ಇಸ್ಲಾಮಾಬಾದ್: ತೀವ್ರ ಇಂಧನ ಕೊರತೆಯನ್ನು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ (Pakistan) ಮತ್ತೊಂದು ಸಂಕಷ್ಟ ಎದುರಾಗಿದೆ. ಬಾಕಿ ಉಳಿದಿರುವ ಪಾವತಿಗಳಿಂದಾಗಿ ಇಂಧನ ಪೂರೈಕೆ ಮೇಲೆ ನಿರ್ಬಂಧಗಳಾಗಿರುವ ಹಿನ್ನೆಲೆ ಇದೀಗ ಹತ್ತಾರು ವಿಮಾನಗಳು ರದ್ದಾಗಿವೆ.
ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (PIA) ಇಂಧನದ ಕೊರತೆಯ ಕಾರಣ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಗಳು ಸೇರಿದಂತೆ 48 ವಿಮಾನಗಳನ್ನು ರದ್ದುಗೊಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪಿಐಎ ವಕ್ತಾರರು, ದೇಶದಲ್ಲಿ ದೈನಂದಿನ ವಿಮಾನಗಳಿಗೆ ಸೀಮಿತ ಇಂಧನ ಪೂರೈಕೆ ಮತ್ತು ಕಾರ್ಯಾಚರಣೆಯ ಸಮಸ್ಯೆಗಳಿಂದ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಕೆಲವು ವಿಮಾನಗಳ ನಿರ್ಗಮನವನ್ನು ಮರುನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಇಂಧನದ ಕೊರತೆಯಿಂದಾಗಿ 13 ದೇಶೀಯ ವಿಮಾನಗಳು ಮತ್ತು ಅವುಗಳಲ್ಲಿ 11 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಸಂಚರಿಸುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇತರ 12 ವಿಮಾನಗಳು ವಿಳಂಬವಾಗಿವೆ ಎಂದು ಅವರು ಹೇಳಿದ್ದಾರೆ. ರದ್ದಾದ ವಿಮಾನಗಳ ಪ್ರಯಾಣಿಕರನ್ನು ಪರ್ಯಾಯ ವಿಮಾನಗಳಿಗೆ ಸ್ಥಳಾಂತರಿಸಲಾಗಿದೆ. ಈ ನಿರ್ಧಾರದ ನಂತರ ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸಲು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೊದಲು ಪಿಐಎ ಕಸ್ಟಮರ್ ಕೇರ್, ಪಿಐಎ ಕಚೇರಿಗಳು ಅಥವಾ ಅದರ ಟ್ರಾವೆಲ್ ಏಜೆಂಟ್ ಅನ್ನು ಸಂಪರ್ಕಿಸಲು ಪ್ರಯಾಣಿಕರಿಗೆ ಸಲಹೆ ನೀಡಿದೆ. ಇದನ್ನೂ ಓದಿ: ಅರಬ್ ನಾಯಕರ ಜೊತೆಗಿನ ಬೈಡೆನ್ ಮೀಟಿಂಗ್ ಕ್ಯಾನ್ಸಲ್
Advertisement
Advertisement
ಇಂಧನ ಕೊರತೆ ಏಕೆ?
ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ್ ಸ್ಟೇಟ್ ಆಯಿಲ್‌ಗೆ (PSO) ಪಾವತಿ ಬಾಕಿ ಉಳಿದಿರುವ ಇನ್ನೆಲೆ ಪಿಐಎ ವಿಮಾನಗಳಿಗೆ ಇಂಧನ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಕುಸಿತದ ಅಂಚಿನಲ್ಲಿರುವ ಮತ್ತು ಭಾರೀ ಸಾಲಗಳಿಂದ ಖಾಸಗೀಕರಣದತ್ತ ಮುಖ ಮಾಡಿರುವ ವಿಮಾನಯಾನದ ಭವಿಷ್ಯ ಅನಿಶ್ಚಿತವಾಗಿ ಉಳಿದಿದೆ. ಇದನ್ನೂ ಓದಿ: ಮೈದಾನದಲ್ಲಿ ನಮಾಜ್ – ರಿಜ್ವಾನ್ ವಿರುದ್ಧ ದೂರು ದಾಖಲು
Web Stories