ಇಸ್ಲಾಮಾಬಾದ್: ಭಾನುವಾರ ಅಮೆರಿಕದ ಹ್ಯೂಸ್ಟನ್ ನಗರದ ಎನ್‍ಆರ್ ಜಿ ಕ್ರೀಡಾಂಗಣದಲ್ಲಿ ‘ಹೌಡಿ ಮೋದಿ’ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಆದರೆ ನೆರೆಯ ಪಾಕಿಸ್ತಾನ ಹೊಟ್ಟೆಕಿಚ್ಚಿನಿಂದ ಹತಾಶೆ ತಾಳಲಾರದೆ ಈ ಕಾರ್ಯಕ್ರಮ ಫ್ಲಾಪ್ ಶೋ ಎಂದಿದೆ.
ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್ ಚೌಧರಿ ಅವರು ‘ಹೌಡಿ ಮೋದಿ’ ಕಾರ್ಯಕ್ರಮವನ್ನು ಫ್ಲಾಪ್ ಶೋ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಮತ್ತು ‘ಹೌಡಿ ಮೋದಿ’ ಯಶಸ್ವಿ ಕಾರ್ಯಕ್ರಮವನ್ನು ಕಂಡು ಹೊಟ್ಟೆ ಉರಿದುಕೊಂಡು ಈ ರೀತಿ ಟ್ವೀಟ್ ಮಾಡಿ ಪಾಕಿಸ್ತಾನ ಸಚಿವ ತಮ್ಮ ಹತಾಶೆ ಹೊರಹಾಕಿದ್ದಾರೆ. ಇದನ್ನೂ ಓದಿ:ಹ್ಯೂಸ್ಟನ್‍ನಲ್ಲಿ ಕನ್ನಡ ಡಿಂಡಿಮ
Advertisement
Hopeless show by #ModiJanta after spending Billions of Rs this is what they could gather from all over USA Canada and beyond, shows money can’t buy everything #ModiInHouston https://t.co/3IshLXfXs3
— Ch Fawad Hussain (@fawadchaudhry) September 22, 2019
Advertisement
‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಮೋದಿಯ ಪ್ರದರ್ಶನ ನಿರಾಶದಾಯಕವಾಗಿದೆ. ಬಿಲಿಯನ್‍ಗಳಷ್ಟು ಹಣ ಖರ್ಚು ಮಾಡಿ ಅಮೆರಿಕಾ, ಕೆನಡಾ ಮತ್ತು ಇತರೆ ಹಲವು ದೇಶಗಳಿಂದ ಕಾರ್ಯಕ್ರಮಕ್ಕೆ ಜನರನ್ನು ಒಟ್ಟುಗೂಡಿಸಲಾಗಿದೆ ಅಷ್ಟೆ. ಹಣದಿಂದ ಎಲ್ಲವನ್ನು ಖರೀದಿಸಲು ಆಗುವುದಿಲ್ಲ ಎನ್ನುವುದನ್ನು ಇದು ನಿರೂಪಿಸಿದೆ ಎಂದು ಬರೆದು #ModiJanta ಮತ್ತು #ModiInHouston ಹ್ಯಾಷ್‍ಟ್ಯಾಗ್ ಜೊತೆಗೆ ಫವಾದ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ಮತ್ತೆ ಅಮೆರಿಕದಲ್ಲಿ ಇಮ್ರಾನ್ ಖಾನ್‍ಗೆ ಭಾರೀ ಮುಖಭಂಗ
Advertisement
Dear Mr. Hussain, I firmly believe that a large number of Pakistani's are intelligent and they will not trust you. Here is the actual video. Burnol moment for you. pic.twitter.com/7KBSK4ZUfM
— THE BALD MAN ???? (@not_done_) September 22, 2019
Advertisement
ಈ ಟ್ವೀಟ್ ಈಗ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಫವಾದ್ ಅವರ ಟ್ವೀಟ್‍ಗೆ ರೀ-ಟ್ವೀಟ್ ಮಾಡಿ ಭಾರತೀಯರು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮ್ಮ ಮೂರ್ಖತನದ ಮಾತನ್ನು ನಂಬಲು ಪಾಕಿಸ್ತಾನದ ಪ್ರಜೆಗಳು ಮೂರ್ಖರಲ್ಲ. ಅವರು ನಿಮ್ಮನ್ನು ನಂಬಲ್ಲ. ಸುಳ್ಳು ಸುದ್ದಿಯ ವಿಡಿಯೋ ಇಟ್ಟುಕೊಂಡು ಮಾತನಾಡಬೇಡಿ. ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಜನಸಾಗರ ಹೇಗಿದೆ ನೋಡಿ ಎಂದು ಕಾರ್ಯಕ್ರಮದ ವಿಡಿಯೋ ರೀ-ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.
https://twitter.com/pooja35956823/status/1175799771971252224
ಹೌಡಿ ಮೋದಿ ಕಾರ್ಯಕ್ರಮದಲ್ಲಿ ಇತರೆ ದೇಶದ ಪ್ರಜೆಗಳನ್ನು ಹೊರತುಪಡಿಸಿ ಅನಿವಾಸಿ ಭಾರತೀಯರೇ ಬರೋಬ್ಬರಿ 50 ಸಾವಿರ ಮಂದಿ ಸೇರಿದ್ದರು. ಮೋದಿ ಜನಪ್ರಿಯತೆ ಏನು ಎಂದು ಇದನ್ನು ನೋಡಿದರೆ ಗೊತ್ತಾಗುತ್ತೆ ಎಂದು ನೆಟ್ಟಿಗರು ಪಾಕ್ ಸಚಿವರಿಗೆ ಟಾಂಗ್ ಕೊಟ್ಟಿದ್ದಾರೆ.