ಹಣ್ಣುಗಳು ಸೇವೆನೆ ಆರೋಗ್ಯಕ್ಕೆ ಒಳ್ಳೆಯದು ಎಂದು ಗೊತ್ತಿರುವ ವಿಚಾರವಾಗಿದೆ. ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸಲು ಹಣ್ಣುಗಳು ಸಹಾಯ ಮಾಡುತ್ತವೆ. ನೈಸರ್ಗಿಕವಾಗಿ ಸಿಗುವ ಹಣ್ಣುಗಳು ಅನೇಕ ಪೌಷ್ಟಿಕ ಗುಣಗಳನ್ನು ಹೊಂದಿರುತ್ತವೆ.
ಕಿವಿ ಹಣ್ಣು: ಕ್ಯಾನ್ಸರ್ ರೋಗವನ್ನು ತಡೆಯುವ ಆಂಟಿ ಆಕ್ಸಿಡಂಟ್ ಸತ್ವವೂ ಕಿವಿ ಹಣ್ಣನಲ್ಲಿದೆ. ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್‌ಗಳ ಮೂಲವೆಂದು ಪರಿಗಣಿಸಲಾಗುವ ಕಿವಿ ಹಣ್ಣಿನ ಸೇವನೆಯಿಂದ ಡಿಎನ್‍ಎ ಉತ್ತಮಗೊಳಿಸಬಹುದು. ಇದನ್ನೂ ಓದಿ: ಮೆಂತೆ ಸೊಪ್ಪಿನ ಸೇವನೆಯಿಂದ ಸಿಗಲಿದೆ ಆರೋಗ್ಯಕರ ಅಂಶ
Advertisement
Advertisement
ಕಿತ್ತಳೆ ಹಣ್ಣು: ಕಿತ್ತಳೆ ರಸ ಮತ್ತು ಕಿತ್ತಳೆ ಹಣ್ಣುಗಳು ಮನುಷ್ಯನ ಆರೋಗ್ಯಕರ ರಕ್ತದೊತ್ತಡ, ಫೋಲಿಕ್ ಆಮ್ಲ ಮತ್ತು ಉತ್ಕರ್ಷಣ ನಿರೋಧಕ ಎಂದು ಕರೆಸಿಕೊಂಡಿರುವ ವಿಟಮಿನ್ ಸಿಯ ಉತ್ತಮ ಮೂಲವಾದ ಪೊಟ್ಯಾಸಿಯಮ್ ಅನ್ನು ಒದಗಿಸುತ್ತದೆ.
Advertisement
Advertisement
ಸೇಬುಹಣ್ಣು: ಸೇಬಿನಲ್ಲಿ ಅತಿ ಹೆಚ್ಚಿನ ಮಟ್ಟದ ಫೈಬರ್ ಮತ್ತು ವಿಟಮಿನ್, ಖನಿಜಾಂಶಗಳಿವೆ. ಇದು ಪೆಕ್ಟಿನ್ ಎಂಬ ಅಂಶವನ್ನು ಒಳಗೊಂಡಿದ್ದು, ಕರುಳಿನ ಆರೋಗ್ಯವನ್ನು ಉತ್ತೇಜಿಸುವ ಕೆಲಸ ಮಾಡುತ್ತದೆ. ಇದನ್ನೂ ಓದಿ: ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರಲಿ
ಸೀಬೆಹಣ್ಣು: ವಿಟಮಿನ್ ಎ, ಕಾಪರ್, ಮತ್ತು ನಾರಿನಂಶವಿದೆ. ಚಳಿಗಾಲದಲ್ಲಿ ಸೀಬೆ ಹಣ್ಣನ್ನು ತಿನ್ನುವುದರಿಂದ ಜೀವಕೋಶದ ಹಾನಿ ಮತ್ತು ಉರಿಯೂತವನ್ನು ತಡೆಯುತ್ತದೆ, ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.
ಬಾಳೆಹಣ್ಣು: ಬಾಳೆಹಣ್ಣು ಜೀರ್ಣಕ್ರಿಯೆ ಸಮಸ್ಯೆಗೆ ಒಳ್ಳೆಯದು. ಜೀರ್ಣಕ್ರಿಯೆಯನ್ನು ಸುಧಾರಿಸಲು ಬಾಳೆಹಣ್ಣು ತಿನ್ನುವುದಾಗಿ ತಜ್ಞರು ಸಲಹೆ ನೀಡುತ್ತಾರೆ. ಅದಕ್ಕಾಗಿಯೇ ಊಟವಾದ ತಕ್ಷಣ ಒಂದು ಬಾಳೆಹಣ್ಣು ತಿನ್ನುವಂತೆ ಸಲಹೆ ನೀಡುವುದು. ಬಾಳೆಹಣ್ಣು ಸೇವಿಸುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಸಿಕೊಳ್ಳಬಹುದು. ಇದನ್ನೂ ಓದಿ: ಕಿವಿಹಣ್ಣು ಸೇವಿಸಿ ಆರೋಗ್ಯ ಸುಧಾರಿಸಿಕೊಳ್ಳಿ
ಸೀತಾಫಲ: ಸೀತಾಫಲ ಹಣ್ಣಿನಲ್ಲಿ ಪೊಟ್ಯಾಶಿಯಂ, ಫೈಬರ್ ಮತ್ತು ವಿಟಮಿನ್ ಅಧಿಕವಾಗಿರುತ್ತದೆ. ಜತೆಗೆ ಸೀತಾಫಲ ಹಣ್ಣು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೀಗಿರುವಾಗ ಮನೆಯಲ್ಲಿಯೇ ಬೆಳೆದ ಸೀತಾಫಲ ಹಣ್ಣನ್ನು ಸೇವಿಸುವ ಮೂಲಕ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.