ್ವಿನಿ ಶರ್ಮ (Tejaswini) ಹುಟ್ಟು ಹಬ್ಬದ ಅಂಗವಾಗಿ ಚಿತ್ರತಂಡ  ಬರ್ತ್ ಡೇ ಫೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ತ್ರಿಕೋನ ಪ್ರೆಮಕಥೆ ಹೊಂದಿರುವ ಸಿನೆಮಾದಲ್ಲಿ ನಾಯಕ ಲಿಖಿತ್ ಶೆಟ್ಟಿ ನಾಯಕಿಯರಾದ ತೇಜಸ್ವಿನಿ ಶರ್ಮ ಮತ್ತು ಖುಷಿ ರವಿಯೊಟ್ಟಿಗಿರುವ ವಿಭಿನ್ನ ಭಂಗಿಯ, ಭಾವದ ಪೋಸ್ಟರ್ ನೋಡುಗರ ಗಮನ ಸೆಳೆದಿದ್ದು, ಸಿನೆಮಾದ ಬಗ್ಗೆ ಕುತೂಹಲ ಹೆಚ್ಚಿಸಿದೆ.

Full Meals 2

ತೇಜಸ್ವಿನಿ ಶರ್ಮ ಚಿತ್ರದಲ್ಲಿ  ಮೇಕಪ್ ಆರ್ಟಿಸ್ಟ್  ಪಾತ್ರವನ್ನು ಮಾಡಿದ್ದು, ಅವರ ಪಾತ್ರವನ್ನು ತೆರೆಯ ಮೇಲೆ ನೋಡಲು ಸಾಕಷ್ಟು ಕಾತುರರಾಗಿದ್ದಾರೆ..  ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಬಹುತೇಕ ಮುಗಿದಿದ್ದು, ಸಧ್ಯಕ್ಕೆ ಹಿನ್ನೆಲೆ ಸಂಗೀತದ ಕೆಲಸ ನಡೆಯುತ್ತಿದ್ದು, ವರ್ಷಾಂತ್ಯದೊಳಗೆ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿ ಚಿತ್ರತಂಡವಿದೆ.       ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರವನ್ನು ಹೊಂದಿರುವ ಸಿನೆಮಾ, ಮನೋರಂಜನೆಯ ಜೊತೆಗೆ ಸಾಕಷ್ಟು ಹೊಸ ವಿಷಯಗಳನ್ನು ಒಳಗೊಂಡಿದ್ದು, ಪ್ರೇಕ್ಷಕರು ಸಿನೆಮಾವನ್ನು ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ.  . ಲಿಖಿತ್ ಶೆಟ್ಟಿಗೆ ನಾಯಕಿಯರಾಗಿ ಖುಷೀ ರವಿ ಮತ್ತು ತೇಜಸ್ವಿನಿ ಶರ್ಮ ಅಭಿನಯಿಸಿದ್ದು, ಚಿತ್ರದುರ್ಗದ ಪ್ರತಿಭೆ   ಎನ್. ವಿನಾಯಕ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಸಿನೆಮಾಗೆ  ಹರೀಶ್ ಗೌಡ ಸಂಭಾಷಣೆ ಬರೆದಿದ್ದು, ಮನೋಹರ್ ಜೋಷಿ ಛಾಯಾಗ್ರಹಣ,  ಗುರು ಕಿರಣ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

 

ಉಳಿದಂತೆ ತಾರಾಗಣದಲ್ಲಿ ರಂಗಾಯಣ ರಘು, ಸೂರಜ್ ಲೋಕ್ರೆ,  ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ಚೇತನ್ ದುರ್ಗಾ, ನಾಗೇಂದ್ರ ಅರಸ್, ಮೂಗು ಸುರೇಶ್ ಸೇರಿದಂತೆ ಬಹು ದೊಡ್ಡ ತಾರಾ ಬಳಗವೇ ಇದೆ.

Share This Article