Connect with us

International

ಮತ್ತೆ ಅಮೆರಿಕದಲ್ಲಿ ಇಮ್ರಾನ್ ಖಾನ್‍ಗೆ ಭಾರೀ ಮುಖಭಂಗ

Published

on

ನ್ಯೂಯಾರ್ಕ್: ಸೌದಿ ವಿಮಾನದ ಮೂಲಕ ನ್ಯೂಯಾರ್ಕ್ ಗೆ ಬಂದಿಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಭಾರೀ ಮುಖಭಂಗವಾಗಿದೆ.

ಓರ್ವ ದೇಶದ ಪ್ರಧಾನಿ ಆಗಮಿಸಿದ ಸರ್ಕಾರದ ಪರವಾಗಿ ಹಿರಿಯ ಅಧಿಕಾರಿಗಳು ಬರಮಾಡಿಕೊಳ್ಳಬೇಕು. ಸಾಮಾನ್ಯವಾಗಿ ದೇಶದ ಪ್ರಧಾನಿಗಳೊಬ್ಬರು ಆಗಮಿಸಿದ ಎಲ್ಲ ದೇಶಗಳು ಅದ್ಧೂರಿಯಾಗಿ ಬರಮಾಡಿಕೊಳ್ಳುತ್ತೇವೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನ್ಯೂಯಾರ್ಕ್ ಗೆ ಬಂದಿಳಿದಾಗ ಯುಎಸ್‍ನ ಯಾವ ಹಿರಿಯ ಅಧಿಕಾರಿಗಳು ಬಂದಿರಲಿಲ್ಲ. ಈ ಮೂಲಕ ಮತ್ತೊಮ್ಮೆ ಪಾಕಿಸ್ತಾನ ಜಾಗತೀಕ ಮಟ್ಟದಲ್ಲಿ ತೀವ್ರ ಮುಖಭಂಗವನ್ನು ಅನುಭವಿಸಿದೆ.

ಇಮ್ರಾನ್ ಖಾನ್ ಬಂದಿಳಿದಾಗ ಅವರಿಗೆ ಹಾಸಲಾಗಿದ್ದ ರೆಡ್ ಕಾರ್ಪೆಟ್ ಸಹ ಚಿಕ್ಕದಾಗಿತ್ತು. ಕೆಲ ಅಧಿಕಾರಿಗಳು ಬರಿಗೈಯಲ್ಲಿ ಬಂದು ಔಪಚಾರಿಕವಾಗಿ ಇಮ್ರಾನ್ ಖಾನ್ ಅವರನ್ನು ಸ್ವಾಗತ ಮಾಡಿಕೊಂಡರು.

ಶನಿವಾರ ಹ್ಯೂಸ್ಟನ್ ನಗರಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅದ್ಧೂರಿಯಾಗಿ ರೆಡ್ ಕಾರ್ಪೆಟ್ ಸ್ವಾಗತ ನೀಡಲಾಗಿತ್ತು. ಪ್ರತಿಷ್ಠಿತ ಹೌಡಿ ಮೋದಿ ಕಾರ್ಯಕ್ರಮಕ್ಕೆ ಸ್ವಾಗತಿಸಲು ವಾಣಿಜ್ಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ನಿರ್ದೇಶಕ ಕ್ರಿಸ್ಟೋಫರ್ ಓಲ್ಸನ್, ಭಾರತದ ಯುಎಸ್ ರಾಯಭಾರಿ ಕೆನ್ನೆತ್ ಜಸ್ಟರ್ ಮತ್ತು ಅಮೆರಿಕದ ಭಾರತೀಯ ರಾಯಭಾರಿ ಹರ್ಷ್ ವರ್ಧನ್ ಶ್ರೀಂಗ್ಲಾ ಅವರು ಆಗಮಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬರಮಾಡಿಕೊಂಡಿದ್ದರು. ಸದ್ಯ ನೆಟ್ಟಿಗರು ಎರಡು ವಿಡಿಯೋಗಳನ್ನು ಸೇರಿಸಿ ಪಾಕಿಸ್ತಾನದ ಕಾಲೆಳೆಯುತ್ತಿದ್ದಾರೆ. ಜುಲೈನಲ್ಲಿ ಯುಸ್ ಗೆ ಮೊದಲ ಬಾರಿ ಜುಲೈನಲ್ಲಿ ಭೇಟಿ ನೀಡಿದ್ದರು. ಅಂದು ಸಹ ಇಮ್ರಾನ್ ಖಾನ್ ಸ್ವಾಗತಕ್ಕೆ ಯಾವ ಹಿರಿಯ ಅಧಿಕಾರಿಗಳು ಬಂದಿರಲಿಲ್ಲ.