ಬೆಂಗಳೂರು: ಅದಮ್ಯ ಚೇತನ, ಬಡವರ ಬಂಧು, ಧೀಮಂತ ನಾಯಕ, ಸ್ನೇಹ ಜೀವಿ, ರಾಜ್ಯ ಬಿಜೆಪಿಯ ಆಧಾರ ಸ್ತಂಭ ಅನಂತ್ ಕುಮಾರ್ ಇನ್ನು ನೆನಪು ಮಾತ್ರ. ಶ್ವಾಸಕೋಶದ ಕ್ಯಾನರ್ ನಿಂದ ಬಳಲುತ್ತಿದ್ದ ಅವರು ಸೋಮವಾರ ಬೆಳಗಿನ ಜಾವ 2 ಗಂಟೆಗೆ ಬೆಂಗಳೂರಿನ ಶಂಕರ ಆಸ್ಪತ್ರೆಯಲ್ಲಿ ವಿಧಿವಶರಾದರು. ಅನಂತ್ ಕುಮಾರ್ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ನಡೆಸಲಾಗುತ್ತಿದೆ.
ಅನಂತ್ ಕುಮಾರ್ ಪಾರ್ಥಿವ ಶರೀರವನ್ನು ನಿನ್ನೆ ಅವರ ಬಸವನಗುಡಿ ನಿವಾಸದಲ್ಲಿ ಇರಿಸಲಾಗಿತ್ತು. ಈ ವೇಳೆ ಪ್ರಧಾನಿ ಮೋದಿ, ರಾಜ್ಯ ನಾಯಕರು ನಿವಾಸಕ್ಕೆ ತೆರಳಿ ಅಂತಿಮ ದರ್ಶನವನ್ನು ಪಡೆದರು. ಇಂದು ಬೆಳಗ್ಗೆ ಬಿಜೆಪಿ ಕಚೇರಿ ಇರಿಸಿದ ಬಳಿಕ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
Advertisement
Advertisement
ಬೆಳಗ್ಗೆ 8 ರಿಂದ 9 ಗಂಟೆವರೆಗೆ ಬಿಜೆಪಿ ಕಾರ್ಯಕರ್ತರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನಂತರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯ-ರಾಷ್ಟ್ರದಿಂದ ಗಣ್ಯಾತಿಗಣ್ಯರು, ಬೆಂಬಲಿಗರು ಅಪಾರ ಅಭಿಮಾನಿಗಳು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದು ಬಿಗಿಭದ್ರತೆ ಕೈಗೊಳ್ಳಲಾಗಿದೆ.
Advertisement
ಮಧ್ಯಾಹ್ನ 1 ಗಂಟೆಯ ಬಳಿಕ ಚಾಮರಾಜಪೇಟೆಯ ಟಿ.ಆರ್.ಮಿಲ್ ರುದ್ರಭೂಮಿಯಲ್ಲಿ ವೈದಿಕ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
Advertisement
ಇವತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಪಕ್ಷದ ಅಧ್ಯಕ್ಷ ಅಮಿತ್ ಶಾ, ಅಡ್ವಾಣಿ ಸೇರಿದಂತೆ ಬಿಜೆಪಿ ಅಗ್ರ ನಾಯಕರು ಅಶ್ರುತರ್ಪಣ ಸಲ್ಲಿಸಲಿದ್ದಾರೆ.
ಸೋಮವಾರ ರಾತ್ರಿ ಆಗಮಿಸಿದ ಪ್ರಧಾನಿ ಮೋದಿ ಅವರು ಅನಂತಕುಮಾರ್ ಅವರ ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಪ್ರಧಾನಿ ಮೋದಿಗೆ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ರಾಜ್ಯಪಾಲ ವಜೂಭಾಯ್ ವಾಲಾ ಸಾಥ್ ನೀಡಿದರು. ಸಂಪುಟ ಸಹೋದ್ಯೋಗಿಗಳಾದ ಜೆಪಿ ನಡ್ಡಾ, ಪ್ರಕಾಶ್ ಜಾವಡೇಕರ್, ಮೊನ್ ರಾಧಾಕೃಷ್ಣನ್, ಸಾದ್ವಿ ನಿರಂಜನ್ ಜ್ಯೋತಿ, ರಾಮದಾಸ್ ಅಠಾವಳೆ, ಅಶ್ವಿನ್‍ಕುಮಾರ್ ಚೌಬೆ, ಅನಂತಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ, ಸ್ಪೀಕರ್ ಸುಮಿತ್ರಾ ಮಹಾಜನ್, ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಬಿಹಾರ ಡಿಸಿಎಂ ಸುಶೀಲ್ ಮೋದಿ, ಹರಿಯಾಣ ಕೃಷಿ ಸಚಿವ ಓಂ ಪ್ರಕಾಶ್ ಧನಕರ್ ಕೂಡ ನಿನ್ನೆಯೇ ಅಂತಿಮ ದರ್ಶನ ಪಡೆದರು.
ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ಪಾರ್ಥಿವ ಶರೀರ ಮೆರವಣಿಗೆ ಸಾಗಲಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಆಗದಂತೆ 15 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಯಾವ ರಸ್ತೆಯಲ್ಲಿ ಮೆರವಣಿಗೆ ಹೋಗುತ್ತದೆ?
ಅನಂತ ಕುಮಾರ್ ನಿವಾಸದಿಂದ – ಬಿಜೆಪಿ ಕಚೇರಿ
ಅನಂತಕುಮಾರ್ ನಿವಾಸ – ಎಸ್‍ಪಿ ಸಮಾಜ್ ರಸ್ತೆ – ಬಸವನಗುಡಿ ಮೆಡಿಕಲ್ ಸೆಂಟರ್ ಬಳಿ ಎಡ ತಿರುವು – ಲಾಲ್‍ಬಾಗ್ ಪಶ್ಚಿಮ ದ್ವಾರ – ಆರ್.ವಿ.ರಸ್ತೆ – ಮಿನರ್ವ ಸರ್ಕಲ್ – ಭಾರತಿ ಜಂಕ್ಷನ್ – ಶಿವಾಜಿ ಜಂಕ್ಷನ್ – ಸ್ಟಾಕ್ 14 ಜಂಕ್ಷನ್ – ಎನ್.ಆರ್.ಸ್ಕ್ವೇರ್ – ಪೊಲೀಸ್ ಕಾರ್ನರ್ – ಮೈಸೂರು ಬ್ಯಾಂಕ್ ಬಲ ತಿರುವು -ಮಹಾರಾಣಿ ಜಂಕ್ಷನ್ – ಓಲ್ಡ್ ಹೈ ಗ್ರೌಂಡ್ ಪೊಲೀಸ್ ಸ್ಟೇಷನ್ ಜಂಕ್ಷನ್ – ಬಿ ನಾಟ್ ಟು ಜಂಕ್ಷನ್ – ಪಿಜಿ ಹಳ್ಳಿ ಜಂಕ್ಷನ್ – ಕಾವೇರಿ ಜಂಕ್ಷನ್ ಎಡತಿರುವು – ಭಾಷ್ಯಂ ಸರ್ಕಲ್ – ಸರ್ಕಲ್ ಮಾರಮ್ಮ ಜಂಕ್ಷನ್ ಎಡ ತಿರುವು – ಸಂಪಂಗಿ ರಸ್ತೆ – ಮೆಗ್ರಾಸ್ ರಸ್ತೆ – ಸಂಪಿಗೆ ರಸ್ತೆ – ಬಿಜೆಪಿ ಕಚೇರಿ
ಬಿಜೆಪಿ ಕಚೇರಿಯಿಂದ – ನ್ಯಾಷನಲ್ ಕಾಲೇಜು ಮೈದಾನ
ಬಿಜೆಪಿ ಕಚೇರಿ ಬಳಿ ಎಡ ತಿರುವು – ಕಾಡು ಮಲ್ಲೇಶ್ವರ ದೇಗುಲ ಬಳಿ ಬಲ ತಿರುವು – ಸಂಪಿಗೆ ರಸ್ತೆ ಬಳಿ ಬಲ ತಿರುವು – ಸ್ಯಾಂಕಿ ಟ್ಯಾಂಕಿ ರಸ್ತೆ – ಭಾಷ್ಯಂ ಸರ್ಕಲ್ – ಕಾವೇರಿ ಜಂಕ್ಷನ್ – ಪಿಜಿ ಹಳ್ಳಿ ಜಂಕ್ಷನ್ – ಬಿ ನಾಟ್ ಟು ಜಂಕ್ಷನ್ – ಓಲ್ಡ್ ಹೈ ಗ್ರೌಂಡ್ ಪೊಲೀಸ್ ಸ್ಟೇಷನ್ ಜಂಕ್ಷನ್ – ಎಲ್‍ಆರ್‍ಡಿ ಜಂಕ್ಷನ್ ಬಳಿ ಬಲ ತಿರುವು – ಸ್ಟಾಕ್ ಟೆನ್ ಜಂಕ್ಷನ್ – ಸಿಐಡಿ ಜಂಕ್ಷನ್ – ಮಹಾರಾಣಿ ಕಾಲೇಜ್ ಸರ್ವೀಸ್ ರೋಡ್ ಎಡ ತಿರುವು – ಕೆ.ಆರ್.ಸರ್ಕಲ್ – ನೃಪತುಂಗ ರಸ್ತೆ – ಪೊಲೀಸ್ ಕಾರ್ನರ್ – ಕಾರ್ಪೊರೇಷನ್ ಸರ್ಕಲ್ – ಎನ್.ಆರ್.ಸ್ಕ್ವೇರ್ ಬಳಿ ಎಡ ತಿರುವು – ದೇವನಾಗ ಜಂಕ್ಷನ್ ಬಳಿ ಬಲ ತಿರುವು – ಪೂರ್ಣಿಮಾ ಜಂಕ್ಷನ್ – ಊರ್ವಶಿ ಜಂಕ್ಷನ್ – ಸ್ಟಾಕ್ 35 ಜಂಕ್ಷನ್ – ವಾಣಿ ವಿಲಾಸ್ ರಸ್ತೆ – ಪಂಪ ಮಹಾಕವಿ ರಸ್ತೆ ಎಡ ತಿರುವು – ನ್ಯಾಷನಲ್ ಕಾಲೇಜು ಗ್ರೌಂಡ್
ನ್ಯಾಷನಲ್ ಕಾಲೇಜು ಮೈದಾನದಿಂದ – ರುದ್ರಭೂಮಿ
ನ್ಯಾಷನಲ್ ಕಾಲೇಜ್ ಮೈದಾನದಿಂದ – ಪಂಪ ಮಹಾಕವಿ ರಸ್ತೆ ಎಡ ತಿರುವು – ರಾಮಕೃಷ್ಣ ಆಶ್ರಮ ಜಂಕ್ಷನ್ – ಬುಲ್ ಟೆಂಪಲ್ ರಸ್ತೆ – ಉಮಾ ಥಿಯೇಟರ್ ಜಂಕ್ಷನ್ – ಚಾಮರಾಜಪೇಟೆ ಜಂಕ್ಷನ್ – ಐಒಸಿ ಪೆಟ್ರೋಲ್ ಬಂಕ್ – ಟಿ.ಆರ್.ಮಿಲ್ ಜಂಕ್ಷನ್ – ವಿಠ್ಠಲ ದೇವಾಲಯ – ಚಾಮರಾಜಪೇಟೆಯ ರುದ್ರಭೂಮಿ
You may pay your last respects and attend final rites of Shri Ananth Kumar ji as per the schedule below. pic.twitter.com/j2OErNazQ9
— BJP (@BJP4India) November 12, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews